ನವದೆಹಲಿ : ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೊಂದ ಆರೋಪ ಹೊತ್ತಿರುವ ನಾಲ್ವರು ಭಾರತೀಯ ಪ್ರಜೆಗಳಿಗೆ ಕೆನಡಾದ ನ್ಯಾಯಾಲಯ ಜಾಮೀನು ನೀಡಿದೆ.
ನಾಲ್ವರು ಆರೋಪಿ ಭಾರತೀಯ ನಾಗರಿಕರಾದ ಕರಣ್ ಬ್ರಾರ್, ಅಮನ್‌ದೀಪ್ ಸಿಂಗ್, ಕಮಲ್‌ಪ್ರೀತ್ ಸಿಂಗ್ ಮತ್ತು ಕರಣ್‌ಪ್ರೀತ್ ಸಿಂಗ್ ಅವರ ಮೇಲೆ ಪ್ರಥಮ ದರ್ಜೆ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ವಿಚಾರಣೆಯನ್ನು ಬ್ರಿಟಿಷ್ ಕೊಲಂಬಿಯಾ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲಾಗಿದ್ದು, ಮುಂದಿನ ವಿಚಾರಣೆ ಫೆಬ್ರವರಿ 11 ಕ್ಕೆ ನಿಗದಿಯಾಗಿದೆ.
ಖಲಿಸ್ತಾನ್ ಪರ ನಾಯಕ ಹರ್ದೀಪ್ ನಿಜ್ಜರ್ ಅವರನ್ನು ಜೂನ್ 2023 ರಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಹತ್ಯೆ ಮಾಡಲಾಯಿತು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತ ಸರ್ಕಾರವು ಈ ಕೊಲೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದ ನಂತರ ಈ ಪ್ರಕರಣ ಜಾಗತಿಕ ಗಮನ ಸೆಳೆಯಿತು. ಭಾರತವು ಆರೋಪಗಳನ್ನು ನಿರಾಕರಿಸಿದ್ದು, ಅವುಗಳನ್ನು “ಆಧಾರರಹಿತ” ಎಂದು ಕರೆದಿದೆ.