ಬೆಂಗಳೂರು : ಜಯ ಮೃತ್ಯುಂಜಯ ಸ್ವಾಮೀಜಿ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸ್ವಾಮೀಜಿ ಇಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯವೇ ಆಗಿಲ್ಲ ಅಂತ ಮಹಿಳೆ ಹೇಳಿಕೆ ನೀಡಿದ್ದಾಳೆ. ಈ ವಿಚಾರವಾಗಿ ಮಹಿಳೆ ವಿಡಿಯೋ ರಿಲೀಸ್ ಮಾಡಿ ಸ್ಪಷ್ಟನೆ ಕೊಟ್ಟಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ವಿಡಿಯೋದಲ್ಲಿ ನನ್ನ ಅವರ ನಡುವಿನ ಸಂಬಂಧ ಭಕ್ತೆ ಹಾಗೂ ಗುರುವಿನ ಸಂಬಂಧ ಇದೆ. ನಾನು ಸ್ವಾಮೀಜಿ ವಿರುದ್ಧ ಯಾವುದೇ ದೂರು ನೀಡಿಲ್ಲ.ನನ್ನ ಹೆಸರಿನಲ್ಲಿ ಬೇರೆ ಯಾರು ದೂರು ನೀಡಿದ್ದಾರೆ. ಗುರುಗಳು ನನ್ನ ಜೊತೆ ಅಸಭ್ಯವಾಗಿ ವರ್ತನೆ ಮಾಡಿಲ್ಲ. ನಾವು ಕೂಡ ಗುರುಗಳಿಗೆ ಕೆಟ್ಟ ಶಬ್ದದಿಂದ ಬೈದಿಲ್ಲ. ವಿಜಯಪುರದಲ್ಲಿ ಗಲಾಟೆ ವೇಳೆ ಮಾತಾಡಬೇಕು ಎಂದು ಕರೆದಿದ್ದು. ಅದನ್ನು ಬಿಟ್ಟು ನಾವು ಗಲಾಟೆ ಮಾಡಿಲ್ಲ.
ಸ್ವಾಮೀಜಿ ಬಳಿ ನಾವು ಯಾವುದೇ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಹಣ ಕೇಳುವ ಪರಿಸ್ಥಿತಿ ನಮಗೆ ಬಂದಿಲ್ಲ ನಮ್ಮ ನಡುವೆ ಇರುವುದು ಕೇವಲ ಭಕ್ತೆ ಹಾಗೂ ಗುರುವಿನ ಸಂಬಂಧ. ಏಪ್ರಿಲ್ 9 ರಂದು ದೂರು ನೀಡಿರುವುದು ಯಾರು ಅಂತ ಗೊತ್ತಿಲ್ಲ. ಅದೊಂದು ಸುಳ್ಳು. ಆ ದೂರನ್ನು ಯಾರು ನಂಬಬೇಡಿ ನಾನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ.ನಾಲ್ಕು ದಿನಗಳ ಬಳಿಕ ಬಂದು ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಹಿಳೆ ಸ್ಪಷ್ಟನೆ ನೀಡಿದ್ದಾಳೆ.
ಆದರೆ ಈ ಒಂದು ಪ್ರಕರಣದಲ್ಲಿ ಗಮನಿಸಬೇಕಾದ ಅಂಶ ಎಂದರೆ ಫೆಬ್ರುವರಿಯಲ್ಲಿ ಕಗ್ಗೋಡದಲ್ಲಿ ತೆರಳುತ್ತಿರುವಾಗ ಇದೇ ಮಹಿಳೆ ಹಾಗೂ ಇನ್ನೂ ಕೆಲವರು ಸ್ವಾಮೀಜಿಗಳ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಏಪ್ರಿಲ್ ನಾಲ್ಕರಂದು ಸ್ವಾಮೀಜಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಇದೀಗ ಈ ಮಹಿಳೆ ವಿಡಿಯೋ ಮೂಲಕ ಸ್ವಾಮೀಜಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೇ ಎಸಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾಳೆ. ಹಾಗಾಗಿ ಈ ಒಂದು ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಕಾದು ನೋಡಬೇಕಾಗಿದೆ.








