ನವದೆಹಲಿ: ಚುನಾವಣೆಯ ಬೆನ್ನಲ್ಲೇ ಸಾರ್ವಜನಿಕರಿಗೆ ಬೆಲೆ ಏರಿಕೆಯ ದೊಡ್ಡ ಶಾಕ್ ಎದುರಾಗಿದೆ. ಮೇ 1ರಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ (19 ಕೆಜಿ) ಸಿಲಿಂಡರ್ ದರದಲ್ಲಿ ಬರೋಬ್ಬರಿ 993 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ, ಸಾಮಾನ್ಯ ಜನರಿಗೆ ಸಮಾಧಾನಕರ ಸಂಗತಿಯೆಂದರೆ ಗೃಹ ಬಳಕೆಯ (14.2 ಕೆಜಿ) ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಪ್ರಮುಖ ನಗರಗಳಲ್ಲಿ ಇಂದಿನ ವಾಣಿಜ್ಯ ಸಿಲಿಂಡರ್ ದರಗಳು:
ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಹೊಸ ದರದ ಪಟ್ಟಿ ಹೀಗಿದೆ:
ದೆಹಲಿ: ₹2078.50 ಇದ್ದ ದರ ಈಗ ₹3071.50 ಕ್ಕೆ ಏರಿಕೆಯಾಗಿದೆ.
ಮುಂಬೈ: ವಾಣಿಜ್ಯ ಸಿಲಿಂಡರ್ ಬೆಲೆ ₹3024 ತಲುಪಿದೆ.
ಕೋಲ್ಕತ್ತಾ: ಇಲ್ಲಿ ಅತಿ ಹೆಚ್ಚು ಅಂದರೆ ₹994 ಹೆಚ್ಚಳವಾಗಿದ್ದು, ಹೊಸ ದರ ₹3202 ಆಗಿದೆ.
ಚೆನ್ನೈ: ಸಿಲಿಂಡರ್ ಬೆಲೆ ₹3237 ಕ್ಕೆ ಏರಿದೆ.
ಪಾಟ್ನಾ: ಇಲ್ಲಿ ವಾಣಿಜ್ಯ ಸಿಲಿಂಡರ್ ದರ ₹3361 ಆಗಿದೆ.
ಇಂದಿನಿಂದ ಹೊಸ ನಿಯಮ: ಒಟಿಪಿ (OTP) ಇಲ್ಲದೆ ಸಿಲಿಂಡರ್ ಸಿಗಲ್ಲ!
ಬೆಲೆ ಏರಿಕೆಯ ಜೊತೆಗೆ, ಇಂದಿನಿಂದ (ಮೇ 1) ಗ್ಯಾಸ್ ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ. ‘ಡೆಲಿವರಿ ಅಥೆಂಟಿಕೇಶನ್ ಕೋಡ್’ (DAC) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ:
ಸಿಲಿಂಡರ್ ವಿತರಣೆ ಮಾಡುವಾಗ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ.
ಈ ಕೋಡ್ ನೀಡದ ಹೊರತು ಸಿಲಿಂಡರ್ ವಿತರಣೆ ಪೂರ್ಣಗೊಳ್ಳುವುದಿಲ್ಲ.
ಒಂದು ವೇಳೆ ಮೊಬೈಲ್ ಸಂಖ್ಯೆ ಅಪ್‌ಡೇಟ್ ಇಲ್ಲದಿದ್ದರೆ, ವಿತರಕರು ಸ್ಥಳದಲ್ಲೇ ಆ್ಯಪ್ ಮೂಲಕ ಸಂಖ್ಯೆಯನ್ನು ಅಪ್‌ಡೇಟ್ ಮಾಡಿ ಕೋಡ್ ಜನರೇಟ್ ಮಾಡಲು ಅವಕಾಶವಿದೆ.
ಗಮನಿಸಿ: ಸಿಲಿಂಡರ್ ಕಾಳಸಂತೆ ತಡೆಗಟ್ಟಲು ಮತ್ತು ಸರಿಯಾದ ಗ್ರಾಹಕರಿಗೆ ತಲುಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.








