ಬೆಂಗಳೂರು : ಬೆಂಗಳೂರಲ್ಲಿ ಇಂದು ಮಧ್ಯಾಹ್ನ 2:30 ಸುಮಾರಿಗೆ ಭೀಕರವಾದ ಅಪಘಾತ ಸಂಭವಿಸಿದ್ದು ವೇಗವಾಗಿ ಬಂದಂತಹ ಲಾರಿ ಬೈಕಿಗೆ ಡಿಕ್ಕಿ ಆದ ಪರಿಣಾಮ, ಬೈಕ್ ಮೇಲಿದ್ದ ಮಹಿಳೆ ರಸ್ತೆ ಮೇಲೆ ಬಿದ್ದಿದ್ದಾಳೆ. ಈ ವೇಳೆ ಲಾರಿ ಮಹಿಳೆ ಮೇಲೆ ಹರಿದು ಆಕೆ ದೇಹ ಸಂಪೂರ್ಣ ಅಪ್ಪಚ್ಚಿಯಾಗಿರುವ ಘಟನೆ ಬೆಂಗಳೂರಿನ 8ನೇ ಮೈಲಿ ಬಳಿ ನಡೆದಿದೆ.
ಲಾರಿ ಚಾಲಕನ ಅಟ್ಟಹಾಸಕ್ಕೆ ಮಹಿಳೆಯ ದೇಹ ಅಪ್ಪಚ್ಚಿಯಾಗಿದೆ, ಬೆಂಗಳೂರಿನ ಪೀಣ್ಯಾದ 8ನೇ ಮೈಲಿ ಬಳಿ ಬೈಕ್ ಮೇಲೆ ಲಾರಿ ಹರಿದು ಭೀಕರ ಅಪಘಾತ ಸಂಭವಿಸಿದೆ. ಆದರೆ ಘಟನೆಯಲ್ಲಿ ಒಂದು ವರ್ಷದ ಮಗು ಹಾಗೂ ಗಂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೈಕ್ ಹಿಂಬದಿ ಕುಳಿತಿದ್ದ ಪತ್ನಿ ಲಕ್ಷ್ಮಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ರೊಚ್ಚಿಗೆದ್ದ ಸ್ಥಳೀಯರು ಲಾರಿ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಕಲ್ಲುತ್ತೂರಿ ಲಾರಿ ಚಾಲಕನಿಗೆ ಹಲ್ಲೆ ಮಾಡಿದ್ದಾರೆ. ತಳಕ್ಕೆ ಪಿಣ್ಯ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.