ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಈಗ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ದರ್ಶನ್ ವಿರುದ್ಧದ ಮತ್ತೊಂದು ಕೊಲೆ ಬೆದರಿಕೆ ಸಂಬಂಧಿಸಿದಂತೆ ಇದೀಗ ಭರತ್ ಎಂಬುವವರಿಂದ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೌದು ಶ್ರೀಕೃಷ್ಣ ಪರಮಾತ್ಮ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಭರತ್ ವೇಳೆ ಶೂಟಿಂಗ್ ಸಂದರ್ಭದಲ್ಲಿ ಭೇಟಿ ಮಾಡಲು ಹೋದಾಗ ನನ್ನನ್ನು ಗೊಡೌನ್ ಒಂದರಲ್ಲಿ ಕೂಡಿಹಾಕಲಾಗಿತ್ತು. ಆಗ ದರ್ಶನ್ ಮತ್ತು ಅವರ ಪಟಾಲಂ ನನಗೆ ಜೀವ ಬೆದರಿಕೆ ಹಾಕಿದ್ರು. ರೇಣುಕಾಸ್ವಾಮಿ ಗೆ ಆದ ರೀತಿ ನನಗೂ ಕೂಡಿ ಹಾಕಿ ಹೆದರಿಸುವ ಪ್ರಯತ್ನ ಆಗಿತ್ತು. ಅದೃಷ್ಟವಶಾತ್ ಅವತ್ತು ನನ್ನ ಮೇಲೆ ಹಲ್ಲೆ ಆಗದೆ ತಪ್ಪಿಸಿಕೊಂಡು ಬಂದಿದ್ದೆ ಎಂದು ಭರತ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 2022 ರಲ್ಲಿ ದೂರು ಕೊಡಲಾಗಿತ್ತು, ಆಗ ದರ್ಶನ್ ವಿಚಾರಣೆ ಮಾಡಿರಲಿಲ್ಲ. ನನ್ನ ಹಳೆಯ ಆಡಿಯೋ ಒಂದು ಈಗ ಮತ್ತೆ ವೈರಲ್ ಆಗ್ತಿದೆ. ಈ ಕಾರಣಕ್ಕೆ ದರ್ಶನ್ ಫ್ಯಾನ್ಸ್ ಅಂತ ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಹಳೆಯ ಕೇಸ್ ಮತ್ತೆ ತನಿಖೆ ಆಗಬೇಕು. ಜೊತೆಗೆ ತಮ್ಮ ಕುಟುಂಬಕ್ಕೆ ರಕ್ಷಣೆ ಬೇಕೆಂದು ಇಂದು ಮತ್ತೆ ದೂರು ನೀಡಿದ್ದಾರೆ.