ಉತ್ತರಕನ್ನಡ : ತುಮಕೂರಿನಲ್ಲಿ ಪತ್ನಿ ಅಕ್ರಮ ಸಂಬಂಧ ಹಿನ್ನೆಲೆ ಬೇರೊಬ್ಬನ ಜೊತೆಗೆ ಪತ್ನಿ, ಎಸ್ಕೇಪ್ ಆಗಿದ್ದು ಇದರಿಂದ ಮನನೊಂದು ಪತಿ ಇಬ್ಬರೂ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿದೆ. ಇದೀಗ ಇಂಥದ್ದೇ ಘಟನೆ ಮತ್ತೊಂದು ನಡೆದಿದ್ದು, ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಪತಿಯನ್ನು ರಾಘವೇಂದ್ರ ಎಂದು ತಿಳಿದು ಬಂದಿದ್ದು ಪತ್ನಿ ಮೇಘ ಅಕ್ರಮ ಸಂಬಂಧ ಹೊಂದಿದ್ದಾಳೆ. ಮೂರು ವರ್ಷ ಮಲೇಶಿಯಾದಲ್ಲಿ ರಾಘವೇಂದ್ರ ಕೆಲಸದಲ್ಲಿದ್ದ. ದಾಂಡೇಲಿ ಇಬ್ಬರು ಮಕ್ಕಳ ಜೊತೆಗೆ ಪತ್ನಿ ಮೇಘ ಇದ್ದಳು. ಪತಿ ರಾಘವೇಂದ್ರ ಬರುತ್ತಿದ್ದಂತೆ ಮೇಘ ತವರು ಮನೆಗೆ ತೆರಳಿದ್ದಾಳೆ. ಬೇರೊಬ್ಬನೊಂದಿಗೆ ಪತ್ನಿ ಮೇಘ ಅಕ್ರಮ ಸಂಬಂಧ ಹೊಂದಿದಳು. ಓಪನ್ ಆಗಿ ಪ್ರಿಯಕರ ಜೊತೆಗೆ ಫೋಟೋಗಳು ಶೇರ್ ಮಾಡುತ್ತಿದ್ದಳು.
ಅನೈತಿಕ ಸಂಬಂಧ ನಿಲ್ಲಿಸಲು ಬುದ್ಧಿ ಹೇಳಿದರು ಕೂಡ ಮೇಘ ಕೇಳಲಿಲ್ಲ. ಮಕ್ಕಳ ಮುಖ ನೋಡಿ ಬಾ ಎಂದು ಕರೆದರೂ ಕೂಡ ಪತ್ನಿ ತವರು ಮನೆ ಬಿಟ್ಟು ಬರಲಿಲ್ಲ. ಮೊದಲು ಕೈ ಕುಯ್ದುಕೊಂಡು ಪತಿ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ್ದ. ನಿನ್ನೊಂದಿಗೆ ಸಂಸಾರ ಮಾಡಲು ಆಗಲ್ಲ ಸತ್ತು ಹೋಗು ಅಂತ ಪತ್ನಿ ಮೇಘ ಹೇಳಿದ್ದಾಳೆ. ಇದರಿಂದ ಪತಿ ರಾಘವೇಂದ್ರ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಪತ್ನಿ ಮೇಘ ಕಾರಣ ಎಂದು ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು ಪ್ರಕರಣದ ಕಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.








