Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಯಿಗಳು ಆಕಳಿಸುವುದು ಕೇವಲ ನಿದ್ರೆಗಲ್ಲ! ಇದರ ಹಿಂದೆ ಅಡಗಿದೆ ಅಚ್ಚರಿಯ ಅರ್ಥಗಳು; ತಜ್ಞರು ಹೇಳುವುದೇನು?

19/04/2026 8:48 AM

​’ಬಿಂದಿ, ಸಿಂಧೂರಕ್ಕೆ ನೋ?’: ಲೆನ್ಸ್‌ಕಾರ್ಟ್ ವಿವಾದದ ಬೆನ್ನಲ್ಲೇ ಏರ್ ಇಂಡಿಯಾ ಸಿಬ್ಬಂದಿ ನಿಯಮ ವೈರಲ್; ಧಾರ್ಮಿಕ ಚಿಹ್ನೆಗಳ ನಿಷೇಧಕ್ಕೆ ವ್ಯಾಪಕ ಆಕ್ರೋಶ!

19/04/2026 8:38 AM

ಪ್ರತಿದಿನ ಬೆಳಿಗ್ಗೆ ಈ 5 ಕೆಲಸಗಳನ್ನು ಮಾಡಿದ್ರೆ ಹೊಟ್ಟೆಯ ಕೊಬ್ಬು ಕರಗುವುದು ಖಚಿತ!

19/04/2026 8:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಮುಡಾ’ ಬಳಿಕ ಮಂಡ್ಯದಲ್ಲೂ ಅಕ್ರಮ ಸೈಟ್ ಹಂಚಿಕೆ : ನಕಲಿ ಹಕ್ಕುಪತ್ರ ಸೃಷ್ಟಿಸಿ ಸಾವಿರಾರು ನಿವೇಶನಗಳ ಮಾರಾಟ!
KARNATAKA

BREAKING : ‘ಮುಡಾ’ ಬಳಿಕ ಮಂಡ್ಯದಲ್ಲೂ ಅಕ್ರಮ ಸೈಟ್ ಹಂಚಿಕೆ : ನಕಲಿ ಹಕ್ಕುಪತ್ರ ಸೃಷ್ಟಿಸಿ ಸಾವಿರಾರು ನಿವೇಶನಗಳ ಮಾರಾಟ!

By kannadanewsnow0515/11/2024 7:47 AM

ಮಂಡ್ಯ : ಈಗಾಗಲೇ ರಾಜ್ಯದಲ್ಲಿ ಮುಡಾ ಹಗರಣ ಭಾರಿ ಸದ್ದು ಮಾಡುತ್ತಿದ್ದು, ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪುರಸಭೆ ಸೈಟ್ ಮಾರಾಟದಲ್ಲೂ ಕೂಡ ಭಾರೀ ಗೋಲ್ಮಾಲ್ ಆಗಿರುವ ಆರೋಪ ಕೇಳಿ ಬರುತ್ತಿದೆ.

ಹೌದು ಮಂಡ್ಯ ಜಿಲ್ಲೆಯ ಪಾಂಡವಪುರ ಪುರಸಭೆ ಸೈಟ್ಗಳ ಮಾರಾಟದಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆಶ್ರಯ ಯೋಜನೆ ಅಡಿ ಸೈಟ್ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ. ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿ ಮಾಡಿ ಒಂದೇ ಸೈಟ್ ಹಲವರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಳ್ಳಿ ಜನರನ್ನು ಗುರಿಯಾಗಿರಿಸಿಕೊಂಡು ಇದೀಗ ಸಾವಿರಾರು ಸೈಟ್ಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪಾಂಡವಪುರ ಪುರಸಭೆಯಿಂದ ಹಲವು ವರ್ಷದಿಂದ ಸೈಟ್ ಹಂಚಿಕೆ ಮಾಡಲಾಗುತ್ತಿದೆ. ಆಶ್ರಯ ಯೋಜನೆ ಸಮಿತಿಯಿಂದ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ಒಂದೇ ಸೈಟ್ ಇಬ್ಬರಿಂದ ಮೂವರಿಗೆ ಮಾರಾಟ ಮಾಡಿ ವಂಚನೆ ಎಸಗಲಾಗಿದೆ. ಮೂಲ ಸೈಟ್ ದಾರರಿಗೆ ಮಾಹಿತಿ ಇಲ್ಲದೆ ನಿವೇಶನ ಮಾರಾಟ ಮಾಡಲಾಗಿದೆ.ಹಣ ನೀಡಿ ನಿವೇಶನ ಖರೀದಿಸಿದವರಿಗೂ ಕೂಡ ಇದೀಗ ಆತಂಕ ಹೆಚ್ಚಾಗಿದೆ. ದಂಧೆ ಕೋರರ ವಂಚನೆ ವಿಚಾರ ತಿಳಿದು ಶಾಸಕರೇ ಕಂಗಾಲಾಗಿದ್ದಾರೆ.

ಹಲವು ವರ್ಷಗಳಿಂದ ವಂಚಕರು ಸಾವಿರಾರು ಸೈಟ್ಗಳನ್ನು ಮಾರಿದ್ದಾರೆ. ಅಕ್ರಮದಲ್ಲಿ ಪುರಸಭೆಯ ಅಧಿಕಾರಿಗಳು ಜನಪ್ರತಿನಿಧಿಗಳು ಶಾಮಿಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಪತ್ರ ಬರೆಯಲಾಗಿದೆ. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ. ಶಾಸಕರ ದೂರಿನ ಮೇರೆಗೆ ಸಿಐಡಿ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿದೆ. ಪಾಂಡವಪುರ ಪುರಸಭೆ ಸೈಟ್ ಹಂಚಿಕೆ ಗೋಲ್ಮಾಲ್ ಹಿನ್ನೆಲೆಯಲ್ಲಿ ಪುರಸಭೆಯಿಂದ ಏನ್ ಓ ಸಿ ಇದ್ದರೆ ಮಾತ್ರ ಸೈಟ್ ಸಬ್ ರಿಜಿಸ್ಟರ್ ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ ನೀಡಿದ್ದಾರೆ.

ಈಗಾಗಲೇ ಮುಡಾ ಹಗರಣದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ತೀವ್ರ ಮುಜುಗರಕ್ಕೆ ಈಡಾಗಿದೆ. ತನಿಖೆಯನ್ನು ಚುರುಕುಗೊಳಿಸಿರುವ ಇಡಿ ಅಧಿಕಾರಿಗಳು ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಾಧ್ಯತೆ ಇದೆ. ಇದರ ಮಧ್ಯ ಮಂಡ್ಯದ ಪಾಂಡವಪುರದ ಪುರಸಭೆಯಲ್ಲಿ ಅಕ್ರಮ ಸೈಟ್ಗಳ ಹಂಚಿಕೆಯು ರಾಜ್ಯ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲಿದ್ದು, ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಿದಂತಾಗಿದೆ.

Share. Facebook Twitter LinkedIn WhatsApp Email

Related Posts

ಪ್ರತಿದಿನ ಬೆಳಿಗ್ಗೆ ಈ 5 ಕೆಲಸಗಳನ್ನು ಮಾಡಿದ್ರೆ ಹೊಟ್ಟೆಯ ಕೊಬ್ಬು ಕರಗುವುದು ಖಚಿತ!

19/04/2026 8:27 AM2 Mins Read

ಇಂದು `ಅಕ್ಷಯ ತೃತೀಯ’ : ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ

19/04/2026 8:20 AM2 Mins Read

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

19/04/2026 8:07 AM2 Mins Read
Recent News

ನಾಯಿಗಳು ಆಕಳಿಸುವುದು ಕೇವಲ ನಿದ್ರೆಗಲ್ಲ! ಇದರ ಹಿಂದೆ ಅಡಗಿದೆ ಅಚ್ಚರಿಯ ಅರ್ಥಗಳು; ತಜ್ಞರು ಹೇಳುವುದೇನು?

19/04/2026 8:48 AM

​’ಬಿಂದಿ, ಸಿಂಧೂರಕ್ಕೆ ನೋ?’: ಲೆನ್ಸ್‌ಕಾರ್ಟ್ ವಿವಾದದ ಬೆನ್ನಲ್ಲೇ ಏರ್ ಇಂಡಿಯಾ ಸಿಬ್ಬಂದಿ ನಿಯಮ ವೈರಲ್; ಧಾರ್ಮಿಕ ಚಿಹ್ನೆಗಳ ನಿಷೇಧಕ್ಕೆ ವ್ಯಾಪಕ ಆಕ್ರೋಶ!

19/04/2026 8:38 AM

ಪ್ರತಿದಿನ ಬೆಳಿಗ್ಗೆ ಈ 5 ಕೆಲಸಗಳನ್ನು ಮಾಡಿದ್ರೆ ಹೊಟ್ಟೆಯ ಕೊಬ್ಬು ಕರಗುವುದು ಖಚಿತ!

19/04/2026 8:27 AM

ಇಂದು `ಅಕ್ಷಯ ತೃತೀಯ’ : ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ

19/04/2026 8:20 AM
State News
KARNATAKA

ಪ್ರತಿದಿನ ಬೆಳಿಗ್ಗೆ ಈ 5 ಕೆಲಸಗಳನ್ನು ಮಾಡಿದ್ರೆ ಹೊಟ್ಟೆಯ ಕೊಬ್ಬು ಕರಗುವುದು ಖಚಿತ!

By kannadanewsnow5719/04/2026 8:27 AM KARNATAKA 2 Mins Read

ಇಂದಿನ ಕಾಲದಲ್ಲಿ ಹೊಟ್ಟೆಯ ಸುತ್ತ ಶೇಖರಣೆಯಾಗುವ ಕೊಬ್ಬು ಮತ್ತು ಹೆಚ್ಚುತ್ತಿರುವ ದೇಹದ ತೂಕ ಅನೇಕರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ. ಜಿಮ್‌ನಲ್ಲಿ…

ಇಂದು `ಅಕ್ಷಯ ತೃತೀಯ’ : ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ

19/04/2026 8:20 AM

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

19/04/2026 8:07 AM

ಬಾಡಿಗೆ ಮನೆ ಬದಲಿಸಿದ್ದೀರಾ? ‘ಗೃಹ ಜ್ಯೋತಿ’ ಸೌಲಭ್ಯ ಮುಂದುವರಿಸಲು ಇಲ್ಲಿದೆ ಮಹತ್ವದ ಮಾಹಿತಿ

19/04/2026 7:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.