Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈಲಿನಲ್ಲಿ ಖಾಲಿ ಸೀಟು ಹುಡುಕಲು ಟಿಟಿಇ ಬೆನ್ನ ಹಿಂದೆ ಅಲೆಯುವ ಅಗತ್ಯವಿಲ್ಲ! ಐಆರ್‌ಸಿಟಿಯ ಈ ಫೀಚರ್ ಮೂಲಕ ನೀವೇ ಪತ್ತೆಹಚ್ಚಿ!

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

​ಬೇಸಿಗೆಯ ಬಿಸಿಲು ನಿಮ್ಮನ್ನು ಹೆಚ್ಚು ಕೋಪಿಷ್ಠರನ್ನಾಗಿಸುತ್ತಿದೆಯೇ? ತಾಪಮಾನ ಏರಿಕೆ ಮತ್ತು ಮಾನಸಿಕ ಒತ್ತಡದ ನಡುವಿನ ಸಂಬಂಧ ಇಲ್ಲಿದೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ
KARNATAKA

ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ

By ವಸಂತ ಬಿ ಈಶ್ವರಗೆರೆ

ಬೀದರ್ : ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಅಡುಗೆ ಅನಿಲ ದರ, ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ ಎನ್.ಡಿ.ಎ. ಸರ್ಕಾರ, ಈಗ ಪ್ರತಿ ಲೀಟರ್ ಪೆಟ್ರೋಲ್ ಡೀಸೆಲ್ ದರವನ್ನು 3 ರೂ. ಹೆಚ್ಚಿಸಿದ್ದು ಬಡ, ಮಧ್ಯಮವರ್ಗದ ಮೇಲೆ ಗದಾ ಪ್ರಹಾರ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದರ್ ನಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 12 ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರದ ಕೆಟ್ಟ ವಿದೇಶಾಂಗ ನೀತಿಯ ಫಲವಾಗಿ ಇಂದು ಡಾಲರ್ ಎದುರು ರೂಪಾಯಿ ಅಪಮೌಲ್ಯ ಆಗುತ್ತಿದೆ. ಪರ್ಯಾಯ ಇಂಧನ ವ್ಯವಸ್ಥೆಯಿಲ್ಲದೆ ದೇಶದ ಅಭಿವೃದ್ಧಿಯ ಗಾಲಿಯೇ ನಿಂತು ಹೋಗುವ ಸ್ಥಿತಿ ತಲುಪುತ್ತಿದೆ. ಇದು ವಿಪರ್ಯಾಸ ಎಂದು ಹೇಳಿದ್ದಾರೆ.

ದೇಶದ ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದರ ಹೊರತಾಗಿ ಬಿಜೆಪಿ ಏನೂ ಮಾಡುತ್ತಿಲ್ಲ. ಎನ್.ಡಿ.ಎ. ಸರ್ಕಾರ ಬಿಜೆಪಿ ಮತ್ತು ಪ್ರಧಾನಿ ಪ್ರಚಾರಕ್ಕೆ ಎಷ್ಟು ಖರ್ಚು ಮಾಡಿದೆ ಎಂದು ಜನರಿಗೆ ಲೆಕ್ಕ ನೀಡಲಿ ಎಂದ ಅವರು, ಬರೀ ಸುಳ್ಳುಗಳನ್ನೇ ಹೇಳುತ್ತಾ ಮುಗ್ದ ಜನರನ್ನು ಪ್ರಧಾನಿ ವಂಚಿಸುತ್ತಿದ್ದಾರೆ ಎಂದರು.

75ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಅಂದರೆ 2022ರ ಹೊತ್ತಿಗೆ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು, ಆದಾಯ ದುಪ್ಪಟ್ಟು ಆಗಲಿಲ್ಲ. ಪ್ರತಿ ವರ್ಷ ಯುವಜನರಿಗೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು, ನಿರುದ್ಯೋಗ ದರ ಹಿಂದೆಂದಿಗಿಂತ ಅಧಿಕವಾಗಿದೆ. ವಿದೇಶದಲ್ಲಿರುವ ಕಪ್ಪು ಹಣವೂ ಬರಲಿಲ್ಲ, ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಇಳಿಸುವುದಾಗಿ ಹೇಳಿದ್ದರು, ಇಳಿಯುವ ಬದಲು ವಿಪರೀತ ಏರಿಕೆ ಆಗುತ್ತಿದೆ. ಒಟ್ಟಾರೆ ಬಡ ಮತ್ತು ಮಧ್ಯಮ ವರ್ಗದ ಜನರು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಅದಾನಿ ಆದಾಯ ಹೆಚ್ಚಿದ್ದು ಹೇಗೆ ಖಂಡ್ರೆ ಪ್ರಶ್ನೆ:

ಹತ್ತು ವರ್ಷಗಳ ಹಿಂದೆ ಅದಾನಿ ಆದಾಯ ಏನಿತ್ತು. ಇಂದು ಎಷ್ಟಾಗಿದೆ. ಅದಾನಿಯನ್ನು ಏಕಾ ಏಕಿ ಇಷ್ಟೊಂದು ಶ್ರೀಮಂತ ನನ್ನಾಗಿ ಮಾಡಲು, ದೇಶವನ್ನೇ ಮಾರಾಟ ಮಾಡುತ್ತಿದ್ದಾರೆ. ಕರ್ನಾಟಕದ ಬಗ್ಗೆ ಮಾತನಾಡುವ ಬಿಜೆಪಿಗರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಇಂದಿರಾಗಾಂಧೀ, ರಾಜೀವ್ ಗಾಂಧೀ ಮತ್ತು ಅವರ ಇಡೀ ಕುಟುಂಬ ಈ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಆದರೆ ಬಿಜೆಪಿಗಳು ಸುಖಾಸುಮ್ಮಲೆ ಅಪಪ್ರಚಾರ ಮಾಡುತ್ತಾ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಉಚಿತ ಸಲಹೆಗಷ್ಟೇ ಸೀಮಿತ:

ಬೆಲೆ ಏರಿಕೆ ತಡೆಯಲು, ರೂಪಾಯಿ ಅಪಮೌಲ್ಯ ಆಗದಂತೆ ಮಾಡಲು ಅಶಕ್ತವಾದ ಪ್ರದಾನಿ ಈಗ ಉಚಿತ ಸಲಹೆ ನೀಡಲು ಸೀಮಿತರಾಗಿದ್ದಾರೆ. ಪೆಟ್ರೋಲ್ ಡೀಸೆಲ್ ಕಡಿಮೆ ಬಳಸಿ, ಖಾದ್ಯ ತೈಲ ಬಳಕೆ ತಗ್ಗಿಸಿ, ಸಮೂಹ ಸಾರಿಗೆ ಬಳಸಿ, ಚಿನ್ನ ಖರೀದಿಸಬೇಡಿ ಎಂದು ಹೇಳುತ್ತಿದ್ದಾರೆ. ಬಡವರಿಗೆ ನೀಡುತ್ತಿದ್ದ ಅಡುಗೆ ಅನಿಲ ಸಬ್ಸಿಡಿಯನ್ನು ನಿಲ್ಲಿಸಿದರು. ಇದು ಜನರಿಗೆ ಮಾಡಿದ ದ್ರೋಹವಲ್ಲವೆ ಎಂದು ಪ್ರಶ್ನಿಸಿದರು.

ಪ್ರಧಾನಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅಜಿತ್ ಪವಾರ್ 75 ಕೋಟಿ ರೂ. ಲೂಟಿ ಹೊಡೆದಿದ್ದಾರೆ ಎಂದು ಅವರೇ ಆರೋಪಿಸಿದ್ದರು. ನಂತರ ಅವರನ್ನೇ ಉಪ ಮುಖ್ಯಮಂತ್ರಿ ಮಾಡಿದರು. ಸುವೇಂದು ಅಧಿಕಾರಿ ಲಂಚ ಪಡೆದು ಜೋಬಿಗೆ ಇಟ್ಟುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಈಗ ಅವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ. ಬಿಸ್ವಾಸ್ ಶರ್ಮಾ ಅತಿ ಭ್ರಷ್ಟ ಎಂದು ಆರೋಪಿಸಿದರು. ಈಗ ಅವರನ್ನೂ 2 ಬಾರಿ ಅಸ್ಸಾಂ ಮುಖ್ಯಮಂತ್ರಿ ಮಾಡಿದ್ದಾರೆ. ಪ್ರತಿಪಕ್ಷದಲ್ಲಿದ್ದರೆ ಅವರು ಭ್ರಷ್ಟರಾಗಿರುತ್ತಾರೆ. ಬಿಜೆಪಿ ಬಂದ ಕೂಡಲೇ ಪರಿಶುದ್ಧರಾಗುತ್ತಾರಾ ಎಂದು ಪ್ರಶ್ನಿಸಿದರು.

Share. Facebook Twitter LinkedIn WhatsApp Email

Related Posts

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

2 Mins Read

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

2 Mins Read

BIG NEWS: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಖಜಾನೆಗೆ ಕನ್ನ: ಅರ್ಚಕರು, ಸಿಬ್ಬಂದಿ ವಿರುದ್ಧ ದೂರು!

2 Mins Read
Recent News

ರೈಲಿನಲ್ಲಿ ಖಾಲಿ ಸೀಟು ಹುಡುಕಲು ಟಿಟಿಇ ಬೆನ್ನ ಹಿಂದೆ ಅಲೆಯುವ ಅಗತ್ಯವಿಲ್ಲ! ಐಆರ್‌ಸಿಟಿಯ ಈ ಫೀಚರ್ ಮೂಲಕ ನೀವೇ ಪತ್ತೆಹಚ್ಚಿ!

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

​ಬೇಸಿಗೆಯ ಬಿಸಿಲು ನಿಮ್ಮನ್ನು ಹೆಚ್ಚು ಕೋಪಿಷ್ಠರನ್ನಾಗಿಸುತ್ತಿದೆಯೇ? ತಾಪಮಾನ ಏರಿಕೆ ಮತ್ತು ಮಾನಸಿಕ ಒತ್ತಡದ ನಡುವಿನ ಸಂಬಂಧ ಇಲ್ಲಿದೆ!

​ಏರ್ ಇಂಡಿಯಾ ವಿಮಾನ ದುರಂತ: ಸಂತ್ರಸ್ತ ಕುಟುಂಬಗಳ ಮೇಲೆ ಅಂತಿಮ ಪರಿಹಾರಕ್ಕಾಗಿ ಯಾವುದೇ ಒತ್ತಡವಿಲ್ಲ; ಏರ್ ಇಂಡಿಯಾ ಸ್ಪಷ್ಟನೆ

State News
KARNATAKA

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್ ಮೂಲಕ ರಾಜ್ಯವು ಕಳೆದ ಎರಡೂವರೆ ತಿಂಗಳಲ್ಲಿ ಪ್ರತಿ ಯೂನಿಟ್‌ಗೆ 9.08 ರೂಪಾಯಿಯಂತೆ…

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

BIG NEWS: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಖಜಾನೆಗೆ ಕನ್ನ: ಅರ್ಚಕರು, ಸಿಬ್ಬಂದಿ ವಿರುದ್ಧ ದೂರು!

ಮಕ್ಕಳ ಪೋಷಕರ ಗಮನಕ್ಕೆ: ಜೂನ್.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ, ತಪ್ಪದೇ ಹಾಕಿಸಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.