ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಆರ್ ಟಿ ಓ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆರ್ಟಿಓ ಪ್ರೊಬೆಷನರಿ ಇನ್ಸ್ಪೆಕ್ಟರ್ ಗಳಾದ ದಿನೇಶ್ ಕುಮಾರ್ ಹಾಗೂ ಕಿರಣ್ ಮತ್ತು ಖಾಸಗಿ ವ್ಯಕ್ತಿ ರಮೇಶ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
30,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಗೂಗಲ್ ಪೇ ಮೂಲಕ 2000, 1000 ನಗದು ಲಂಚವನ್ನು ಪಡೆದಿದ್ದರು. ಇಂದು ಖಾಸಗಿ ವ್ಯಕ್ತಿ ರಮೇಶ್ 300 ರೂಪಾಯಿ ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ. ನೈಸ್ ರಸ್ತೆಯಲ್ಲಿ ವಾಹನ ತಪಾಸನೆ ನಡೆಸಿ ಬಿಡಲು ಲಂಚ ಸ್ವೀಕರಿಸಿದ್ದಾರೆ. ಓವರ್ಲೋಡ್ ಟ್ರಕ್ ಬಿಡಲು ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ.
ಆರ್.ಟಿ.ಒ ಪ್ರೊಬೆಷನರಿ ಅಧಿಕಾರಿ ದಿನೇಶ್ ಕುಮಾರ್ ಕಿರಣ್ ಮತ್ತು ರಮೇಶನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ಉಚ್ಚಾರಣೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಮೂಲದ ಪ್ರಶಾಂತ ದತ್ತಾತ್ರೇಯ ದೂರು ನೀಡಿದ್ದರು. ಈ ಲೋಕಾಯುಕ್ತ ಎಸ್ ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.








