ವಾಷಿಂಗ್ಟನ್: ಕಳೆದ ಒಂದು ವಾರದಿಂದ ಸೂರ್ಯನಲ್ಲಿ ಉಂಟಾಗುತ್ತಿರುವ ಸರಣಿ ಸ್ಫೋಟಗಳು ಮತ್ತು ಪ್ರಕ್ಷುಬ್ಧ ವಾತಾವರಣದ ಬೆನ್ನಲ್ಲೇ, ಇಂದು (ಜೂನ್ 8) ಭೂಮಿಗೆ ಅತ್ಯಂತ ಪ್ರಬಲವಾದ ಸೌರ ಬಿರುಗಾಳಿ (Geomagnetic Storm) ಅಪ್ಪಳಿಸಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ (NASA) ಸೇರಿದಂತೆ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಹೈ ಅಲರ್ಟ್ ಆಗಿವೆ.
ಏನಿದು ಘಟನೆ?
ಕಳೆದ ಕೆಲವು ದಿನಗಳಿಂದ ಸೂರ್ಯನ ಮೇಲ್ಮೈನಲ್ಲಿ ಸರಣಿ ಸ್ಫೋಟಗಳು ಸಂಭವಿಸುತ್ತಿದ್ದರೂ, ಅವುಗಳಲ್ಲಿ ಹೆಚ್ಚಿನವು ಭೂಮಿಗೆ ತಾಗದೆ ಹಾದುಹೋಗಿದ್ದವು. ಆದರೆ, ಜೂನ್ 6 ರಂದು ಸೂರ್ಯನ ‘ಆಕ್ಟಿವ್ ರೀಜನ್ 4461’ (Active Region 4461) ಎಂಬ ಭಾಗದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ವಿಜ್ಞಾನಿಗಳು ಇದನ್ನು ಮಧ್ಯಮ ಸರಣಿಯ ‘M1.8’ ಮಾದರಿಯ ಸೋಲಾರ್ ಫ್ಲೇರ್ (Solar Flare) ಎಂದು ವರ್ಗೀಕರಿಸಿದ್ದಾರೆ.
ಸೌರ ಜ್ವಾಲೆ (Solar Flare) ಎಂದರೇನು?
ಸೂರ್ಯನ ಮೇಲ್ಮೈನಲ್ಲಿ ಕಾಂತೀಯ ಶಕ್ತಿಯು ದಿಢೀರನೆ ಸ್ಫೋಟಗೊಂಡು, ಬಿಡುಗಡೆಯಾಗುವ ತೀವ್ರ ಗಾಮಾ ಮತ್ತು ಎಕ್ಸ್-ರೇ ವಿಕಿರಣಗಳ ವಿದ್ಯಮಾನವೇ ಸೌರ ಜ್ವಾಲೆ.
ಗಂಟೆಗೆ ಕೋಟ್ಯಂತರ ಕಿಲೋಮೀಟರ್ ವೇಗ!
ಈ ಸ್ಫೋಟದಿಂದ ಹೊರಹೊಮ್ಮಿದ ದಟ್ಟವಾದ ಮತ್ತು ಅತ್ಯಂತ ಶಕ್ತಿಶಾಲಿ ಕಾಂತೀಯ ಅನಿಲದ ಮೋಡವು (Core Filament) ಸದ್ಯ ಬಾಹ್ಯಾಕಾಶದಲ್ಲಿ ಪ್ರತಿ ಸೆಕೆಂಡಿಗೆ ಬರೋಬ್ಬರಿ 1,400 ಕಿಲೋಮೀಟರ್ ವೇಗದಲ್ಲಿ ಭೂಮಿಯ ಕಡೆಗೆ ಧಾವಿಸುತ್ತಿದೆ. ಇದು ಇಂದು ಭೂಮಿಯ ಕಾಂತಕ್ಷೇತ್ರವನ್ನು ನೇರವಾಗಿ ತಾಕುವ ಸಾಧ್ಯತೆಯಿದೆ.
‘G3’ ಶ್ರೇಣಿಯ ಹೈ ಅಲರ್ಟ್: ಪರಿಣಾಮಗಳೇನು?
ಅಮೆರಿಕದ ಬಾಹ್ಯಾಕಾಶ ಹವಾಮಾನ ಮುನ್ಸೂಚನಾ ಕೇಂದ್ರ (SWPC) ಈ ಸೌರ ಬಿರುಗಾಳಿಯನ್ನು ‘G3’ (Strong) ಅಂದರೆ ಅತ್ಯಂತ ಪ್ರಬಲವಾದ ಜಿಯೋಮ್ಯಾಗ್ನೆಟಿಕ್ ಸ್ಟಾರ್ಮ್ ಎಂದು ಗುರುತಿಸಿದೆ. ಇದರಿಂದಾಗಿ ಕೆಳಗಿನ ಪರಿಣಾಮಗಳು ಉಂಟಾಗಬಹುದು:
ಸಂಪರ್ಕ ವ್ಯವಸ್ಥೆಯಲ್ಲಿ ವ್ಯತ್ಯಯ: ಉಪಗ್ರಹ ಆಧಾರಿತ ಸಂಪರ್ಕ ವ್ಯವಸ್ಥೆ (GPS), ರೇಡಿಯೋ ಸಿಗ್ನಲ್ಗಳು ಮತ್ತು ಮೊಬೈಲ್ ನೆಟ್ವರ್ಕ್ಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಬಹುದು.
ವಿದ್ಯುತ್ ಗ್ರಿಡ್ಗಳ ಮೇಲೆ ಪರಿಣಾಮ: ವಿದ್ಯುತ್ ಗ್ರಿಡ್ಗಳಲ್ಲಿ ಹಠಾತ್ ವೋಲ್ಟೇಜ್ ಏರಿಳಿತ ಉಂಟಾಗುವ ಸಾಧ್ಯತೆ ಇರುತ್ತದೆ.
ಭಾರತದಲ್ಲೂ ಅರೋರಾ ಚಮತ್ಕಾರ?: ಸಾಮಾನ್ಯವಾಗಿ ದ್ರುವ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಆಕಾಶದ ಅದ್ಭುತ ರಂಗುರಂಗಿನ ಬೆಳಕಿನ ಹಬ್ಬ ‘ಅರೋರಾ’ (Auroras), ಈ ಬಾರಿ ತೀವ್ರತೆ ಹೆಚ್ಚಿರುವುದರಿಂದ ಭಾರತದ ಲಡಾಖ್ನಂತಹ ಎತ್ತರದ ಪ್ರದೇಶಗಳಲ್ಲೂ ಗೋಚರಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ವಿಜ್ಞಾನಿಗಳು ಭೂಮಿಯ ಮೇಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
So I think my footage from last night has gone kinda viral 😆
So many questions, here are a few answers…
It was taken at the Aurora Borealis Observatory on Senja in northern Norway.
It was taken on a @SonyAlpha 7sii, which is an amazing camera for astrovideography 😍 pic.twitter.com/D7Z30sO4AP
— Matt Robinson (@Astromackem) November 23, 2020








