ಬೆಂಗಳೂರು : ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯಲ್ಲಿ ಸ್ಫೋಟಕವಾದ ವಿಚಾರ ಬಯಲಾಗಿದೆ. ಮಗುವಿನ ಶವಕ್ಕೆ ತಾಯಿ ಪ್ರಿಯಾಂಕ ಸ್ನಾನ ಮಾಡಿಸಿದ್ದಳು. ಮಾರ್ಚ್ 24ರಂದು ಆರು ವರ್ಷದ ವೆನಿಲಾ ಕೊಲೆ ಮಾಡಿ ಸ್ನಾನ ಮಾಡಿಸಿದ್ದಳು. ಶವ ಮನೆಗೆ ತಂದಿದ ತಾಯಿ ಪ್ರಿಯಾಂಕ ಮತ್ತು ಮೋಹನ್ ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿಸಿದ್ದರು.
ಸತ್ತ ಮಗುವಿಗೆ ಹೊಸ ಬಟ್ಟೆ ತೊಡಿಸಿದ ಪ್ರಿಯಾಂಕ ನಂತರ ಮಗುವನ್ನು ಇಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗು ಬಟ್ಟೆ, ಹಾಗು ಬೆಡ್ ಶೀಟ್ ಗಳನ್ನು ಆರೋಪಿಗಳು ತೊಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಡುಗೋಡಿ ಪೊಲೀಸರಿಂದ ತೀವ್ರ ತನಿಖೆ ನಡೆಯುತ್ತಿದೆ. ಪೊಲೀಸರಿಂದ ಪ್ರಿಯಾಂಕ ಮತ್ತು ಮೋಹನ್ ತೀವ್ರ ವಿಚಾರಣೆ ನಡೆಯುತ್ತಿದೆ. ಆರೋಪಿ ಮೋಹನ್ ಗೊಂದಲದ ಹೇಳಿಕೆ ಕೊಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಪ್ರಿಯಾಂಕ ಮತ್ತು ಮೋಹನ್ ಇಬ್ಬರನ್ನು ಕೂರಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಒಬ್ಬರ ಹೇಳಿಕೆಗೂ ಇನ್ನೊಬ್ಬರ ಹೇಳಿಕೆಗೂ ಹೋಲಿಕೆ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಕೇಸ್ ಇಂದ ತಪ್ಪಿಸಿಕೊಳ್ಳಲು ಪ್ರಿಯಾಂಕ ಮಾಸ್ಟರ್ ಪ್ಲಾನ್ ಸಹ ಮಾಡಿದ್ದಳು ಎಂದು ತಿಳಿದುಬಂದಿದೆ. ಜಾಮೀನು ರದ್ದು ಆಗುತ್ತಿದ್ದಂತೆ ಪ್ರಿಯಾಂಕ ಎಸ್ಕೇಪ್ ಆಗಿದ್ದಳು. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಎರಡು ದಿನ ಪ್ರಿಯಾಂಕ ವಾಸ್ತವ್ಯ ಹೂಡಿದ್ದಳು. 5 ಲಕ್ಷಕ್ಕೂ ಅಧಿಕ ಹಣವನ್ನು ಒಯ್ದು ವ್ಯವಹರಿಸುವ ಮಾಹಿತಿ ಲಭ್ಯವಾಗಿದೆ. ವಿಚಾರ ಬಹಿರಂಗ ಆಗುತ್ತಿದ್ದಂತೆ ಪ್ರಿಯಾಂಕ ಪರಾರಿಯಾಗಿದ್ದಾಳೆ.
ಸಕಲೇಶಪುರದ ಸ್ನೇಹಿತನ ನಿವಾಸಕ್ಕೆ ಪ್ರಿಯಾಂಕ ಹೋಗಿದ್ದಾಳೆ. ಮೋಹನ್ ಮಾಹಿತಿ ಆಧರಿಸಿ ಸಕಲೇಶಪುರಕ್ಕೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ರೆಸಾರ್ಟ್ ನಲ್ಲಿದ್ದ ಪ್ರಿಯಾಂಕಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. UDR ಪ್ರಕರಣ ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಬಳಿಕ ಬಾಲಕಿ ತಂದೆ ದೂರಿನ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ನಿರೀಕ್ಷಣಾ ಜಾಮೀನು ರದ್ದಿಗೆ ಪೊಲೀಸರು ಅರ್ಜಿ ಸಲ್ಲಿಸಿದ್ದರು. UDR ಕೊಲೆ ಕೇಸ್ ಆಗಿ ಕನ್ವರ್ಟ್ ಆದ ಮಾಹಿತಿ ತಿಳಿದಿದ್ದು ಅಲ್ಲಿಯವರೆಗೆ ಕೊಲೆ ಕೇಸ್ ದಾಖಲಾಗಿರುವುದು ಗೊತ್ತಿರಲಿಲ್ಲ.








