ದಕ್ಷಿಣಕನ್ನಡ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಸ್ಐಟಿ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. 3,923 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದೆ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ. ಕಳೆದ ನವೆಂಬರ್ 21ರಂದು ಎಸ್ಐಟಿ ವರದಿ ಸಲ್ಲಿಸಿದೆ. ಒಟ್ಟು 6 ಜನರ ವಿರುದ್ಧ ಷಡ್ಯಂತ್ರ ಆರೋಪ ಸಾಬೀತು ಆಗಿದ್ದು ಸದನದಲ್ಲಿ ಇಂದು ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರಸ್ತಾಪ ಆಗುವ ಸಾಧ್ಯತೆ ಇದೆ.
ಮಾಸ್ಕ್ ಮ್ಯಾನ್ ಚಿನ್ನಯ, ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಟಿ.ಜಯಂತ, ವಿಠಲ್ ಗೌಡ ಹಾಗೂ ಸುಜಾತ ಭಟ್ ವಿರುದ್ಧ ಎಸ್ಐಟಿ ಪ್ರಾಥಮಿಕ ವರದಿ ಸಲ್ಲಿಕೆ ಆಗಿತ್ತು. ಜಿತೇಂದ್ರ ಕುಮಾರ್ ದಯಾಮ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಕೆ ಮಾಡಿದರು ಜಿತೇಂದ್ರ ಮುಖ್ಯ ತನಿಖಾಧಿಕಾರಿಯಾಗಿದ್ದರು ಮಾಸ್ಕ ಮ್ಯಾನ್ ಚಿನ್ನಯ್ಯ ಹೇಳಿದಂತೆ ಪ್ರಕರಣದ ಕುರಿತು ಏನೆಲ್ಲ ಆಯ್ತು ಅನ್ನುವುದು, ಒಂದಷ್ಟು ಕಡೆ ಮೂಳೆ ಹಾಗೂ ಇತರೆ ಭಾಗಗಳು ಸಿಕ್ಕಿದ್ದವು ಇದರ ಹಿಂದೆ ದೊಡ್ಡ ಷಡ್ಯಂತ್ರ ಇತ್ತು ಎನ್ನುವುದು ತನಿಖೆಯ ಒಂದೊಂದೆ ಹಂತದಲ್ಲಿ ಬಯಲಾಗಿತ್ತು.
ಎಸ ಐ ಟಿ ಪ್ರಾಥಮಿಕ ವರದಿಯಲ್ಲಿ ಸ್ಪೋಟಕ ಮಾಹಿತಿ ಉಲ್ಲೇಖವಾಗಿದ್ದು, ಚಿನ್ನಯ್ಯ ತಲೆ ಬುರುಡೆಯನ್ನು ತಂದು ಕೊಟ್ಟಿದ್ದು ಯಾರು ? ಷಡ್ಯಂತರ ಮಾಡಲು ಪ್ರೇರಣೆ ಕೊಟ್ಟಿರುವುದು ಯಾರು ? ಬುರುಡೆಯನ್ನು ಎಲ್ಲೆಲ್ಲಿ ತೆಗೆದುಕೊಂಡು ಹೋಗಿದ್ದರು? ತಲೆ ಬುರುಡೆ ವಿಚಾರದಲ್ಲಿ ಏನೇನು ಷಡ್ಯಂತರ ನಡೆದಿದೆ? ಅಲ್ಲದೆ ಎಲ್ಲಾ ಷಡ್ಯಂತ್ರಕ್ಕೆ ಹಣವನ್ನು ಫಡಿಂಗ್ ಯಾರು ಎಲ್ಲಿಂದ ಮಾಡಿದರು? ಎನ್ನುವುದು 3923 ಪುಟಗಳ ಪ್ರಾಥಮಿಕ ವರದಿಯಲ್ಲಿ ಈ ಒಂದು ಸ್ಫೋಟಕ ಅಂಶಗಳು ಉಲ್ಲೇಖ ಎಸ್ಐಟಿ ಮಾಡಿದೆ.
ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ಕುರಿತು ಎಸ್ಐಟಿ ತನಿಖೆಯಲ್ಲಿ ಕುತಂತ್ರ ಸಾಬೀತು ಆಗಿದೆ ಪ್ರಾಥಮಿಕ ತನಿಕೆಯಲ್ಲಿ ಚೆನ್ನಯ್ಯ, ಮಹೇಶ ತಿಮ್ಮರೋಡಿ, ಗಿರೀಶ ಮಟ್ಟಣ್ಣವರ್, ವಿಠ್ಠಲ ಗೌಡ ಟಿ ಜಯಂತ, ಹಾಗೂ ಸುಜಾತ ಭಟ್ ಅಪರಾಧ ಕೃತ್ಯದಲ್ಲಿ ಆರು ಆರೋಪಿಗಳು ಶಾಮೀಲು ಹಾಗೂ ಅಪರಾಧಗಿರುವುದು ದೃಢಪಟ್ಟಿದೆ ಎಂದು ಎಸ್ಐಟಿ ಪ್ರಾಥಮಿಕ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಣದ ಆಮಿಷಕ್ಕೆ ಒಳಗಾಗಿ ಚಿನ್ನಯ್ಯ ಸುಳ್ಳು ಹೇಳಿದ್ದ ಹಣ ಪಡೆದು ಬುರುಡೆ ಕಥೆ ಕಟ್ಟಿದ ಮಾಸ್ಕ್ ಮಾಸ್ಕ್ ಮ್ಯಾನ್ ಚಿನ್ನಯ ಆತನಿಗೆ ಹಣ ಕೊಟ್ಟು ಬುರುಡೆ ಗ್ಯಾಂಗ್ ಇತ್ತು ಚಿನ್ನಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಸಹ ಮಾಡಿದ್ದರು ಎಂದು SIT ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಇಷ್ಟೆಲ್ಲಾ ಅಂಶಗಳು ಉಲ್ಲೇಖವಾಗಿದೆ.








