ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಹರಿಪುರ ಮತ್ತು ಇಸ್ಲಾಮಾಬಾದ್ ನಲ್ಲಿ ಭೂಕಂಪನದ ಅನುಭವವಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪಾಕಿಸ್ತಾನದ ಇಸ್ಲಾಮಾಬಾದ್ ಹಾಗೂ ಹರಿಪುರದಲ್ಲ ತಡರಾತ್ರಿ ಭೂಕಂಪನವಾಗಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಎಕ್ಸ್ನಲ್ಲಿ ಅನೇಕ ಜನರು ಭೂಕಂಪನದ ಅನುಭವವನ್ನು ಇಸ್ಲಾಮಾಬಾದ್ವರೆಗೆ ಅನುಭವಿಸಿದ ಬಗ್ಗೆ ಬರೆದುಕೊಂಡಿದ್ದಾರೆ.
Earthquake in Islamabad
Stay safe everyone
god bless you 🙏— @Imi@Boy (@imramhafeez1) May 18, 2024