ಚೈನ್ನೈ : ತಮಿಳುನಾಡು ರಾಜಕೀಯದಲ್ಲಿ ಇದೀಗ ಕ್ಷಿಪ್ರವಾದ ರಾಜಕೀಯ ಬೆಳವಣಿಗೆ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು, ಡಿಎಂಕೆ ಪಕ್ಷ ಸೇರಿದ್ದಾರೆ.
ಹೌದು ಜಯಲಲಿತ ಆಪ್ತ ಪನ್ನೀರ್ ಸೆಲ್ವಂ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಮ್ಮುಖದಲ್ಲಿ ಡಿಎಂಕೆ ಪಕ್ಷ ಸೇರ್ಪಡೆಯಾಗಿದ್ದಾರೆ.ಪಕ್ಷದ ಬಾವುಟ ನೀಡಿ ಸ್ಟಾಲಿನ್ ಅವರು ಸೆಲ್ವಂ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.ಚೆನ್ನೈನ ಡಿಎಂಕೆ ಪಕ್ಷದ ಕಚೇರಿಯಲ್ಲಿ ಈ ಒಂದು ಕಾರ್ಯಕ್ರಮ ನಡೆದಿದೆ. ಮಾಜಿ ಸಿಎಂ ಪನೀರ್ ಸೆಲ್ವಂ ಅವರ ಜೊತೆಗೆ ಹಲವರು ಕೂಡ ಡಿಎಂಕೆ ಪಕ್ಷ ಸೇರ್ಪಡೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಯಲಲಿತ ಅವರ ಮೆಚ್ಚಿನ ಶಿಷ್ಯ ಆಗಿದ್ದ ಪನ್ನೀರ್ ಸೆಲ್ವಂ, ಎರಡು ಬಾರಿ ಜಯಲಲಿತ ಸೂಚನೆಯಂತೆ ಸಿಎಂ ಆಗಿದ್ದರು. ಭ್ರಷ್ಟಾಚಾರ ಆರೋಪ ಬಂದಿದ್ದಾಗ ಸಿಎಂ ಆಗಿದ್ದರು. ಇದೀಗ ಜಯಲಲಿತಾ ಅವರ ವಿರೋಧಿ ಪಡೆ ಯನ್ನು ಪನ್ನೀರ್ ಸೇಲ್ವಮ್ ಸೇರ್ಪಡೆಯಾಗಿದ್ದಾರೆ. ಮೂರು ಬಾರಿ ತಮಿಳುನಾಡು ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಒಂದು ಬಾರಿ ಉಪ ಮುಖ್ಯಮಂತ್ರಿ ಕೂಡ ಆಗಿದ್ದರು ಎಐಡಿಎಂಕೆಯಿಂದ ಪನ್ನೀರ್ ಸೆಲ್ವಂ ಉಚ್ಚಾಟನೆಗೊಂಡಿದ್ದರು.








