Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಜೈಲು ಪಾಲಾಗಿ ಇಂದಿಗೆ 2 ವರ್ಷ.!

BIG NEWS: ಗೃಹಲಕ್ಷ್ಮಿಯರಿಗೆ ಹೊಸ ನಿಯಮ : 2000 ರೂ.ಪಡೆಯಲು ಬಯೋಮೆಟ್ರಿಕ್ ಕಡ್ಡಾಯ, ಅರ್ಜಿ ನವೀಕರಣಕ್ಕೆ ಚಾಲನೆ

ವಾಹನ ಸವಾರರಿಗೆ ಸುವರ್ಣಾವಕಾಶ: ಸಂಚಾರ ಇ-ಚಲನ್, ಸಾರಿಗೆ ಇಲಾಖೆ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಗೃಹಲಕ್ಷ್ಮಿಯರಿಗೆ ಹೊಸ ನಿಯಮ : 2000 ರೂ.ಪಡೆಯಲು ಬಯೋಮೆಟ್ರಿಕ್ ಕಡ್ಡಾಯ, ಅರ್ಜಿ ನವೀಕರಣಕ್ಕೆ ಚಾಲನೆ
KARNATAKA

BIG NEWS: ಗೃಹಲಕ್ಷ್ಮಿಯರಿಗೆ ಹೊಸ ನಿಯಮ : 2000 ರೂ.ಪಡೆಯಲು ಬಯೋಮೆಟ್ರಿಕ್ ಕಡ್ಡಾಯ, ಅರ್ಜಿ ನವೀಕರಣಕ್ಕೆ ಚಾಲನೆ

By kannadanewsnow57

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಯೋಜನೆಯ ಸೌಲಭ್ಯಗಳು ನಿಜವಾದ ಅರ್ಹರಿಗೆ ಮಾತ್ರ ತಲುಪುವಂತೆ ಮಾಡಲು, ಫಲಾನುಭವಿಗಳ ಅರ್ಜಿಗಳನ್ನು ಮರುಪರಿಶೀಲಿಸಿ ನವೀಕರಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ. ಇದರ ಭಾಗವಾಗಿ, ಮುಂದಿನ ವಾರದಿಂದಲೇ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ.

ಹೆಬ್ಬೆಟ್ಟು, ಕಣ್ಣು, ಮುಖ ಗುರುತಿಸುವಿಕೆ ಮೂಲಕ ದೃಢೀಕರಣ

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮ ಗುರುತನ್ನು ದೃಢೀಕರಿಸಲು ಹೆಬ್ಬೆಟ್ಟಿನ ಗುರುತು (Fingerprint), ಕಣ್ಣಿನ ರೆಟಿನಾ ಸ್ಕ್ಯಾನ್ (Retina Scan) ಹಾಗೂ ಫೇಸ್ ರೆಕಗ್ನಿಷನ್ (Face Recognition) ವಿಧಾನಗಳನ್ನು ಬಳಸಬೇಕಾಗುತ್ತದೆ. ಬಯೋಮೆಟ್ರಿಕ್ ಮೂಲಕ ಪರಿಶೀಲನೆ ಸಾಧ್ಯವಾಗದ ಸಂದರ್ಭಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ದುರುಪಯೋಗ ತಡೆಯಲು ಸರ್ಕಾರದ ಕಟ್ಟುನಿಟ್ಟಿನ ಕ್ರಮ
ಕುಟುಂಬದ ಅರ್ಹ ಮಹಿಳೆಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವು ಅಕ್ರಮಗಳು ಪತ್ತೆಯಾಗಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

ಮೃತಪಟ್ಟ ವ್ಯಕ್ತಿಗಳ ಹೆಸರಿನ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಹಾಗೂ ಆದಾಯ ತೆರಿಗೆ ಪಾವತಿದಾರರೂ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಇರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ನಿಜವಾದ ಅರ್ಹರನ್ನು ಗುರುತಿಸಿ ಅನರ್ಹರನ್ನು ಹೊರಗಿಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ.

ಅರ್ಜಿ ನವೀಕರಣದಲ್ಲಿ ಏನೆಲ್ಲ ಬದಲಾವಣೆ?
ಈಗಾಗಲೇ ಸಲ್ಲಿಸಿರುವ ಹಳೆಯ ಅರ್ಜಿಯ ಆಧಾರದ ಮೇಲೆಯೇ ನವೀಕರಣ ಪ್ರಕ್ರಿಯೆ ನಡೆಯಲಿದೆ.

ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗಲಿದೆ.

ಫಲಾನುಭವಿಗಳಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ.

ಬಯೋಮೆಟ್ರಿಕ್ ದೃಢೀಕರಣದ ಬಳಿಕವೇ ಅರ್ಜಿ ನವೀಕರಣ ಪೂರ್ಣಗೊಳ್ಳಲಿದೆ.

ಅಗತ್ಯವಿದ್ದಲ್ಲಿ ರೆಟಿನಾ ಸ್ಕ್ಯಾನ್ ಅಥವಾ ಫೇಸ್ ರೆಕಗ್ನಿಷನ್ ಮೂಲಕ ಗುರುತು ಪರಿಶೀಲನೆ ನಡೆಸಲಾಗುತ್ತದೆ.

ಎಲ್ಲಿಗೆ ತೆರಳಿ ದೃಢೀಕರಣ ಮಾಡಿಸಬೇಕು?
ಫಲಾನುಭವಿಗಳು ಕೆಳಕಂಡ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ:

ಕರ್ನಾಟಕ ಒನ್ ಕೇಂದ್ರ

ಬೆಂಗಳೂರು ಒನ್ ಕೇಂದ್ರ

ಗ್ರಾಮ ಒನ್ ಕೇಂದ್ರ

ಬಾಪೂಜಿ ಸೇವಾ ಕೇಂದ್ರ

ಅಲ್ಲದೆ, ಕೆಲವು ಸಂದರ್ಭಗಳಲ್ಲಿ ಜಾತಿ ಪ್ರಮಾಣ ಪತ್ರದಲ್ಲಿರುವ RD ಸಂಖ್ಯೆಯನ್ನು ನಮೂದಿಸುವ ಅಗತ್ಯವೂ ಇರಬಹುದು ಎಂದು ತಿಳಿಸಲಾಗಿದೆ.

application renewal launched BIG NEWS: New rule for Grihalakshmi: Biometrics mandatory to get Rs. 2000
Share. Facebook Twitter LinkedIn WhatsApp Email

Related Posts

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಜೈಲು ಪಾಲಾಗಿ ಇಂದಿಗೆ 2 ವರ್ಷ.!

2 Mins Read

ವಾಹನ ಸವಾರರಿಗೆ ಸುವರ್ಣಾವಕಾಶ: ಸಂಚಾರ ಇ-ಚಲನ್, ಸಾರಿಗೆ ಇಲಾಖೆ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿ

1 Min Read

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ನೋಂದಣಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

1 Min Read
Recent News

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಜೈಲು ಪಾಲಾಗಿ ಇಂದಿಗೆ 2 ವರ್ಷ.!

BIG NEWS: ಗೃಹಲಕ್ಷ್ಮಿಯರಿಗೆ ಹೊಸ ನಿಯಮ : 2000 ರೂ.ಪಡೆಯಲು ಬಯೋಮೆಟ್ರಿಕ್ ಕಡ್ಡಾಯ, ಅರ್ಜಿ ನವೀಕರಣಕ್ಕೆ ಚಾಲನೆ

ವಾಹನ ಸವಾರರಿಗೆ ಸುವರ್ಣಾವಕಾಶ: ಸಂಚಾರ ಇ-ಚಲನ್, ಸಾರಿಗೆ ಇಲಾಖೆ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿ

​ಭಾರತದ ಅತ್ಯಂತ ದೀರ್ಘಾವಧಿ ಪ್ರಧಾನಿ ಮೋದಿ: ಆತ್ಮೀಯ ಸ್ನೇಹಿತನಿಗೆ ಡೊನಾಲ್ಡ್ ಟ್ರಂಪ್ ಅಭಿನಂದನೆ!

State News
KARNATAKA

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಜೈಲು ಪಾಲಾಗಿ ಇಂದಿಗೆ 2 ವರ್ಷ.!

By kannadanewsnow57 KARNATAKA 2 Mins Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣ ಇಡೀ ಕರ್ನಾಟಕವನ್ನೇ ನಡುಗಿಸಿತ್ತು. ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಕೇಸ್‌ನಲ್ಲಿ…

BIG NEWS: ಗೃಹಲಕ್ಷ್ಮಿಯರಿಗೆ ಹೊಸ ನಿಯಮ : 2000 ರೂ.ಪಡೆಯಲು ಬಯೋಮೆಟ್ರಿಕ್ ಕಡ್ಡಾಯ, ಅರ್ಜಿ ನವೀಕರಣಕ್ಕೆ ಚಾಲನೆ

ವಾಹನ ಸವಾರರಿಗೆ ಸುವರ್ಣಾವಕಾಶ: ಸಂಚಾರ ಇ-ಚಲನ್, ಸಾರಿಗೆ ಇಲಾಖೆ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿ

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ನೋಂದಣಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.