ರಾಮನಗರ : ಕೆಲಸದ ನಿಮಿತ್ಯ ಬೈಕ್ ಮೇಲೆ ತೆರಳುತ್ತಿದ್ದ ಬೆಳೆ ಬೈಕಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಒಬ್ಬ ಮಹಿಳೆ ಸ್ಥಳದಲ್ಲಿ ಸಾವನ್ನುಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಅವರೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಬಸ್ ಡಿಕ್ಕಿ ಹೊಡೆದು ಓರ್ವ ಸವಾರ ಹಾಗೂ ಮಹಿಳೆ ಸಾವನ್ನಪ್ಪಿದ್ದರೆ. ಅವರೆಹಳ್ಳಿ ಕೆರೆ ಏರಿ ಬಳಿ ಈ ಅಪಘಾತ ಸಂಭವಿಸಿದೆ.ರಾಮನಗರ ಕನಕಪುರ ರಸ್ತೆ ಅವರೇಹಳ್ಳಿ ಕೆರೆ ಬಳಿ ಈ ಒಂದು ಅಪಘಾತ ಸಂಭವಿಸಿದೆ.ಕನಕಪುರದಿಂದ ರಾಮನಗರ ಕಡೆ ಬೈಕ್ ತೆರಳುತ್ತಿತ್ತು.
ಈ ವೇಳೆ ಬೈಕ್ ಸವಾರ ಹಾಗೂ ಮಹಿಳೆ ಸಾವನ್ನಪ್ಪಿದ್ದಾರೆ. ಮೃತರು ಮಾಗಡಿ ತಾಲೂಕಿನ ಹೊನ್ನಾಪುರ ಪಾಳ್ಯದವರು ಎಂದು ಹೇಳಲಾಗುತ್ತಿದೆ. ರಾಮನಗರ ಗ್ರಾಮಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗೂಡ್ಸ್ ವಾಹನದ ಚಾಲಕ ಸಾವು
ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದು ಗೂಡ್ಸ್ ವಾಹನದ ಚಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬೆಳ್ಳಂದೂರು ಬಸ್ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ಚಾಲಕ ಮುರುಗನ್ ಸ್ಥಳದಲ್ಲೇ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಅಪಘಾತದ ನಂತರ ವಾಟರ್ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಬೆಳ್ಳಂದೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.