ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರ ಗೌಡ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ ಆದರೆ ಪ್ರಕರಣದ 13ನೇ ಆರೋಪಿ ಆಗಿರುವ ದೀಪಕ್ ಪೊಲೀಸರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಒಂದನ್ನು ಬಾಯಿಬಿಟ್ಟಿದ್ದಾನೆ.
ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿದ ನಂತರ ರೇಣುಕಾ ಸ್ವಾಮಿಯನ್ನು ನೇರವಾಗಿ ಬೆಂಗಳೂರಿನ ಆರ್. ಆರ್. ನಗರದಲ್ಲಿರುವ ಪಟ್ಟಣಗೆರೆ ಶೆಡ್ಡಿಗೆ ಕರೆದುಕೊಂಡು ಬರಲಾಗಿದೆ. ಈ ವೇಳೆ ದರ್ಶನ್ ಆ ಒಂದು ಶೆಡ್ಡುಗೆ ಆಗಮಿಸಕ್ಕೂ ಮುಂಚೆ ಆತನಿಗೆ ಹಲವರು ತೀವ್ರವಾದಂತ ಹಿಂಸೆ ಕಿರುಕುಳ ನೀಡಿದ್ದಾರೆ.
ರೇಣುಕಾಸ್ವಾಮಿ ಸಸ್ಯಹಾರಿ ಅಂದರೂ ಬಿಡದೆ ಆತನಿಗೆ ಬಿರಿಯಾನಿ ತಿನ್ನಿಸಿದ ಗ್ಯಾಂಗ್. ಕಿಡ್ನಾಪ್ ಆದ ಮಧ್ಯಾಹ್ನ ಡಿ ಬಾಸ್ ಗ್ಯಾಂಗ್ ರೇಣುಕಾ ಸ್ವಾಮಿಗೆ ಊಟ ಕೊಡಿಸಿದರು. ನಾನು ಸಸ್ಯಹಾರಿ ಅಂದರು ಬಿರಿಯಾನಿ ಮೂಳೆ ಬಾಯಿಗೆ ತುರುಕಿದ್ರು. ಈ ವೇಳೆ ಬಿರಿಯಾನಿಯನ್ನು ತಿನ್ನದೇ ಕೆಳಗೆ ಉಗುಳಿದ್ದ ರೇಣುಕಾಸ್ವಾಮಿ ಬಿರಿಯಾನಿ ಉಗುಳಿದಾಗ ಹಿಗ್ಗಾಮುಗ್ಗ ಥಳಿಸಿದ್ದರು.
ಬಾಸ್ ಬರ್ತಾರೆ ಒದೆ ತಿನ್ನಲು ರೆಡಿಯಾಗು ಎಂದು ಹಲ್ಲೆ ಮಾಡಿದ್ದಾರೆ. ಬಿರಿಯಾನಿ ತಿಂದರೆ ಶಕ್ತಿ ಬರುತ್ತೆ ತಿನ್ನು ಎಂದು ಟಾರ್ಚರ್ ನೀಡಿದ್ದಾರೆ.ಪೊಲೀಸರ ಮುಂದೆ ಆರೋಪಿ ದೀಪಕ್ ಹೇಳಿಕೆ ಕೊಟ್ಟಿದ್ದಾನೆ. ಅಲ್ಲದೆ ನೀನೆ ಕೂಡ ಆರೋಪಿ ದೀಪಕ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು ದರ್ಶನ್ ಅವರೇ ರೇಣುಕಾ ಸ್ವಾಮಿ ಮರ್ಮಾಂಗಕ್ಕೆ ಓದಿದ್ದಾರೆ ಎಂಬ ಹೇಳಿಕೆ ಕೂಡ ನೀಡಿದ್ದ ಎನ್ನಲಾಗಿದೆ.