ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳ ವ್ಯವಸ್ಥೆ ಬುಡಮೇಲಾಗಿದೆ ಎಂದು ಅವರದ್ದೇ ಪಕ್ಷದ ನಾಯಕರು ಹೇಳ್ತಿದಾರೆ. ವೈಸ್ ಚಾನ್ಸಲರ್ ಹುದ್ದೆಗೆ 5,6 ಕೋಟಿ ಕೊಟ್ಟು ಬಂದಿದ್ದಾರೆ ಎನ್ನುವ ಮೂಲಕ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಅವರ ಭ್ರಷ್ಟಾಚಾರವನ್ನು ಬಯಲಿಗಿಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ( Basavaraj Bommai ) ಅವರೇ, ನಿಮ್ಮವರದ್ದೇ ಈ ಆರೋಪದ ಬಗ್ಗೆ ತನಿಖೆ ಯಾವಾಗ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ), ಸಿಎಂ ಅವರನ್ನು ಪ್ರಶ್ನಿಸಿದೆ.
ಬಿಜೆಪಿ ಆಡಳಿತದಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳ ವ್ಯವಸ್ಥೆ ಬುಡಮೇಲಾಗಿದೆ ಎಂದು ಅವರದ್ದೇ ಪಕ್ಷದ ನಾಯಕರು ಹೇಳ್ತಿದಾರೆ.
ವೈಸ್ ಚಾನ್ಸಲರ್ ಹುದ್ದೆಗೆ 5,6 ಕೋಟಿ ಕೊಟ್ಟು ಬಂದಿದ್ದಾರೆ ಎನ್ನುವ ಮೂಲಕ ಸಚಿವ @drashwathcn ಅವರ ಭ್ರಷ್ಟಾಚಾರವನ್ನು ಬಯಲಿಗಿಟ್ಟಿದ್ದಾರೆ.@BSBommai ಅವರೇ, ನಿಮ್ಮವರದ್ದೇ ಈ ಆರೋಪದ ಬಗ್ಗೆ ತನಿಖೆ ಯಾವಾಗ? pic.twitter.com/Czwa41IIzT
— Karnataka Congress (@INCKarnataka) November 27, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, #40PercentSarkara ದ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳು ಭ್ರಷ್ಟಾಚಾರದಿಂದ ಮೃತ್ಯುಕೂಪಗಳಾಗಿ ಬದಲಾಗಿವೆ. ಹಣವಿಲ್ಲದಿದ್ದರೆ ಜೀವವೇ ಇಲ್ಲ ಎಂಬಂತಹ ಪರಿಸ್ಥಿತಿ ಸರ್ಕಾರಿ ಅಸ್ಪತ್ರೆಗಳಲ್ಲಿದೆ. ತಮ್ಮ ಇಲಾಖೆಯನ್ನು ಗಮನಿಸದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಅವರಿಗೆ ಕಾಲಕಾಲಕ್ಕೆ ಕಮಿಷನ್ ತಲುಪಿದರೆ ಸಾಕು ಎಂದು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಿಡಿಕಾರಿದೆ.
#40PercentSarkara ದ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳು ಭ್ರಷ್ಟಾಚಾರದಿಂದ ಮೃತ್ಯುಕೂಪಗಳಾಗಿ ಬದಲಾಗಿವೆ.
ಹಣವಿಲ್ಲದಿದ್ದರೆ ಜೀವವೇ ಇಲ್ಲ ಎಂಬಂತಹ ಪರಿಸ್ಥಿತಿ ಸರ್ಕಾರಿ ಅಸ್ಪತ್ರೆಗಳಲ್ಲಿದೆ.ತಮ್ಮ ಇಲಾಖೆಯನ್ನು ಗಮನಿಸದ
ಆರೋಗ್ಯ ಸಚಿವ @mla_sudhakar ಅವರಿಗೆ ಕಾಲಕಾಲಕ್ಕೆ ಕಮಿಷನ್ ತಲುಪಿದರೆ ಸಾಕು ಎಂದು ಕಣ್ಮುಚ್ಚಿ ಕುಳಿತಿದ್ದಾರೆ. pic.twitter.com/3qayRWgphv— Karnataka Congress (@INCKarnataka) November 27, 2022