ಬೆಂಗಳೂರು: ಕನ್ನಡ ಭಾಷಾ ಅಭಿವೃದ್ಧಿ ವಿದೇಯಕದಲ್ಲಿ ತುಳು ಹಾಗೂ ಕೊಡವ ಭಾಷೆಗಳನ್ನು ( Kodava Language ) ಕೈಬಿಟ್ಟಿರುವ ಸರ್ಕಾರ ಇಂಗ್ಲಿಷಿಗೆ ಮಣೆ ಹಾಕಿದೆ. ಸ್ಥಳೀಯ ಸಂಸ್ಕೃತಿ, ಭಾಷೆಗಳನ್ನು ಮುಗಿಸಿ ಹಾಕುವ ನಾಗಪುರದ ಅಜೆಂಡಾವನ್ನು BJP ಪಾಲಿಸುತ್ತಿರುವುದು ಇದರಿಂದ ಸಾಬೀತಾಗಿದೆ. ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ವಾಗ್ಧಾಳಿ ನಡೆಸಿದೆ.
ಕನ್ನಡ ಭಾಷಾ ಅಭಿವೃದ್ಧಿ ವಿದೇಯಕದಲ್ಲಿ ತುಳು ಹಾಗೂ ಕೊಡವ ಭಾಷೆಗಳನ್ನು ಕೈಬಿಟ್ಟಿರುವ ಸರ್ಕಾರ ಇಂಗ್ಲಿಷಿಗೆ ಮಣೆ ಹಾಕಿದೆ.
ಸ್ಥಳೀಯ ಸಂಸ್ಕೃತಿ, ಭಾಷೆಗಳನ್ನು ಮುಗಿಸಿ ಹಾಕುವ ನಾಗಪುರದ ಅಜೆಂಡಾವನ್ನು @BJP4Karnataka ಪಾಲಿಸುತ್ತಿರುವುದು ಇದರಿಂದ ಸಾಬೀತಾಗಿದೆ.
ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ. pic.twitter.com/lSiO817eT4
— Karnataka Congress (@INCKarnataka) October 25, 2022
ಬಿಜೆಪಿಯ #40PercentSarkara ದ ಭ್ರಷ್ಟಾಚಾರದ ಅಸ್ತಿಪಂಜರವು ನರ್ತಿಸುತ್ತಿರುವಾಗ ರಸ್ತೆಗಳು ಸಾವಿನ ಹಾದಿಗಳಾಗಿವೆ. ಹಾಕಿದ ತೇಪೆ ಕೆಲವೇ ದಿನಗಳಲ್ಲಿ ಕಿತ್ತುಬರುತ್ತಿದೆ ಎಂದರೆ ನಿಮ್ಮ ಸರ್ಕಾರದ ಭ್ರಷ್ಟಾಚಾರದ ನರ್ತನ ಎಷ್ಟಿರಬಹುದು ಬಸವರಾಜ ಬೊಮ್ಮಾಯಿ ಅವರೇ? ಕೇವಲ ರಸ್ತೆ ಗುಂಡಿಗಳನ್ನ ಸರಿಪಡಿಸಲಾಗದವರಿಂದ ಇನ್ಯಾವ ಅಭಿವೃದ್ಧಿ ಸಾಧ್ಯ? ಎಂದು ಪ್ರಶ್ನಿಸಿದೆ.
ಬಿಜೆಪಿಯ #40PercentSarkara ದ ಭ್ರಷ್ಟಾಚಾರದ ಅಸ್ತಿಪಂಜರವು ನರ್ತಿಸುತ್ತಿರುವಾಗ ರಸ್ತೆಗಳು ಸಾವಿನ ಹಾದಿಗಳಾಗಿವೆ.
ಹಾಕಿದ ತೇಪೆ ಕೆಲವೇ ದಿನಗಳಲ್ಲಿ ಕಿತ್ತುಬರುತ್ತಿದೆ ಎಂದರೆ ನಿಮ್ಮ ಸರ್ಕಾರದ ಭ್ರಷ್ಟಾಚಾರದ ನರ್ತನ ಎಷ್ಟಿರಬಹುದು @BSBommai ಅವರೇ?
ಕೇವಲ ರಸ್ತೆ ಗುಂಡಿಗಳನ್ನ ಸರಿಪಡಿಸಲಾಗದವರಿಂದ ಇನ್ಯಾವ ಅಭಿವೃದ್ಧಿ ಸಾಧ್ಯ?#SayCM pic.twitter.com/d6o2xOVfOm
— Karnataka Congress (@INCKarnataka) October 25, 2022
ಹುದ್ದೆ ಮಾರಾಟದ ಸರ್ಕಾರ ಕೆಎಎಸ್ ಹುದ್ದೆಗಳಿಂದ ಹಿಡಿದು ಗ್ರೂಪ್ ಡಿ ವರೆಗೂ ಹುದ್ದೆಗಳನ್ನು ಭರ್ತಿ ಮಾಡದೆ ಕುಳಿತಿರುವಾಗ ಆಡಳಿತ ಯಂತ್ರ ಕಾರ್ಯ ನಿರ್ವಹಿಸುವುದಾದರೂ ಹೇಗೆ? ಬಸವರಾಜ ಬೊಮ್ಮಾಯಿ ಅವರೇ, ಮಾಧುಸ್ವಾಮಿಯವರು ಹೇಳಿದಂತೆ ಮ್ಯಾನೇಜ್ ಮಾಡ್ತಿರೋ ತಳ್ಳುವ ಸರ್ಕಾರ ಅಲ್ಲವೇ ನಿಮ್ಮದು? ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ? #SayCM ಎಂದು ಕೇಳಿದೆ.
ಹುದ್ದೆ ಮಾರಾಟದ ಸರ್ಕಾರ ಕೆಎಎಸ್ ಹುದ್ದೆಗಳಿಂದ ಹಿಡಿದು ಗ್ರೂಪ್ ಡಿ ವರೆಗೂ ಹುದ್ದೆಗಳನ್ನು ಭರ್ತಿ ಮಾಡದೆ ಕುಳಿತಿರುವಾಗ ಆಡಳಿತ ಯಂತ್ರ ಕಾರ್ಯ ನಿರ್ವಹಿಸುವುದಾದರೂ ಹೇಗೆ?@BSBommai ಅವರೇ, ಮಾಧುಸ್ವಾಮಿಯವರು ಹೇಳಿದಂತೆ ಮ್ಯಾನೇಜ್ ಮಾಡ್ತಿರೋ ತಳ್ಳುವ ಸರ್ಕಾರ ಅಲ್ಲವೇ ನಿಮ್ಮದು?
ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ?#SayCM pic.twitter.com/0bowechzgZ
— Karnataka Congress (@INCKarnataka) October 25, 2022