ಮಂಗಳೂರು: ಇಂದು ಮಂಗಳೂರು ಮಹಾನಗರ ಪಾಲಿಕೆಗೆ ನಡೆದಂತ ಚುನಾವಣೆಯಲ್ಲಿ ( Mangaluru City Corporation Election ) ಮೇಯರ್ ಆಗಿ ಬಿಜೆಪಿ ಜಯನಂದ ಅಂಚನ್ ಹಾಗೂ ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗಾಗಿ ಇಂದು ಚುನಾವಣೆ ನಡೆಸಲಾಗಿಯಿತು. ಈ ಚುನಾವಣೆಗೆ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಜಯನಂದ ಶೆಟ್ಟಿ ಹಾಗೂ ಕಾಂಗ್ರೆಸ್ ನಿಂದ ಶಶಿಧರ್ ಹೆಗ್ಡೆ ಸ್ಪರ್ಧಿಸಿದ್ದರು. ಇನ್ನು ಉಪ ಮೇಯರ್ ಹುದ್ದೆಗಾಗಿ ಬಿಜೆಪಿಯಿಂದ ಪೂರ್ಣಿಮಾ, ಕಾಂಗ್ರೆಸ್ ನಿಂದ ಝೀನತ್ ಸಂಶುದ್ದೀನ್ ಕಣದಲ್ಲಿದ್ದರು.
ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ನಡೆದ ಮತದಾನದಲ್ಲಿ ಬಿಜೆಪಿಯ ಅಭ್ಯರ್ಥಿ ಜಯನಂದ ಅಂಚನ್, ಪೂರ್ಣಿಮಾ 46 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ರೇ, ಕಾಂಗ್ರೆಸ್ ಅಭ್ಯರ್ಥಿ ಜಯನಂದ ಶೆಟ್ಟಿ, ಝೀನತ್ ಸಂಶುದ್ಧೀನ್ 14 ಮತಗಳನ್ನು ಪಡೆದು ಸೋಲು ಕಂಡರು.
ಅಂದಹಾಗೇ ಪಾಲಿಕೆಯಲ್ಲಿ 60 ಸ್ಥಾನಗಳಿದ್ದು, ಬಿಜೆಪಿಯ 44 ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 14 ಸದಸ್ಯರಿದ್ದರೇ, ಎಸ್ ಡಿ ಪಿ ಐ ನ ಇಬ್ಬರು ಸದಸ್ಯರಿದ್ದರು. ಇಂದಿನ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಇಬ್ಬರು ಶಾಸಕರು ಸೇರಿ 62 ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಎಸ್ ಡಿ ಪಿಐನ ಇಬ್ಬರು ಸದಸ್ಯರು ಯಾರಿಗೂ ಮತ ಚಲಾಯಿಸಿದರೇ ತಟಸ್ಥತೆ ಕಾಯ್ದೆಕೊಂಡಿದ್ದರು.