ಮಂಡ್ಯ: ಜಿಲ್ಲೆಯಲ್ಲಿ ಆರ್ ಎಸ್ ಎಸ್ ನಾಯಕರು ಹಾಗೂ ಬಿಜೆಪಿ ಮುಖಂಡರಿಗೆ ಹನಿಟ್ರ್ಯಾಪ್ ಮಾಡಿದಂತ ಯುವತಿಯನ್ನು ಬಂಧಿಸಲಾಗಿದೆ. ಅಲ್ಲದೇ ಶಾಕಿಂಗ್ ಮಾಹಿತಿ ಎನ್ನುವಂತೆ ಲಕ್ಷ ಲಕ್ಷ ಹಣವನ್ನು ಹನಿಟ್ರ್ಯಾಫ್ ಹೆಸರಿನಲ್ಲಿ ಆ ಯುವತಿ ಪೀಕಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ.
BIGG NEWS : ವೀರ ಸಾವರ್ಕರ್ ಕುರಿತು ಮಾತನಾಡುವುದು ಕಾಂಗ್ರೆಸ್ ನಾಯಕರ ದೌರ್ಬಲ್ಯ : ಸಚಿವ ಸುಧಾಕರ್ ವಾಗ್ದಾಳಿ
ಮಂಡ್ಯದಲ್ಲಿನ ಪ್ರಸಿದ್ಧ ಶ್ರೀನಿಧಿ ಜ್ಯೂವೆಲರ್ಸ್ ಮಾಲೀಕ ಜಗನ್ನಾಥ ಶೆಟ್ಟಿ ಸೇರಿದಂತೆ ಅನೇಕರಿಗೆ ಹನಿಟ್ರ್ಯಾಫ್ ಮೂಲಕ ಹಣ ವಸೂಲಿ ಮಾಡಿದಂತ ಆರೋಪದಲ್ಲಿ, ಮಂಡ್ಯದ ಪಶ್ಚಿಮ ಠಾಣೆಯ ಪೊಲೀಸರು ಸಲ್ಮಾ ಭಾನು ಎಂಬಾಕೆಯನ್ನು ಬಂಧಿಸಿದ್ದಾರೆ.
ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದು ತಪ್ಪಲ್ಲ: ಸಿದ್ಧರಾಮಯ್ಯ ಬೆಂಬಲಕ್ಕೆ ನಿಂತ ಪ್ರಮೋದ್ ಮುತಾಲಿಕ್
ಬಂಧಿತ ಯುವತಿ ಸಲ್ಮಾ ಭಾನು ಬಿಜೆಪಿ, ಆರ್ ಎಸ್ ಎಸ್ ಮುಖಂಡರನ್ನು ಗುರಿಯಾಗಿರಿಸಿಕೊಂಡು ಹನಿಟ್ರ್ಯಾಫ್ ನಡೆಸಿ, ಹಣ ಸುಲಿಗೆ ಮಾಡಿರೋದಾಗಿ ಹೇಳಲಾಗುತ್ತಿದೆ. ಹೀಗಾಗಿ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ಅಂದಹಾಗೇ ಬಂಧಿತ ಯುವತಿ ಸಲ್ಮಾ ಭಾನು ಬಿಜೆಪಿ ಮುಖಂಡ ಹಾಗೂ ಜ್ಯೂವೆಲರ್ಸ್ ಮಾಲೀಕ ಜಗನ್ನಾಥ ಶೆಟ್ಟಿಯವರಿಂದ 50 ಲಕ್ಷವನ್ನು ಹನಿಟ್ರ್ಯಾಫ್ ಹೆಸರಿನಲ್ಲಿ ಪೀಕಿದ್ದಾರೆ ಎನ್ನಲಾಗಿದೆ. ಆಕೆಯೊಂದಿಗೆ ಈ ಪ್ರಕರಣದಲ್ಲಿ ಮತ್ತಾರ್ ಇದ್ದಾರೆ ಎನ್ನುವ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.