ಬೆಂಗಳೂರು: ಬಿಜೆಪಿಯಿಂದ ಕೊಪ್ಪಳದಲ್ಲಿ ಕಚೇರಿ ಉದ್ಘಾಟನೆ ಕಾರ್ಯಕ್ರಮ ಸೇರಿದಂತೆ ವಿವಿಧ ಪ್ರೋಗ್ರಾಂಗಳಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೊರಗಿಡಲಾಗಿತ್ತು. ಅದರಲ್ಲೂ ಕೊಪ್ಪಳದ ಬಿಜೆಪಿ ಕಚೇರಿಯ ನಾಳಿನ ಉದ್ಘಾಟನಾ ಕಾರ್ಯಕ್ರಮದ ಪತ್ರಿಕಾ ಪ್ರಕಟಣಯಲ್ಲಿ ಯಡಿಯೂರಪ್ಪ ಅವರ ಪೋಟೋವನ್ನೇ ಕೈಬಿಡಲಾಗಿತ್ತು. ಇದರಿಂದ ಬಿಎಸ್ ವೈ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದ್ರೇ ಇದೀಗ ಅವರ ಮನವೊಲಿಕೆಯಲ್ಲಿ ಬಿಜೆಪಿ ನಾಯಕರು ಸಕ್ಸಸ್ ಆಗಿದ್ದಾರೆ. ನಾಳಿನ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ನಾಳಿನ ಕೊಪ್ಪಳ ಬಿಜೆಪಿ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ( Farmer Chief Minister BS Yediyurappa ) ಭಾಗಿಯಾಗಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಅಂದಹಾಗೇ ಇಂದು ಎನ್ ರವಿಕುಮಾರ್ ಅಲ್ಲದೇ ದೆಹಲಿಯಿಂದ ಬಿಜೆಪಿ ನಾಯಕರು, ಕೊಪ್ಪಳ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು. ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೂಡ ಭೇಟಿಯಾಗಿ ಬಿಎಸ್ ವೈ ಮನವೊಲಿಸಿದ್ದರು. ಅಲ್ಲದೇ ಗದಗ ಬಿಜೆಪಿ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ದೆಹಲಿ ನಾಯಕರ ಕರೆ ಹಿನ್ನಲೆಯಲ್ಲಿ ನಾಳಿನ ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿರುವುದಾಗಿ ತಿಳಿದು ಬಂದಿದೆ.