ಬೆಂಗಳೂರು: ನಗರದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ಅನೇಕರನ್ನು ಬಲಿ ಪಡೆದಿದ್ದರೇ, ಹಲವರು ರಸ್ತೆ ಗುಂಡಿಯಿಂದಾಗಿ ( Road Potholes ) ಬಿದ್ದು ಗಾಯಗೊಂಡಿದ್ದಾರೆ. ಇಂದು ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಬಿದ್ದಂತ ಬೈಕ್ ಸವಾರನು ಮಾತ್ರ, ಅಲ್ಲೇ ಕುಳಿತು ರಿಪೇರಿಗಾಗಿ ಅರ್ಧಗಂಟೆ ಪ್ರತಿಭಟನೆ ನಡೆಸಿದಂತ ಘಟನೆ ನಡೆದಿದೆ.
ಹೌದು ಬೆಂಗಳೂರಿನ ಹಲಸೂರು ರಸ್ತೆಯಲ್ಲಿನ ರಸ್ತೆ ಗುಂಡಿಗೆ ಬೈಕ್ ಸವಾರನೊಬ್ಬ ಇಂದು ಬಿದ್ದಿದ್ದನು. ರಸ್ತೆ ಗುಂಡಿಯಿಂದಾಗಿ ಬಿದ್ದಂತ ಆತನಿಗೆ ಗಾಯ ಕೂಡ ಆಗಿತ್ತು. ಇದರಿಂದಾಗಿ ಸಿಟ್ಟುಕೊಂಡಂತ ಆತ, ರೋಡ್ ಟ್ಯಾಕ್ ಕಟ್ಟುತ್ತೇವೆ. ನಾವು ಸಂಚರಿಸುವಂತ ರಸ್ತೆಯಲ್ಲಿ ಹೀಗೆ ಗುಂಡಿಗಳಾಗಿ ಬಿದ್ದು ಗಾಯಗೊಂಡರೇ ಅದಕ್ಕೆ ಹೊಣೆಯಾರು.? ಈ ಕೂಡಲೇ ಈ ರಸ್ತೆ ಗುಂಡಿ ಮುಚ್ಚುವಂತೆ ಬೈಕ್ ಅಲ್ಲಿಯೇ ನಿಲ್ಲಿಸಿ ಸುಮಾರು ಅರ್ಧಗಂಟೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಈ ಕುರಿತಂತೆ ಟ್ವಿಟ್ ( Twitter ) ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ( Karnataka Congress ), ಬೆಂಗಳೂರಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ? “ಮಾನ, ಮರ್ಯಾದೆ, ನಾಚಿಕೆ” ಈ ಮೂರನ್ನೂ ಬಿಟ್ಟಿದೆ ಎಂದು ಕಿಡಿಕಾರಿದೆ.
ಬೆಂಗಳೂರಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ್ದಾರೆ.
ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ?
"ಮಾನ, ಮರ್ಯಾದೆ, ನಾಚಿಕೆ"
ಈ ಮೂರನ್ನೂ ಬಿಟ್ಟಿದೆ#TroubleEngineSarkara pic.twitter.com/pPMhG4A1og— Karnataka Congress (@INCKarnataka) November 12, 2022
‘ಮೋದಿ ಈಗ ಚಲಾವಣೆ ಇಲ್ಲದ ನಾಣ್ಯ” ಹಾಗಾಗಿ ಖಾಲಿ ಕುರ್ಚಿಗಳಿಗೆ ಭಯ ಬಿದ್ದ ಬಿಜೆಪಿ ಹಣದ ಆಮಿಷ ಒಡ್ಡಿ ಜನರನ್ನು ಕರೆತಂದಿದೆ. ವಂಚಕ ಬಿಜೆಪಿ ಕಾರ್ಮಿಕರಿಗೆ ಹಣ ನೀಡುವುದರಲ್ಲೂ ವಂಚಿಸಿದೆ, ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರದ ಕಮಿಷನ್ 100% ಗೆ ಏರಿಕೆಯಾಗಿದೆಯೇ?! ಎಂದು ಕೇಳಿದೆ.
'ಮೋದಿ ಈಗ ಚಲಾವಣೆ ಇಲ್ಲದ ನಾಣ್ಯ"
ಹಾಗಾಗಿ ಖಾಲಿ ಕುರ್ಚಿಗಳಿಗೆ ಭಯ ಬಿದ್ದ ಬಿಜೆಪಿ ಹಣದ ಆಮಿಷ ಒಡ್ಡಿ ಜನರನ್ನು ಕರೆತಂದಿದೆ.ವಂಚಕ ಬಿಜೆಪಿ ಕಾರ್ಮಿಕರಿಗೆ ಹಣ ನೀಡುವುದರಲ್ಲೂ ವಂಚಿಸಿದೆ,@BSBommai ಅವರೇ, ನಿಮ್ಮ ಸರ್ಕಾರದ ಕಮಿಷನ್ 100% ಗೆ ಏರಿಕೆಯಾಗಿದೆಯೇ?! pic.twitter.com/r30dOogQB9
— Karnataka Congress (@INCKarnataka) November 12, 2022