ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಗಂಡು ಮೇಕೆಯೊಂದು ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕಾರಣ.ಈ ಗುಂಡು ಮೇಕೆ ಹಾಲು ಕೊಡುತ್ತಿದೆ.
BIGG NEWS: ಭಾರತ್ ಜೋಡೋ ಯಾತ್ರೆ ವೇಳೆ ʼಅಮ್ಮನ ಶೂ ಲೇಸ್ʼ ಕಟ್ಟಿದ ರಾಹುಲ್ ಗಾಂಧಿ|Bharat Jodo Yatra
ಹೌದು, ಅಚ್ಚರಿಯಾದ್ರೂ ಇದು ನಿಜ, ಜಮಖಂಡಿನಗರದ ಟೀಚರ್ಸ್ ಕಾಲನಿಯ ನಿವಾಸಿ ಪರಶುರಾಮ ಭಜಂತ್ರಿ ಎನ್ನುವವರಿಗೆ ಸೇರಿದ ಮೂರು ವರ್ಷದ ಗಂಡು ಮೇಕೆಯೊಂದು ನಿತ್ಯ ಹಾಲು ಕೊಡುತ್ತಿದೆ. ಪ್ರತಿನಿತ್ಯ ಒಂದು ಸಣ್ಣ ಬಟ್ಟಲಿನಷ್ಟು ಹಾಲನ್ನು ಕುರಿಗಾಹಿ ಪರಶುರಾಮ ಅವರು ಕರೆಯುತ್ತಿದ್ದಾರೆ. ಸದ್ಯ ಈ ಗಂಡು ಮೇಕೆ ಊರಿನ ಜನರ ಗಮನ ಸೆಳೆದಿದೆ. ಗಂಡು ಮೇಕೆಯನ್ನು ಸುತ್ತಮುತ್ತಲಿನ ಗ್ರಾಮಸ್ಥರು ನೋಡಲು ಬರುತ್ತಿದ್ದಾರೆ.