ಬೆಂಗಳೂರು: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಿದ್ದು, ರಾಹುಲ್ ಗಾಂಧಿ ಹೆಜ್ಜೆಹಾಕಿದ್ದಾರೆ.ರಾಹುಲ್ ಗಾಂಧಿಯವರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ತಾಯಿಯ ಶೂನ ಲೇಸ್ ಕಟ್ಟಿದ್ದಾರೆ.
BIGG NEWS: ರಾಹುಲ್ ಗಾಂಧಿ ಪತ್ತೆ ಹಚ್ಚಿದ್ದ ಗಾಯಗೊಂಡ ಆನೆ ಮರಿಗೆ ಸೂಕ್ತ ಚಿಕಿತ್ಸೆ: ಸಿಎಂ ಬೊಮ್ಮಾಯಿ ಭರವಸೆ
ಈ ಫೋಟೋವನ್ನು ಕಾಂಗ್ರೆಸ್ ಪಕ್ಷದ ಪರಿಶೀಲಿಸಿದ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಜೊತೆಯಲ್ಲೇ ಅದಕ್ಕೆ ಅಮ್ಮ ಎಂಬ ವಿವರಣೆ ನೀಡಲಾಗಿದೆ. ಜೊತೆಯಲ್ಲೇ ಲವ್ ಸಿಂಬಲ್ ಕೂಡಾ ಹಾಕಲಾಗಿದೆ.ಇದೀಗ ಈ ಫೋಟೋ ಹಾಗೂ ಅದಕ್ಕೆ ಹಾಕಿರುವ ಕ್ಯಾಪ್ಶನ್ ನೆಟ್ಟಿಗರ ಕಾಮೆಂಟ್ಗೆ ಆಹಾರವಾಗಿ ಪರಿಣಮಿಸಿದೆ..!
BIGG NEWS: ರಾಹುಲ್ ಗಾಂಧಿ ಪತ್ತೆ ಹಚ್ಚಿದ್ದ ಗಾಯಗೊಂಡ ಆನೆ ಮರಿಗೆ ಸೂಕ್ತ ಚಿಕಿತ್ಸೆ: ಸಿಎಂ ಬೊಮ್ಮಾಯಿ ಭರವಸೆ
ಪ್ರಧಾನಿ ಮೋದಿ ಅವರು ತಮ್ಮ ತಾಯಿಯ ಜೊತೆ ಇರುವ ಫೋಟೋ ಹಾಕಿದಾಗ ಅದನ್ನು ವಿರೋಧಿಸುತ್ತೀರಾ ಏಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ತಾಯಿಯ ಸೇವೆ ಮಾಡುವ ಕ್ಯಾಮರಾಮನ್ ಬೇಕೇ ಎಂದು ಪ್ರಶ್ನಿಸುತ್ತೀರಾ.. ಈಗ ನೀವು ಮಾಡ್ತಿರೋದೇನು? ಇದೇ ಪ್ರಶ್ನೆ ನಿಮಗೆ ಕೇಳಬಹುದಲ್ಲವೇ ಎಂದು ಯೋಗಿ ಎಂಬುವರು ಪ್ರಶ್ನಿಸಿದ್ದಾರೆ.