ಕೊಪ್ಪಳ : ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ಹೊರಹರಿವು ಹೆಚ್ಚಾದ ಪರಿಣಾಮ ಪ್ರವಾಹ ಪರಿಸ್ಥಿತಿ ಎದುರಾಗಿದೆ.
BIGG NEWS : ಮದ್ಯಪ್ರಿಯರೇ ಗಮನಿಸಿ : ಇಂದು ಈ ಜಿಲ್ಲೆಯಲ್ಲಿ ಮದ್ಯಮಾರಾಟ ನಿಷೇಧ
ತುಂಗಾಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ವಿಜಯನಗರ ಜಿಲ್ಲಾಡಳಿತ ಕಂಪ್ಲಿ-ಗಂಗಾವತಿ ಸೇತುವೆ ಮೇಲೆ ಸಂಚಾರವನ್ನು ನಿಷೇಧಿಸಿದೆ. ನದಿಯ ದಡದಲ್ಲಿರುವ ಎಕರೆಗಟ್ಟಲೆ ಬಾಳೆ ತೋಟಗಳು ಮುಳುಗಡೆಯಾಗಿವೆ. ಪುರಂದರ ಮಂಟಪ, ವಿಜಯನಗರ ಕಾಲದ ಕಾಲುಸೇತುವೆ, ಚಕ್ರತೀರ್ಥ, ಸ್ನಾನಘಟ್ಟ ಸೇರಿದಂತೆ ಹಂಪಿಯ ಹಲವಾರು ಸ್ಮಾರಕಗಳು ಮುಳುಗಡೆಯಾಗಿವೆ.
Breaking news: ಉತ್ತರ ಪ್ರದೇಶ ಸಿಎಂ ʻಯೋಗಿ ಆದಿತ್ಯನಾಥ್ʼಗೆ ಬಾಂಬ್ ಬೆದರಿಕೆ ಸಂದೇಶ… ಚುರುಕುಗೊಂಡ ತನಿಖೆ
ತುಂಗಭದ್ರಾ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ, ಮುಂದಿನ ಒಂದೆರಡು ದಿನಗಳಲ್ಲಿ ಕೆಳಭಾಗದ ಪ್ರವಾಹ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.
ಇನ್ನು ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಚಿಕ್ಕೋಡಿ ಮತ್ತು ಗೋಕಾಕ್ ನಲ್ಲಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಐದು ತಗ್ಗು ಸೇತುವೆಗಳು ಜಲಾವೃತಗೊಂಡಿವೆ. ಭಾರಿ ಒಳಹರಿವಿನ ನಿರೀಕ್ಷೆಯಲ್ಲಿ, ಆಲಮಟ್ಟಿ ಅಣೆಕಟ್ಟಿನಿಂದ ಸೋಮವಾರ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ಗೂ ಹೆಚ್ಚು ನೀರನ್ನು ಹೊರಬಿಡಲಾಗಿದೆ.