ಬೆಂಗಳೂರು: ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ಸಹಾಯ ಧನವನ್ನು ನೀಡಲಾಗುತ್ತಿದೆ. ಹೀಗೆ ನೀಡುವಂತ ಯೋಜನೆಯ ಹಣ ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಗಿತ್ತು. ಆದ್ರೇ ಸರ್ಕಾರ ನೀಡಿದಂತ ಗಡುವು ವಿಸ್ತರಿಸಿದ್ದರೂ, ಈವರೆಗೆ ಅನೇಕ ರೈತರು ನೋಂದಣಿ ಮಾಡಿಲ್ಲ. ಹೀಗಾಗಿ ರಾಜ್ಯದ 16 ಲಕ್ಷಕ್ಕೂ ಹೆಚ್ಚು ರೈತರಿಗೆ ಸಮ್ಮಾನ್ ಹಣ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಗ್ ಶಾಕ್ ನೀಡಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯಲು ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸುವಂತೆ ಕೇಂದ್ರ ಸರ್ಕಾರ ರೈತರಿಗೆ ಸೂಚಿಸಿತ್ತು. ನೀಡಿದ್ದಂತ ಗಡುವು ವಿಸ್ತರಣೆಯಾಗುತ್ತಾ ಬಂದರೂ ಕರ್ನಾಟಕದ 16,89,402 ಅನ್ನದಾತರು ಮಾತ್ರ ಇ-ಕೆವೈಸಿ ಗೊಡವೆಗೇ ಹೋಗದೇ ಮಾಡಿಸಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಅಂದಹಾಗೇ ರಾಜ್ಯದಲ್ಲಿ ಆಧಾರ್ ಆಧಾರಿತ 53,91,573 ರೈತರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಹೀಗೆ ಪಿಎಂ ಸಮ್ಮಾನ್ ಯೋಜನೆಗೆ ನೋಂದಾಯಿತರಾದಂತ ರೈತರಲ್ಲಿ ಕೇವಲ 37 ಲಕ್ಷ ರೈತರಷ್ಟೇ ಈವರೆಗೆ ಇ-ಕೆವೈಸಿ ಮಾಡಿಸಿದ್ದಾರೆ. ಇನ್ನುಳಿದಂತ 16 ಲಕ್ಷಕ್ಕೂ ಹೆಚ್ಚು ಯೋಜನೆಯ ಫಲಾನುಭವಿಗಳು ಮಾಡಿಸಿಲ್ಲ ಎಂಬುದು ಮಾಹಿತಿಯಿಂದ ತಿಳಇದು ಬಂದಿದೆ.
ಇನ್ನೂ ಬೆಳಗಾವಿ ಜಿಲ್ಲೆಯಲ್ಲೇ ಹೆಚ್ಚು ರೈತರು ಪಿಎಂ ಕಿಸಾನ್ ಯೋಜನೆಗೆ ಆಧಾರ್ ಲಿಂಕ್ ಮಾಡಿಲ್ಲ. ಈ ಬಳಿಕ ತುಮಕೂರು ಎರಡನೇ ಸ್ಥಾನದಲ್ಲಿದೆ. ಕಲಬುರ್ಗಿ, ಹಾಸನ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ರಾಯಚೂರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ರೈತರಿದ್ದಾರೆ. ಇವರಿಗೆಲ್ಲ ಈಗ ಪಿಎಂ ಕಿಸಾನ್ ಯೋಜನೆಯ ಹಣ ಸ್ಥಗಿತಗೊಂಡಿರೋದಾಗಿ ತಿಳಿದು ಬಂದಿದೆ.
Rain in Karnataka: ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಇಂದಿನಿಂದ ರಾಜ್ಯಾಧ್ಯಂತ ಐದು ದಿನ ಮಳೆ
ಶೂನ್ಯ ಡಿಗ್ರಿಯತ್ತ ಸಾಗಿದ ಉತ್ತರ ಭಾರತ ತಾಪಮಾನ: ಚಳಿಯಿಂದ ಜನತೆ ಗಡಗಡ | Winter Session