ಮೈಸೂರು: ಗುಜರಾತ್ ವಿಧಾನಸಭಾ ಚುನಾವಣೆಯ ( Gujarat Election Results ) ಗೆಲುವಿನ ಅಲೆಯಲ್ಲಿರುವಂತ ಕರ್ನಾಟಕ ಬಿಜೆಪಿಯು ( BJP Karnataka ), ರಾಜ್ಯದಲ್ಲಿಯೂ ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದ್ರೇ ಇದೇ ಹೊತ್ತಿನಲ್ಲಿಯೇ ಪಕ್ಷಕ್ಕೆ ಬಿಗ್ ಶಾಕ್ ಎನ್ನುವಂತೆ ಮಾಜಿ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಬಿಜೆಪಿ ತೊರೆದು, ಕಾಂಗ್ರೆಸ್ ( Congress ) ಸೇರುವುದಾಗಿ ಘೋಷಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿಯಂತ ಮೋಸಗಾರರು ಬೇರೆ ಯಾರೂ ಇಲ್ಲ. ಹೀಗಾಗಿ ನಾನು ಬಿಜೆಪಿ ಪಕ್ಷ ತೆರೆದು, ಜನವರಿಯಲ್ಲಿ ಕಾಂಗ್ರೆಸ್ ಸೇರುತ್ತೇನೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಜೊತೆಗೂ ಈ ಬಗ್ಗೆ ಮಾತನಾಡಿರುವುದಾಗಿ ಹೇಳಿದ್ದಾರೆ.
ಹೆಚ್ ವಿಶ್ವನಾಥ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ನನ್ನನ್ನು ಬಿಜೆಪಿಯವರು ಬಲಿಪಶುವನ್ನಾಗಿ ಮಾಡಿದ್ದಾರೆ. ಈಗ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸರದಿ. ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕೆ ಇಳಿಸಿ, ಬಲಿ ಕೊಡುವ ಪ್ಲಾನ್ ಮಾಡಲಾಗಿದೆ ಎಂದರು.
BIG NEWS : ʻಪ್ರತಿ ಕರೆನ್ಸಿಯ ಎದುರು ಭಾರತೀಯ ರೂಪಾಯಿ ಪ್ರಬಲವಾಗಿದೆʼ: ಕೇಂದ್ರ ನಿರ್ಮಲಾ ಸೀತಾರಾಮನ್
ಸಿದ್ಧರಾಮಯ್ಯ ಅವರ ವಿರುದ್ಧ ಬಿವೈ ವಿಜಯೇಂದ್ರ ಕಣಕ್ಕೆ ಇಳಿಯುವುದು ಬೇಡ. ಶಿಕಾರಿಪುರದಿಂದಲೇ ಅವರು ಸ್ಪರ್ಧಿಸಲಿ. ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ರಾಜಕೀಯವಾಗಿ ಬೆಳೆಯಬೇಕಾಗಿದೆ ಎಂದು ಹೇಳಿದರು.