ಬಾಗಲಕೋಟೆ : ಲೋಕಸಭೆ ಚುನಾವಣೆ ಹಿನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಸರ್ಕಾರಿ ಐಬಿಯಲ್ಲಿ ಜಿಲ್ಲಾ ಪಂಚಾಯ್ತಿ ಇಂಜಿನೀಯಗಳು ಗುತ್ತಿಗೆದಾರರ ಜೊತೆ ಸೇರಿ ಭರ್ಜರಿಯಾಗಿ ಬಿಂದಾಸ್ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ಸರ್ಕಾರಿ ಐಬಿ ರಮಾ ನಿವಾಸದಲ್ಲಿ ನಡೆದಿದೆ.
ಹೌದು ಸರ್ಕಾರಿ ಐಬಿಯಲ್ಲಿ ಅಧಿಕಾರಿಗಳಿಂದಲೇ ಭರ್ಜರಿ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಿಲ್ಲಾ ಪಂಚಾಯತ್ ಇಂಜಿನಿಯರ್ಗಳು ಮೋಜು ಮಸ್ತಿ ಮಾಡಿದ್ದಾರೆ. ನೀತಿ ಸಂಹಿತೆ ನಡುವೆ ಕೂಡ ಐವಿಯಲ್ಲಿಯೇ ಬಿಂದಾಸ್ ಪಾರ್ಟಿ ಮಾಡಿದ್ದಾರೆ. ಕಚೇರಿಗೆ ಚಕ್ಕರ್ ಹೊಡೆದು ಹಾಡು ಹಗಲೇ ಮಧ್ಯ ಸೇವನೆ ಮಾಡಿದ್ದಾರೆ.
ಅಧಿಕಾರೆಗಳೆಲ್ಲ ಜಮಖಂಡಿ ವಿಭಾಗದ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಗಳು ಎಂದು ಹೇಳಲಾಗುತ್ತಿದೆ. ಎಇಇ ಎಂ ಎಸ್ ನಾಯಕ್, ಇಂಜಿನಿಯರ್ ರಾಮಪ್ಪ,, ಜಗದೀಶ್ ನಾಡಗೌಡ, ಗಜಾನನ ಪಾಟೀಲ್, ಶ್ರೀಶೈಲ ಹೂಗಾರ ಹಾಗೂ ಗುತ್ತಿಗೆದಾರರಾದ ಸಾಗರ್, ಶೀತಲ ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಸಾರ್ವಜನಿಕ ಸೇವೆ ಮಾಡುವ ಅಧಿಕಾರಿಗಳು ಈ ರೀತಿ ಪಾರ್ಟಿ ಮಾಡುವುದನ್ನು ತಿಳಿದು ಆಕ್ರೋಶ ಹೊರಹಾಕಿದ್ದಾರೆ.