ಬೀದರ್ : ರಾಜ್ಯಾದ್ಯಂತ ಮುಂಗಾರು ಎಂಟ್ರಿಗು ಮುನ್ನವೇ ವರುಣ ಅಬ್ಬರಿಸುತ್ತಿದ್ದು, ಬೀದರ್ ನಲ್ಲಿ ಮನೆಯ ಮೇಲ್ಚಾವಣಿ ಕುಸಿದು ಐದು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಇಬ್ಬರು ಮಕ್ಕಳ ಹಾಗೂ ಮಹಿಳೆ ಸೇರಿದಂತೆ ಐವರಿಗೆ ಗಂಭೀರವಾದ ಗಯಗಳಾಗಿರುವ ಘಟನೆ ನಡೆದಿದೆ. ಬೀದರ್ ನ ಕಮಠಾಣಾ ಎಂಬ ಗ್ರಾಮದಲ್ಲಿ ಮಳೆಯಿಂದ ಮನೆಯ ಮೇಲ್ಚಾವಣಿ ಕುಸಿದು ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪ್ರಿನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅದೇ ರೀತಿಯಾಗಿ ರಾಯಚೂರಲ್ಲಿ ಕೂಡ ಹಲವಡೆ ಸುರಿದ ಮಳೆಯಿಂದಾಗಿ ಅವಾಂತರ ನಡೆದಿದ್ದು ಮಸ್ಕಿ ಪಟ್ಟಣದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗೆ ಉರುಳಿವೆ. ವಾಲ್ಮೀಕಿ ಮತ್ತು ಬಸವೇಶ್ವರ ನಗರದಲ್ಲಿ ಭಾರಿ ಮಳೆಯಿಂದಾಗಿ ವಿದ್ಯುತ್ ಕಂಬ ಧರೆಗೆ ಉರುಳಿವೆ.








