ವಿಜಯನಗರ : ವಿಜಯನಗರದಲ್ಲಿ ಇನ್ಸೂರೆನ್ಸ್ ಹಣಕ್ಕಾಗಿ ಗ್ಯಾಂಗ್ ಒಂದು ಖತರ್ನಾಕ್ ಐಡಿಯಾ ಮಾಡಿದ್ದು, ವಿಜಯನಗರದ ವಸೂಲಿ ಗ್ಯಾಂಗಿನ ಖತರ್ನಾಕ್ ಪ್ಲಾನ್ ಅನ್ನು ಪೊಲೀಸರು ಬಯಲು ಮಾಡಿದ್ದಾರೆ. ಹಣಕ್ಕಾಗಿ ಕೊಲೆ ಮಾಡಿ ಅಪಘಾತ ಎಂದು ಪ್ಲಾನ್ ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಡಿದ್ದಾರೆ.
ಮೊಪೆಡ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆಸಿದ್ದಾರೆ. ಕಾರಿನಿಂದ ಅಪಘಾತ ನಡೆಸಿ ಗ್ಯಾಂಗ್ ಕೊಲೆ ಮಾಡಿತ್ತು. ಗಂಗಾಧರ ಎಂಬತನನ್ನು ಖದೀಮರು ಕೊಲೆ ಮಾಡಿದ್ದಾರೆ. ಹೊಸಪೇಟೆ ನಗರದ ಕೌಲ್ ಪೇಟೆ ನಿವಾಸಿ ಗಂಗಾಧರ ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇನ್ನು ಕೊಲೆಯಾದ ಗಂಗಾಧರನ ಹೆಂಡತಿ ಶಾರದಾ ದೂರು ನೀಡಿದ್ದಾರೆ. ಗಂಗಾಧರ್ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಮಹಿಳೆ ಸೇರಿ ಒಟ್ಟು ಪೊಲೀಸರು 6 ಜನರನ್ನು ಅರೆಸ್ಟ್ ಮಾಡಿದ್ದಾರೆ ನಕಲಿ ಹೆಂಡತಿ ಹುಲಿಗೆಮ್ಮಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಪ್ಪಳದ ಕೃಷ್ಣಪ್ಪ, ರವಿ, ಹೊಸಪೇಟೆಯ ಅಜಯ್, ರಿಯಾಜ್ ಯೋಗರಾಜ್ ಸಿಂಗ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.