ರಾಯಚೂರು : ಇಟ್ಟ ಗುರಿ, ಮುಂದಿಟ್ಟ ಹೆಜ್ಜೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ನಾನು ರೈತನಾಯಕ ಬಿಎಸ್ ಯಡಿಯೂರಪ್ಪ ಅBIG NEWS : ಇಟ್ಟ ಗುರಿ, ಮುಂದಿಟ್ಟ ಹೆಜ್ಜೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಬಿವೈ ವಿಜಯೇಂದ್ರ ಹೇಳಿಕೆವರ ಮಗನಾಗಿ ಹೇಳುತ್ತಿದ್ದೇನೆ ಎಂದು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದರು. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಾತನಾಡಿದ ಬಿ ವೈ ವಿಜೇಂದ್ರ ಅವರು, ವಿರೋಧಿ ಬಣಕ್ಕೆ ತಿರುಗೇಟು ನೀಡಿದ್ದಾರೆ.
ಶಿಕಾರಿಪುರಕ್ಕೆ ಸೀಮಿತವಾಗದೆ ಪಕ್ಷವನ್ನು ಸಂಘಟನೆ ಮಾಡುತ್ತಿದ್ದೇನೆ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಗುರು ಹಿರಿಯರ ಆಶೀರ್ವಾದದಿಂದ ನಾನು ಮುನ್ನಡೆಯುತ್ತಿದ್ದೇನೆ. ಭಗವಂತನ ಕೃಪೆ ಹರ ಗುರು ಚರಮೂರ್ತಿಗಳ ಆಶೀರ್ವಾದ ಇದೆ. ಮುಂದಿನ ದಿನಗಳಲ್ಲಿ ಭಗವಂತ ಶಕ್ತಿ ಕೊಟ್ಟಾಗ ಕೆಲಸ ಮಾಡುತ್ತೇನೆ ಎಂದರು.
ನೀರಾವರಿ ಯೋಜನೆಗಳು ಯುವಕರಿಗೆ ಉದ್ಯೋಗ ಕಲ್ಪಿಸುತ್ತೇನೆ. ಈಗಲೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಭಗವಂತ ಶಕ್ತಿ ಕೊಟ್ಟರೆ ಸರ್ವಾಂಗೀನ ಅಭಿವೃದ್ಧಿಗೆ ಶ್ರಮ ಪಡುತ್ತೇನೆ. ಈ ಭಾಗದ ಅಭಿವೃದ್ಧಿಗಾಗಿ ಏಮ್ಸ್ ನೀರಾವರಿ ಯೋಜನೆ ಕೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.