Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉಮರ್ ಖಾಲಿದ್‌ಗೆ ಸಿಗುತ್ತಾ ರಿಲೀಫ್?: ಮಧ್ಯಂತರ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ; ನಾಳೆ ತುರ್ತು ವಿಚಾರಣೆ!

BREAKING: ಜಾಗತಿಕವಾಗಿ ಚಾಟ್‌ಜಿಪಿಟಿ ಸರ್ವರ್ ಡೌನ್, ಕೋಟ್ಯಂತರ ಬಳಕೆದಾರರು ಕಂಗಾಲು | ChatGPT down

ಪೆರೋಲ್ ಪಡೆದು ಓಡಿಹೋಗಿ ಬಾಲಿವುಡ್ ನಟನಾಗಿದ್ದ ಕೊಲೆ ಅಪರಾಧಿ; 12 ವರ್ಷಗಳ ಬಳಿಕ ಕೊನೆಗೂ ಪೊಲೀಸರ ಬಲೆಗೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `HRMS 2.0’ ನೋಂದಣಿ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ
KARNATAKA

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `HRMS 2.0’ ನೋಂದಣಿ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

By kannadanewsnow57

ಬೆಂಗಳೂರು: ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿರುವ ಎಲ್ಲಾ ಅಧಿಕಾರಿ/ನೌಕರರ ಸೇವಾ ವಹಿಯನ್ನು Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸುವ ಕುರಿತು ಆದೇಶವನ್ನು ಹೊರಡಿಸಿದೆ.

ಆದೇಶದಲ್ಲಿ ಏನಿದೆ?

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಹೆಚ್.ಆ‌ರ್.ಎಮ್.ಎಸ್.2.0 ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಸಂಬಂಧ ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶದ ಅಂಗವಾದ ವಿದ್ಯುನ್ಮಾನ್ ಸೇವಾ ವಹಿಯನ್ನು (Electronic Service Register- ESR) ಯನ್ನು ಸಿದ್ಧಪಡಿಸಲಾಗಿದೆ. 2021-22 ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಈಗಾಗಲೇ ನೇಮಕಗೊಂಡಿರುವ ಮತ್ತು ನೇಮಕಗೊಳ್ಳುವ ಎಲ್ಲಾ ಅಧಿಕಾರಿಗಳು / ನೌಕರರುಗಳ ಸೇವಾ ವಹಿಯನ್ನು ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶದ “ವಿದ್ಯುನ್ಮಾನ ಸೇವಾವಹಿ” ಯಲ್ಲಿಯೇ ನಿರ್ವಹಿಸುವಂತೆ ಉಲ್ಲೇಖದ 1,2,3 ಮತ್ತು 4 ರ ಸರ್ಕಾರದ ಆದೇಶಗಳಲ್ಲಿ ತಿಳಿಸಲಾಗಿರುತ್ತದೆ.

ಈ ಸಂಬಂಧ ಈ ಕಚೇರಿಯ ಉಲ್ಲೇಖ 5ರಲ್ಲಿನ ಸುತ್ತೋಲೆಗಳಲ್ಲಿ ವಿದ್ಯುನ್ಮಾನ್ ಸೇವಾ ವಹಿಯನ್ನು (ಇ.ಎಸ್.ಆರ್) ಅನುಷ್ಠಾನಗೊಳಿಸುವಂತೆ ಎಲ್ಲಾ ಸಕ್ಷಮ ಪ್ರಾಧಿಕಾರಿಗಳಿಗೆ / ಕಚೇರಿಯ ಮುಖ್ಯಸ್ಥರಿಗೆ ತಿಳಿಸಲಾಗಿರುತ್ತದೆ. ಮತ್ತು ಈ ಸಂಬಂಧ ದಿನಾಂಕ : 04-09-2024 ರಂದು ನಡೆದ ಸಭೆಯಲ್ಲಿ ಈ ಬಗ್ಗೆ ತರಬೇತಿಯನ್ನು ನೀಡಲಾಗಿರುತ್ತದೆ. ಹಾಗೂ ದಿನಾಂಕ:21/11/2024ರಂದು 2ನೇ ಬಾರಿ ತರಬೇತಿಯನ್ನು ನೀಡಲಾಗಿರುತ್ತದೆ.

ಪ್ರಸ್ತುತ ವಿದ್ಯುನ್ಮಾನ್ ಸೇವಾವಹಿ ಅನುಷ್ಠಾನಗೊಳಿಸುವ ಕಾರ್ಯವನ್ನು ಅತ್ಯಂತ ತ್ವರಿತವಾಗಿ ಮಾಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕಳಕಂಡಂತೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸದರಿ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳು ಈ ಕೆಳಕಂಡಂತೆ ಇರುತ್ತದೆ.

> ನೋಡಲ್ ಅಧಿಕಾರಿಗಳು (Nodal officer) : ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಕಚೇರಿ / ಅಪರ ಆಯುಕ್ತರ ಕಚೇರಿ/ ವಿಭಾಗೀಯ ಕಚೇರಿ/ ಜಿಲ್ಲಾ ಹಂತದ / ತಾಲ್ಲೂಕ ಹಂತದ ಕಚೇರಿಯಲ್ಲಿ ಈ ಕಾರ್ಯದ ಅನುಷ್ಠಾನಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು. ಸದರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಕಚೇರಿಗಳಲ್ಲಿ ಈ ಕಾರ್ಯದ ಅನುಷ್ಠಾನ ಸಂಪೂರ್ಣ ಜಬ್ದಾರಿಯನ್ನು ಹೊಂದಿರುತ್ತಾರೆ.

> ಸಂಪನ್ಮೂಲ ಅಧಿಕಾರಿಗಳು(Resource Person) : ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಕಚೇರಿ / ಅಪರ ಆಯುಕ್ತರ ಕಚೇರಿ/ ವಿಭಾಗೀಯ ಕಚೇರಿ/ ಜಿಲ್ಲಾ /ತಾಲ್ಲೂಕು ಹಂತದ (ತಾಲ್ಲೂಕಿಗೆ ಮಾತ್ರ ಇಬ್ಬರು) ಕಚೇರಿಯಲ್ಲಿ ಈ ಕಾರ್ಯದ ಅನುಷ್ಠಾನಕ್ಕಾಗಿ ಒಬ್ಬ ನುರಿತ ಹಾಗೂ ತಾಂತ್ರಿಕವಾಗಿ ಸಮರ್ಥರಿರುವ (Resource Person) ನೇಮಿಸಲಾಗಿದ್ದು,ನೋಡಲ್ ಅಧಿಕಾರಿಗಳ ಸಹಯೋಗದಿಂದ ತಮ್ಮ ವ್ಯಾಪ್ತಿಯಲ್ಲಿನ ಸಿಬ್ಬಂದಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ, ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ವಿಶೇಷ ಸೂಚನೆ :

> ಜಿಲ್ಲಾ ಹಂತದ ಉಪನಿರ್ದೇಶಕರು (ಆಡಳಿತ) ಕಚೇರಿಯಲ್ಲಿ ನೇಮಕವಾದ ನೋಡಲ್ ಅಧಿಕಾರಿಗಳು ವಿದ್ಯುನ್ಮಾನ್ ಸೇವಾವಹಿ ಅನುಷ್ಠಾನಗೊಳಿಸುವ ಸಂಬಂಧ ಅಗತ್ಯವಾದ ಮಾಹಿತಿಯನ್ನು ಪಡೆದುಕೊಂಡು, ತಮ್ಮ ವ್ಯಾಪ್ತಿಯ ಡಯಟ್ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಪ್ರೌಢಶಾಲೆಗಳಲ್ಲಿನ ಸಿಬ್ಬಂದಿಗೆ ಸೂಕ್ತಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುವುದು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನೋಡಲ್‌ ಅಧಿಕಾರಿಗಳೊಂದಿಗೆ ಹಾಗೂ ಸಂಪನ್ಮೂಲ ಅಧಿಕಾರಿಗಳೊಂದಿಗೆ ಸಮನ್ವಯದ ಸಾಧಿಸಿ, ಜಿಲ್ಲಾ ವ್ಯಾಪ್ತಿಯ ಎಲ್ಲಾ ಕಚೇರಿ/ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಉಳಿದಂತೆ ಎಲ್ಲಾ ನೋಡಲ್ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರ.

> ಎಲ್ಲಾ ಕಚೇರಿಯಲ್ಲಿ ನೇಮಕವಾದ ಸಂಪನ್ಮೂಲ ಅಧಿಕಾರಿಗಳು ವಿದ್ಯುನ್ಮಾನ ಸೇವಾವಹಿ ಅನುಷ್ಠಾನಗೊಳಿಸುವ ಸಂಬಂಧ ಅಗತ್ಯವಾದ ಮಾಹಿತಿ ಹಾಗೂ ಜ್ಞಾನವನ್ನು ಹೊಂದುವುದು ಮತ್ತು ತಮ್ಮ ಕಚೇರಿ ಹಾಗೂ ತಮ್ಮ ವ್ಯಾಪ್ತಿಯ ಪ್ರೌಢ ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.

> ಇಲಾಖೆಯ ಎಲ್ಲಾ ಕಚೇರಿಯ ಮುಖ್ಯಸ್ಥರು ಈ ಕಾರ್ಯದ ಅನುಷ್ಠಾನಕ್ಕಾಗಿ ಮೇಲುಸ್ತುವಾರಿ ವಹಿಸುವುದು ಮತ್ತು ಈ ಸಂಬಂಧ ಈಗಾಗಲೇ Google Spread Sheet ನಲ್ಲಿ ನೋಡಲ್ ಹಾಗೂ ಸಂಪನ್ಮೂಲ ಅಧಿಕಾರಿಗಳ ವಿವರವನ್ನು ಸಲ್ಲಿಸಿದ್ದು, ಸದರಿ ಅಧಿಕಾರಿಗಳಿಗೆ ಅಗತ್ಯ ಸಲಹೆ-ಮಾರ್ಗದರ್ಶನ ನೀಡುವುದು.

BIG NEWS: 'State Government Employees' Note: Here's the important information about 'HRMS 2.0' registration
Share. Facebook Twitter LinkedIn WhatsApp Email

Related Posts

ಸಾಗರದ ಅಡ್ಡೇರಿಯಲ್ಲಿ ಬಡ ರೈತರ ಜಮೀನಿಗೆ ನುಗ್ಗಿ ಫಸಲು ಕಿತ್ತಿರುವುದು ಅಮಾನವೀಯ: ಹರತಾಳು ಹಾಲಪ್ಪ ಆಕ್ರೋಶ

2 Mins Read

Rain In Bengaluru: ಬೆಂಗಳೂರಿನ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ

1 Min Read

BREAKING: ಬೆಂಗಳೂರಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ | Namma Metro

1 Min Read
Recent News

ಉಮರ್ ಖಾಲಿದ್‌ಗೆ ಸಿಗುತ್ತಾ ರಿಲೀಫ್?: ಮಧ್ಯಂತರ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ; ನಾಳೆ ತುರ್ತು ವಿಚಾರಣೆ!

BREAKING: ಜಾಗತಿಕವಾಗಿ ಚಾಟ್‌ಜಿಪಿಟಿ ಸರ್ವರ್ ಡೌನ್, ಕೋಟ್ಯಂತರ ಬಳಕೆದಾರರು ಕಂಗಾಲು | ChatGPT down

ಪೆರೋಲ್ ಪಡೆದು ಓಡಿಹೋಗಿ ಬಾಲಿವುಡ್ ನಟನಾಗಿದ್ದ ಕೊಲೆ ಅಪರಾಧಿ; 12 ವರ್ಷಗಳ ಬಳಿಕ ಕೊನೆಗೂ ಪೊಲೀಸರ ಬಲೆಗೆ!

ಕಾರು ಖರೀದಿದಾರರಿಗೆ ಶಾಕ್ ನೀಡಿದ ಮಾರುತಿ ಸುಜುಕಿ!: ಜೂನ್‌ನಿಂದ ಎಲ್ಲಾ ಕಾರುಗಳ ಬೆಲೆ ಭಾರಿ ಏರಿಕೆ : ನಿಮ್ಮ ನೆಚ್ಚಿನ ಮಾಡೆಲ್‌ಗಳ ಬೆಲೆ ಎಷ್ಟು ಹೆಚ್ಚಾಗುತ್ತೆ?

State News
KARNATAKA

ಸಾಗರದ ಅಡ್ಡೇರಿಯಲ್ಲಿ ಬಡ ರೈತರ ಜಮೀನಿಗೆ ನುಗ್ಗಿ ಫಸಲು ಕಿತ್ತಿರುವುದು ಅಮಾನವೀಯ: ಹರತಾಳು ಹಾಲಪ್ಪ ಆಕ್ರೋಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಅಡ್ಡೇರಿ ಗ್ರಾಮದ ಬಡ ಕುಟುಂಬದ ಜಮೀನಿಗೆ ನುಗ್ಗಿ, ಬೆಳೆದು ನಿಂತಿದ್ದ ಫಸಲನ್ನು ಕಿತ್ತು ಹಾಕಿರುವುದು…

Rain In Bengaluru: ಬೆಂಗಳೂರಿನ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ

BREAKING: ಬೆಂಗಳೂರಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ | Namma Metro

ಏಸೂರು ಬಿಟ್ಟರು ಬೇಸೂರು ಬಿಡೆವು: ಮಾಜಿ ಸಚಿವ ಹಾಲಪ್ಪ ಹರತಾಳು ಎಚ್ಚರಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.