ಜಾರ್ಖಂಡ್ : ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಸೇರಿದಂತೆ ಒಟ್ಟು 26 ಅಮಾಯಕ ಪ್ರವಾಸಿಗರು ಬಲಿಯಾಗಿದ್ದಾರೆ. ಈ ಒಂದು ದಾಳಿಯ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಹಲ್ಗಾಮ್ ದಾಳಿಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮೊದಲೇ ತಿಳಿದಿತ್ತು ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಜಾರ್ಖಂಡ್ ನಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಉಗ್ರರ ದಾಳಿಯ ಬಗ್ಗೆ ಮೋದಿಗೆ ಮೊದಲೇ ಮಾಹಿತಿ ಇತ್ತು. ಮೋದಿ ಪ್ರವಾಸದ ವೇಳೆ ಉಗ್ರರ ದಾಳಿಯ ಬಗ್ಗೆ ಎಚ್ಚರಿಕೆ ಕೊಡಲಾಗಿತ್ತು. ಮೂರು ದಿನದ ಮೊದಲೇ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು. ಏಪ್ರಿಲ್ 19 ರಂದು ಮೋದಿ ಪ್ರವಾಸ ರದ್ದು ಮಾಡಿದ್ದರು ಬಳಿಕ 22ರಂದು ಪಹಲ್ಗಾಮ್ ನಲ್ಲಿ ಉಗ್ರರಿಂದ ದಾಳಿ ನಡೆದಿದೆ.
ಪಹಲ್ಗಾಮ್ ಗುಂಡಿನ ದಾಳಿಯಲ್ಲಿ 26 ಅಮಾಯಕ ರನ್ನು ಉಗ್ರರು ಕೊಂದರು. ದಾಳಿಯ ಬಗ್ಗೆ ಮೋದಿಗೆ ಮೊದಲೇ ಗೊತ್ತಿದ್ದರೂ ಭದ್ರತೆ ಯಾಕೆ ಹೆಚ್ಚಿಸಿಲ್ಲ? ಗುಪ್ತಚರ ಇಲಾಖೆಯ ವೈಫಲ್ಯದಿಂದ ಈ ಒಂದು ದಾಳಿ ನಡೆದಿದೆ ಎಂದು ಜಾರ್ಖಂಡ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ಗಂಭೀರವಾಗಿ ಆರೋಪಿಸಿದರು.