ಮಂಡ್ಯ : ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಶೀತಲ ಸಮರ ಮುಂದುವರೆದಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈತ್ರಿ ಇನ್ನು ನಿರ್ಧಾರವಾಗಿಲ್ಲ. 2028ರ ವಿಧಾನಸಭೆ ಚುನಾವಣೆ ಟಿಕೆಟ್ ಕೂಡ ಇದೀಗ ಫೈಟ್ ನಡೆಯುತ್ತಿದೆ. ಮಂಡ್ಯದಲ್ಲಿ ಬಿಜೆಪಿಗೆ ಮೂರು ಕ್ಷೇತ್ರ ಬಿಟ್ಟು ಕೊಡಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ ಕೆ.ಆರ್ ಪೇಟೆ ಸೇರಿದಂತೆ ಮೂರು ಕ್ಷೇತ್ರ ಬಿಟ್ಟು ಕೊಡಲು ಬಿಜೆಪಿ ಬೇಡಿಕೆ ಇಟ್ಟಿದೆ.
ಟಿಕೆಟ್ ಒತ್ತಡದ ಜೊತೆಗೆ ನಿಖಿಲ್ ಗೆ ಬಿಜೆಪಿ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಕೆ ಆರ್ ಪೇಟೆಯಲ್ಲಿ ಎಚ್ ಡಿ ಮಂಜು ಅವರನ್ನು ಗೆಲ್ಲಿಸಿ ಅಂತ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಿಖಿಲ್ ಕುಮಾರಸ್ವಾಮಿ ಈ ಒಂದು ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದು, ಅಭ್ಯರ್ಥಿ ಘೋಷಣೆ ಮಾಡಲು ಯಾವುದೇ ಅಧಿಕಾರ ಕೊಟ್ಟಿಲ್ಲ.
ನಿಖಿಲ್ ಮೂರು ಬಾರಿ ಸೋತಿದ್ದಾರೆ ಅವರು ಬಾಯಿ ಮುಚ್ಚಬೇಕು. ನಾವು ಬಾಯಿ ಬೆಚ್ಚಿದರೆ ಬೇರೆ ರೀತಿ ಬ್ಲಾಸ್ಟ್ ಆಗುತ್ತದೆ. ನಿಖಿಲ್ ಮೊದಲು ತಮ್ಮ ಅಸ್ತಿತ್ವದ ಬಗ್ಗೆ ನೋಡಿಕೊಳ್ಳಲಿ ಎಂದು ನಾರಾಯಣಗೌಡ ಮತ್ತು ಪ್ರೀತಮ್ ಗೌಡ ನಿಖಿಲ್ ಗೌಡಗೆ ಎಚ್ಚರಿಕೆ ಕೊಟ್ಟಿದ್ದಾರೆ.








