ಅಲಹಾಬಾದ್ : ವಿವಾಹ ನೋಂದಣಿ ಇಲ್ಲದಿರುವುದು ಅಮಾನ್ಯಗೊಳಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ರಾಜ್ಯ ಸರ್ಕಾರಗಳು ವಿವಾಹ ನೋಂದಣಿಗೆ ನಿಯಮ ರೂಪಿಸಬ ಹುದಾದರೂ, ಅಂತಹ ನೋಂದಣಿ ಉದ್ದೇಶ ಕೇವಲ ಮದುವೆಯ ಸುಲಭ ಸಾಕ್ಷ್ಯವನ್ನು ಒದಗಿಸುವುದಕ್ಕೆ ಮಾತ್ರ. ನೋಂದಣಿ ಆಗದಿದ್ದರೆ ಮದುವೆಯ ಸಿಂಧುತ್ವಕ್ಕೆ ಯಾವುದೇ ಧಕ್ಕೆಯಾಗಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅರ್ಜಿದಾರ ಸುನೀಲ್ ದುಬೆ ದಂಪತಿ ವಿಚ್ಛೇದನಕ್ಕಾಗಿ ಅರ್ಜಿಸಲ್ಲಿಸಿದ್ದರು. ಆದರೆವಿವಾಹನೋಂದಣಿ ಪ್ರಮಾಣಪತ್ರ ಸಲ್ಲಿಸು ವಂತೆ ಆಜಂಗಢದ ಕೌಟುಂಬಿಕ ನ್ಯಾಯಾಲಯ ಗಡುವು ನೀಡಿತ್ತು. ವಿವಾಹ ನೋಂದಣಿ ಪ್ರಮಾಣ ಪತ್ರದಿಂದ ವಿನಾಯಿತಿ ಕೊಡು ವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಯನ್ನೂ ವಿವಾಹ ವನ್ನು ಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ದುಬೆ ಹೈಕೋಟ್ ಹಾಬಾದ್ರ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಪೀಠ, ‘ಹಿಂದೂ ವಿವಾಹ ಕಾಯ್ದೆ, 1955ರ ನಿಬಂಧನೆಗಳ ಪ್ರಕಾರ ಹಿಂದೂ ವಿವಾಹ ನಡೆದರೆ, ಅಂತಹ ಮದುವೆಯ ಸಾಕ್ಷ್ಯವನ್ನು ಸುಗಮಗೊಳಿಸಲು ರಾಜ್ಯ ಸರ್ಕಾರಗಳಿಗೆ ನೋಂದಣಿಗಾಗಿ ನಿಯಮ ರೂಪಿಸುವ ಅಧಿಕಾರವಿದೆ. ಆದರೆ, ಮದು ವೆಯನ್ನು ನೋಂದಣಿ ದಾಖಲೆಯಲ್ಲಿ ಸೇರಿಸದಿ ರುವು ದರಿಂದ ಅದರ ಸಿಂಧುತ್ವಕ್ಕೆ ಯಾವುದೇ ಧಕ್ಕೆಯಾ ಗುವುದಿಲ್ಲ. ರಾಜ್ಯ ಸರ್ಕಾರವು ಮದುವೆಯ ಕಡ್ಡಾಯ ನೋಂ ದಣಿಗೆ ನಿಯಮ ರೂಪಿಸಿದರೂ, ನೋಂದಣಿಯ ಕೊರತೆ ಯಿಂದಮದುವೆಯನ್ನು ಅಸಿಂಧು ಎಂದು ಘೋಷಿಸುವಂತಹ ನಿಯಮ ರೂಪಿಸಲು ಸಾಧ್ಯವಿಲ್ಲ’ ಎಂದು ತಿಳಿಸಿತು.