ಚಾಮರಾಜನಗರ : ಕಳೆದ ಕೆಲವು ದಿನಗಳ ಹಿಂದೆ ಆರತಕ್ಷತೆಗೆ ತೆರಳುತ್ತಿದ್ದ ವೇಳೆ ವರನಿಗೆ ವಧುವಿನ ಮಾಜಿ ಪ್ರಿಯಕರ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಪೊಲೀಸರು ವಧು ಹಾಗೂ ಆಕೆಯ ಪ್ರಿಯಕರ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿರನ್ನ ನಯನಾ ಹಾಗೂ ಈಕೆಯ ಬಾಯ್ ಫ್ರೆಂಡ್ ದರ್ಶನ್ ಮತ್ತು ಅಪ್ರಾಪ್ತನನ್ನು ಬಂಧಿಸಲಾಗಿದ್ದು, ಗೋಕುಲ್ ಹಾಗೂ ಇನ್ನೋರ್ವ ತಲೆ ಮರೆಸಿಕೊಂಡಿದ್ದಾರೆ.ಚಾಕು ಇರಿದ ದರ್ಶನ್ ತಮಟೆ ಬಾರಿಸುವ ಕೆಲಸ ಹಾಗೂ ಪುಸ್ತಕಗಳನ್ನು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದನು. ಈ ವೇಳೆ ರವೀಶ್ ನನ್ನ ಮದುವೆ ಆಗಲು ಸೂಚಿಸಿದ್ದ ನಯನಾ ಬಳಿಕ ರವೀಶ್ನ ಫೋನ್ ಅನ್ನು ದರ್ಶನ್ಗೆ ಕೊಟ್ಟು ಬೆದರಿಸುವಂತೆ ಹೇಳಿದ್ದ ನಯನಾ ಮದುವೆ ನಿಲ್ಲಿಸುವಂತೆ ದುಂಬಾಲು ಬಿದ್ದಿದ್ದಳು.
ನಯನಾಳ ಮಾತು ಕೇಳಿದ ದರ್ಶನ್ ತನ್ನ ಮೂವರು ಸ್ನೇಹಿತರ ಜೊತೆ ಕಾರಿನಲ್ಲಿ ಬಂದು ವರನನ್ನು ಅಡ್ಡಹಾಕಿ ಚಾಕು ಇರಿದಿದ್ದ. ಅದೃಷ್ಟವಶಾತ್ ತೋಳಿಗಷ್ಟೇ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದನು. ವರನಿಗೆ ಚಾಕು ಇರಿದ ಕೇಸ್ ಪತ್ತೆಗೆ ಚಾಮರಾಜನಗರ ಎಸ್ಪಿ ಮುತ್ತುರಾಜ್ ವಿಶೇಷ ತಂಡ ರಚನೆ ಮಾಡಿದ್ದರು.ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವಮಾದಯ್ಯ ಹಾಗೂ ಕೊಳ್ಳೇಗಾಲ ಪಟ್ಟಣ ಠಾಣೆ ಪಿಎಸ್ಐ ವರ್ಷಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೃತ್ಯಕ್ಕೆ ಬಳಕೆಯಾಗಿದ್ದ ಕಾರನ್ನು ವಶಕ್ಕೆ ಪಡೆದು ನಯನಾ, ದರ್ಶನ್ ನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಇಬ್ಬರಿಗಾಗಿ ಬಲೆ ಬೀಸಿದ್ದಾರೆ.








