Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ತಂದೆ `ವಿಲ್’ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತಾ?

BIG NEWS : ಮಧ್ಯ ಪ್ರಾಚ್ಯ ಯುದ್ಧ ಅಂತ್ಯ ಬೆನ್ನಲ್ಲೆ, ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆ : ರೈತರಲ್ಲಿ ಸಂತಸ!

BREAKING : ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ ಲಘು ಹೃದಯಾಘಾತ : ಆಸ್ಪತ್ರೆಗೆ ದಾಖಲು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮಧ್ಯ ಪ್ರಾಚ್ಯ ಯುದ್ಧ ಅಂತ್ಯ ಬೆನ್ನಲ್ಲೆ, ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆ : ರೈತರಲ್ಲಿ ಸಂತಸ!
KARNATAKA

BIG NEWS : ಮಧ್ಯ ಪ್ರಾಚ್ಯ ಯುದ್ಧ ಅಂತ್ಯ ಬೆನ್ನಲ್ಲೆ, ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆ : ರೈತರಲ್ಲಿ ಸಂತಸ!

By ಸುರೇಶ್‌

ಬೆಂಗಳೂರು : ಮಧ್ಯ ಪ್ರಾಚ್ಯದ ಸಂಘರ್ಷ ಹಾಗೂ ಮಾರುಕಟ್ಟೆಯ ಏರಿಳಿತಗಳಿಂದಾಗಿ ಕಂಗೆಟ್ಟಿದ್ದ ರಾಜ್ಯದ ಟೊಮ್ಯಾಟೊ ಬೆಳೆಗಾರರ ಮೊಗದಲ್ಲಿ ಕೊನೆಗೂ ಮಂದಹಾಸ ಮೂಡಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಕುಸಿತ ಕಂಡಿದ್ದ ಟೊಮ್ಯಾಟೊ ದರವು ಇದೀಗ ದಿಢೀರ್ ಏರಿಕೆ ಕಾಣುತ್ತಿದ್ದು, ಮಾರುಕಟ್ಟೆಯಲ್ಲಿ ಗಣನೀಯ ಚೇತರಿಕೆ ದಾಖಲಿಸಿದೆ. ಇದರಿಂದಾಗಿ ಕೈಸುಟ್ಟುಕೊಳ್ಳುವ ಭೀತಿಯಲ್ಲಿದ್ದ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಏಷ್ಯಾ ಖಂಡದಲ್ಲೇ ಪ್ರಸಿದ್ಧ ಪಡೆದಿರುವ ಕೋಲಾರದ ಎಪಿಎಂಸಿ (APMC) ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮ್ಯಾಟೊ ಹೊಂದಿರುವ ಪ್ರತಿ 15 ಕೆಜಿಯ ಒಂದು ಬಾಕ್ಸ್‌ಗೆ 500 ರೂಪಾಯಿಯಿಂದ 550 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಈ ಉತ್ತಮ ಧಾರಣೆಯು ಮಾರುಕಟ್ಟೆಗೆ ಸ್ಥಿರತೆ ತಂದಿದ್ದು, ರೈತರಿಗೆ ನಿರೀಕ್ಷಿತ ಲಾಭ ತಂದುಕೊಡುತ್ತಿದೆ.

ಕೆಲವು ವಾರಗಳ ಹಿಂದೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಉಂಟಾದ ಯುದ್ಧದ ಸನ್ನಿವೇಶ ಹಾಗೂ ರಫ್ತು ಪ್ರಕ್ರಿಯೆಯಲ್ಲಾದ ವ್ಯತ್ಯಯದಿಂದಾಗಿ ಟೊಮ್ಯಾಟೊ ಬೆಲೆ ತಳ ಮುಟ್ಟಿತ್ತು. ಸಾಗಣಿಕೆ ವೆಚ್ಚವೂ ಸಿಗದೆ ರೈತರು ಕಂಗಾಲಾಗಿದ್ದರು. ಆದರೆ ಈಗ ಪರಿಸ್ಥಿತಿ ತಿಳಿಯಾಗುತ್ತಿರುವುದು ಮತ್ತು ಸ್ಥಳೀಯವಾಗಿ ಮಾರುಕಟ್ಟೆಯ ಸಮತೋಲನ ಕಾಯ್ದುಕೊಂಡಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಸದ್ಯ ಕೋಲಾರದ ಟೊಮ್ಯಾಟೊಗೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಭಾರಿ ಬೇಡಿಕೆ ಹರಿದು ಬರುತ್ತಿದೆ. ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳ ವ್ಯಾಪಾರಿಗಳು ಕೋಲಾರ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಬೇಡಿಕೆಗೆ ತಕ್ಕಂತೆ ಪೂರೈಕೆಯೂ ಚುರುಕಾಗಿದ್ದು, ಇಡೀ ಮಾರುಕಟ್ಟೆ ವಲಯದಲ್ಲಿ ವ್ಯಾಪಾರ ವಹಿವಾಟು ಗರಿಗೆದರಿದೆ.

ಬೆಲೆ ಕುಸಿತದಿಂದ ಕಣ್ಣೀರು ಹಾಕುತ್ತಿದ್ದ ತರಕಾರಿ ಬೆಳೆಗಾರರು ಮತ್ತು ಮಾರುಕಟ್ಟೆಯ ದಲ್ಲಾಳಿಗಳು ಈ ಹಠಾತ್ ಬೆಲೆ ಏರಿಕೆಯಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಹೂಡಿಕೆ ಮಾಡಿದ ಬಂಡವಾಳ ಕೈಸೇರುತ್ತಿರುವುದಲ್ಲದೆ, ಕೈತುಂಬಾ ನಾಲ್ಕು ಕಾಸು ನೋಡುವಂತಾಗಿದೆ ಎಂದು ರೈತರು ಹರ್ಷ ಹಂಚಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿಯೂ ಇದೇ ರೀತಿಯ ಉತ್ತಮ ಧಾರಣೆ ಮುಂದುವರಿಯುವ ವಿಶ್ವಾಸವನ್ನು ವ್ಯಾಪಾರಸ್ಥರು ವ್ಯಕ್ತಪಡಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS: ತಂದೆ `ವಿಲ್’ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತಾ?

3 Mins Read

BREAKING : ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ ಲಘು ಹೃದಯಾಘಾತ : ಆಸ್ಪತ್ರೆಗೆ ದಾಖಲು!

1 Min Read

BIG NEWS : ಬೆಂಗಳೂರಲ್ಲಿ ಬಾಲಕಿ ವೆನಿಲ್ಲಾ ಕೇಸ್ ಗೆ ಬಿಗ್ ಟ್ವಿಸ್ಟ್ : ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಇನ್ಸ್ಪೆಕ್ಟರ್

1 Min Read
Recent News

BIG NEWS: ತಂದೆ `ವಿಲ್’ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತಾ?

BIG NEWS : ಮಧ್ಯ ಪ್ರಾಚ್ಯ ಯುದ್ಧ ಅಂತ್ಯ ಬೆನ್ನಲ್ಲೆ, ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆ : ರೈತರಲ್ಲಿ ಸಂತಸ!

BREAKING : ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ ಲಘು ಹೃದಯಾಘಾತ : ಆಸ್ಪತ್ರೆಗೆ ದಾಖಲು!

BIG NEWS : ಬೆಂಗಳೂರಲ್ಲಿ ಬಾಲಕಿ ವೆನಿಲ್ಲಾ ಕೇಸ್ ಗೆ ಬಿಗ್ ಟ್ವಿಸ್ಟ್ : ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಇನ್ಸ್ಪೆಕ್ಟರ್

State News
KARNATAKA

BIG NEWS: ತಂದೆ `ವಿಲ್’ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತಾ?

By kannadanewsnow57 KARNATAKA 3 Mins Read

ಬೆಂಗಳೂರು: ಸಮಾಜದಲ್ಲಿ ಆಸ್ತಿ ವಿವಾದಗಳು ಮತ್ತು ಹಂಚಿಕೆಗಳ ಬಗ್ಗೆ ದಿನನಿತ್ಯವೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ತಂದೆ ಗಳಿಸಿದ…

BIG NEWS : ಮಧ್ಯ ಪ್ರಾಚ್ಯ ಯುದ್ಧ ಅಂತ್ಯ ಬೆನ್ನಲ್ಲೆ, ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆ : ರೈತರಲ್ಲಿ ಸಂತಸ!

BREAKING : ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ ಲಘು ಹೃದಯಾಘಾತ : ಆಸ್ಪತ್ರೆಗೆ ದಾಖಲು!

BIG NEWS : ಬೆಂಗಳೂರಲ್ಲಿ ಬಾಲಕಿ ವೆನಿಲ್ಲಾ ಕೇಸ್ ಗೆ ಬಿಗ್ ಟ್ವಿಸ್ಟ್ : ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಇನ್ಸ್ಪೆಕ್ಟರ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.