ಬೆಂಗಳೂರು : ಬೆಂಗಳೂರಿನ ಕಾಡುಗೋಡಿಯಲ್ಲಿ ಆರು ವರ್ಷದ ಬಾಲಕಿ ವೆನಿಲ್ಲಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಈ ಒಂದು ಕೇಸಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಇನ್ಸ್ಪೆಕ್ಟರ್ ರಂಗಸ್ವಾಮಿ ಕಳ್ಳಾಟ ಇದೀಗ ಬಯಲಾಗಿದೆ. ಕೇಸ್ ಹಳ್ಳ ಹಿಡಿಸಲು ಇನ್ಸ್ಪೆಕ್ಟರ್ ರಂಗಸ್ವಾಮಿ ಮುಂದಾಗಿದ್ದ ಎಂದು ತಿಳಿದು ಬಂದಿದೆ.
ರಿಯಲ್ ಎಸ್ಟೇಟ್ ಕಾರಣಕ್ಕೆ ಕೇಸ್ ಹಳ್ಳ ಹಿಡಿಸಲು ಇನ್ಸ್ಪೆಕ್ಟರ್ ರಂಗಸ್ವಾಮಿ ಮುಂದಾಗಿದ್ದಾನೆ. ರಿಯಲ್ ಎಸ್ಟೇಟ್ ಕಂಪನಿ ಹೊಂದಿರುವ ಆರೋಪಿ ಮೋಹನ್ ಕುಟುಂಬ, ಈತನ ಜೊತೆಗೆ ಇನ್ಸ್ಪೆಕ್ಟರ್ ರಂಗಸ್ವಾಮಿ ಅನೇಕ ವರ್ಷಗಳಿಂದ ದೋಸ್ತಿ ಇತ್ತು. ಈ ಹಿಂದೆ ಕೆಲಸ ಮಾಡಿದ ಜಾಗದಿಂದಲೂ ಇಬ್ಬರು ಸ್ನೇಹಿತರಾಗಿದ್ದರು. ಹಾಗಾಗಿ ಕೇಸ್ ಮುಚ್ಚಿ ಹಾಕಲು ಇನ್ಸ್ಪೆಕ್ಟರ್ ರಂಗಸ್ವಾಮಿ ಪ್ಲಾನ್ ಮಾಡಿದ್ದ ಎಂದು ಇದೀಗ ಬಯಲಾಗಿದೆ.
ಮೋಹನ್ ಜೊತೆ ರಿಯಲ್ ಎಸ್ಟೇಟ್ ನಲ್ಲಿ ಇನ್ಸ್ಪೆಕ್ಟರ್ ರಂಗಸ್ವಾಮಿ ಭಾಗಿಯಾಗಿದ್ದಾನೆ. ಹಾಗಾಗಿ ಮೋಹನ್ ಜೊತೆಗೆ ಈತ ನಿಂತಿದ್ದಾನೆ. ಮೋಹನ್ಗಾಗಿಯೇ ಕೊಲೆ ಕೇಸ್ ದಾಖಲಿಸಲು ರಂಗಸ್ವಾಮಿ ಹಿಂದೆಟು ಹಾಕಿದ್ದಾನೆ. ಮೃತ ಬಾಲಕಿ ತಂದೆ ಭೇಟಿ ಮಾಡಿರಲಿಲ್ಲವಂತೆ ಇನ್ಸ್ಪೆಕ್ಟರ್, ಕಾಟಾಚಾರಕ್ಕೆ ಯುಡಿಆರ್ ಕೇಸ್ ದಾಖಲಿಸಿ ರಂಗಸ್ವಾಮಿ ಸುಮ್ಮನಾಗಿದ್ದಾನೆ. ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದಿದ್ದರೂ ಕೂಡ ಸುಮ್ಮನಿದ್ದು ಸಾವಿನ ಬಗ್ಗೆ ಮಾಹಿತಿಯನ್ನು ಪಡೆಯದೆ ಅಸಡ್ಡೆ ತೋರಿದ್ದಾನೇ. ಸದ್ಯ ಇನ್ಸ್ಪೆಕ್ಟರ್ ವಿರುದ್ಧ ಕೂಡ ಇಲಾಖೆ ತನಿಖೆ ಶುರುಮಾಡಿದೆ.








