ಉ.ಕನ್ನಡ / ತುಮಕೂರು : ರಾಜ್ಯದಲ್ಲಿ ಇಂದು ಒಂದೇ ದಿನ ಪ್ರತ್ಯೇಕ ಘಟನೆಗಳಲ್ಲಿ ಪತ್ನಿಯರ ಅಕ್ರಮ ಸಂಬಂಧಕ್ಕೆ ಬೇಸತ್ತು ಇಬ್ಬರು ಗಂಡಂದಿರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ . ಪತ್ನಿ ಪರಪುರುಷನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು ಅಲ್ಲದೆ, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಇನ್ನೊಂದು ಕಡೆ ಉತ್ತರಕನ್ನಡದ ದಾಂಡೇಲಿಯಲ್ಲಿ ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೌದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಲಕೆರೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಜೀವನ್ (10) ಪ್ರಾಣೇಶ್ (5) ಮಕ್ಕಳನ್ನು ಕೊಲೆಗೈದು ಶಿವಣ್ಣ (40) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಗಂಡು ಮಕ್ಕಳನ್ನು ಉಸಿರುಗುಟ್ಟಿಸಿ ಸಾಯಿಸಿ ಶಿವಣ್ಣ ನೇಣಿಗೆ ಶರಣಾಗಿದ್ದಾರೆ. ಪಾಲ್ಕೆರೆ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇಗುಲದ ಅರ್ಚಕನಾಗಿದ್ದ ಶಿವಣ್ಣ.
ಪರಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ ಶಿವಣ್ಣ ಪತ್ನಿ, ಪರಪುರುಷನ ಜೊತೆಗೆ ಅಕ್ರಮ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಪತ್ನಿ ಆತನ ಜೊತೆಗೆ ಪರಾರಿಯಾಗಿದ್ದಾಳೆ ಮನೆಯಲ್ಲಿ ಇದ್ದ ಚಿನ್ನ ಮತ್ತು ಹಣದ ಸಮೇತ ಪತ್ನಿ ಎಸ್ಕೇಪ್ ಆಗಿದ್ದಾಳೆ ಇದರಿಂದ ಮನನೊಂದು ಮಕ್ಕಳನ್ನು ಕೊಂದು ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರಕನ್ನಡದಲ್ಲೂ ಗಂಡ ಆತ್ಮಹತ್ಯೆ!
ತುಮಕೂರಿನಲ್ಲಿ ಪತ್ನಿ ಅಕ್ರಮ ಸಂಬಂಧ ಹಿನ್ನೆಲೆ ಬೇರೊಬ್ಬನ ಜೊತೆಗೆ ಪತ್ನಿ, ಎಸ್ಕೇಪ್ ಆಗಿದ್ದು ಇದರಿಂದ ಮನನೊಂದು ಪತಿ ಇಬ್ಬರೂ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿದೆ. ಇದೀಗ ಅಂತದ್ದೆ ಘಟನೆ ನಡೆದಿದ್ದು, ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಪತಿಯನ್ನು ರಾಘವೇಂದ್ರ ಎಂದು ತಿಳಿದು ಬಂದಿದ್ದು ಪತ್ನಿ ಮೇಘ ಅಕ್ರಮ ಸಂಬಂಧ ಹೊಂದಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಈ ಒಂದು ಘಟನೆ ನಡೆದಿದೆ. ಮೂರು ವರ್ಷ ಮಲೇಶಿಯಾದಲ್ಲಿ ರಾಘವೇಂದ್ರ ಕೆಲಸದಲ್ಲಿದ್ದ. ದಾಂಡೇಲಿ ಇಬ್ಬರು ಮಕ್ಕಳ ಜೊತೆಗೆ ಪತ್ನಿ ಮೇಘ ಇದ್ದಳು. ಪತಿ ರಾಘವೇಂದ್ರ ಬರುತ್ತಿದ್ದಂತೆ ಮೇಘ ತವರು ಮನೆಗೆ ತೆರಳಿದ್ದಾಳೆ.
ಬೇರೊಬ್ಬನೊಂದಿಗೆ ಪತ್ನಿ ಮೇಘ ಅಕ್ರಮ ಸಂಬಂಧ ಹೊಂದಿದಳು. ಓಪನ್ ಆಗಿ ಪ್ರಿಯಕರ ಜೊತೆಗೆ ಫೋಟೋಗಳು ಶೇರ್ ಮಾಡುತ್ತಿದ್ದಳು.
ಅನೈತಿಕ ಸಂಬಂಧ ನಿಲ್ಲಿಸಲು ಬುದ್ಧಿ ಹೇಳಿದರು ಕೂಡ ಮೇಘ ಕೇಳಲಿಲ್ಲ ಮಕ್ಕಳ ಮುಖ ನೋಡಿ ಬಾ ಎಂದು ಕರೆದರೂ ಕೂಡ ಪತ್ನಿ ತವರು ಮನೆ ಬಿಟ್ಟು ಬರಲಿಲ್ಲ. ಮೊದಲು ಕೈ ಕುಯ್ದುಕೊಂಡು ಅತಿ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ್ದ ನಿನ್ನೊಂದಿಗೆ ಸಂಸಾರ ಮಾಡಲು ಆಗಲ್ಲ ಸತ್ತು ಹೋಗು ಅಂತ ಪತ್ನಿ ಮೇಘ ಹೇಳಿದ್ದಾಳೆ ಇದರಿಂದ ಪತಿ ರಾಘವೇಂದ್ರ ಡೆತ್ ನೋಟ್ ನಲ್ಲಿ ನನ್ನ ಆ ಸಾವಿಗೆ ಪತ್ನಿಮೇಧ ಕಾರಣ ಎಂದು ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು ಪ್ರಕರಣದ ಕಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.








