ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ 2024-25ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಮೇ-2025ನೇ ಮಾಹೆಯಲ್ಲಿ ಆಯೋಜಿಸಲಾಗುತ್ತಿದ್ದು, ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು ನಿರ್ವಹಿಸಬೇಕಾದ ಈ ಕೆಳಕಂಡ ವಿಷಯಗಳ ಬಗ್ಗೆ ಕ್ರಮವಹಿಸಲು ಸೂಚಿಸಿದೆ.
ಜಿಲ್ಲಾ ಮಟ್ಟದ ವೈಯಕ್ತಿಕ ಕ್ರೀಡೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಮಾತ್ರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ರಾಜ್ಯ ಸರ್ಕಾರಿ ನೌಕರರ ಸಂಘವು ಈಗಾಗಲೇ ಜಿಲ್ಲಾವಾರು ಬಿಡುಗಡೆ ಮಾಡಿರುವ Online Link ನಲ್ಲಿ ಕೇಳಲಾಗಿರುವ ಸಂಪೂರ್ಣ ಮಾಹಿತಿಯನ್ನು ಭರ್ತಿಮಾಡಿ ಹೆಸರು ನೋಂದಾಯಿಸಿಕೊಳ್ಳುವುದು.
Online Link ನಲ್ಲಿ ಕೇಳಲಾಗಿರುವ ತಮ್ಮ ಟ್ರಾಕ್ಟ್ ಅಳತೆಯನ್ನು ನಮೂದಿಸುವುದು.
ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾಗ್ಯೂ, ಭಾಗವಹಿಸಲಿರುವ ಎಲ್ಲಾ ಕ್ರೀಡೆಗಳನ್ನು ಹೆಸರನ್ನು ನಮೂದಿಸಿ ಒಂದು ಬಾರಿ ಮಾತ್ರ Online ನಲ್ಲಿ ನೋಂದಾಯಿಸಿಕೊಳ್ಳುವುದು.
Online ಹೊರತುಪಡಿಸಿ ಇತರೆ ಮಾರ್ಗಗಳಿಂದ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ. ಹಾಗೂ ಕ್ರೀಡಾಕೂಟ ನಡೆಯುವ ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳುವುದಿಲ್ಲ.
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ದಿನಾಂಕ: 25-04-2025 ರೊಳಗೆ ಹೆಸರುಗಳನ್ನು Online ನೋಂದಾಯಿಸಿಕೊಳ್ಳದಿದ್ದಲ್ಲಿ ಅಂತಹ ನೌಕರರನ್ನು ಕ್ರೀಡಾಕೂಟಕ್ಕೆ ಪರಿಗಣಿಸಲಾಗುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ.









![ಪೊಲೀಸ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ : ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ಯಾದಗಿರಿ ಲೋಕಾಯುಕ್ತ ದಾಳಿ ಇನ್ಸ್ಪೆಕ್ಟರ್ ಬಂಧನ [Yadgiri Lokayukta Raid Inspector Arrested], ಗುರುಮಠಕಲ್ ಪೊಲೀಸ್ ಭ್ರಷ್ಟಾಚಾರ ಪ್ರಕರಣ [Gurmitkal Police Corruption Case], ವೀರಣ್ಣ ದೊಡ್ಡಮನಿ ಲೋಕಾಯುಕ್ತ ಟ್ರ್ಯಾಪ್ [Veeranna Doddamani Lokayukta Trap]. ಟ್ಯಾಗ್ಸ್ (Tags)](https://kannadanewsnow.com/kannada/wp-content/uploads/2026/05/ಲಂಚ-ಪಡೆಯುವಾಗ-ಲೋಕಾಯುಕ್ತ-ಬಲೆಗೆ-ಬಿದ್ದ-ಗುರುಮಠಕಲ್-450x253.jpg)