ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಫ್ರಿಡ್ಜ್ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ. ಪಿಎಸ್ಐ ಭೀಮಪ್ಪ ರಬಕವಿ ನಿವಾಸದಲ್ಲಿ ಒಂದು ಫ್ರಿಡ್ಜ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.
ಫ್ರಿಡ್ಜ್ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಗ್ರಹಬಳಕೆ ವಸ್ತುಗಳು ಎಲ್ಲಾ ಸಂಪೂರ್ಣವಾಗಿ ಚೆಲ್ಲಾಪಿಲ್ಲಿ ಆಗಿವೆ, ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ್ದಕ್ಕೆ ಭಾರಿ ಅನಾಹುತ ಒಂದು ತಪ್ಪಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸುರಕ್ಷತಾ ಕ್ರಮಗಳು (ಗಮನಿಸಬೇಕಾದ ಅಂಶಗಳು)
-
ವೋಲ್ಟೇಜ್ ಸ್ಟೆಬಿಲೈಸರ್: ಹಳೆಯ ಮಾದರಿಯ ಫ್ರಿಡ್ಜ್‌ಗಳಿಗೆ ಗುಣಮಟ್ಟದ ಸ್ಟೆಬಿಲೈಸರ್ ಬಳಸುವುದು ಉತ್ತಮ.
-
ವೈರಿಂಗ್ ತಪಾಸಣೆ: ಮನೆಯ ಹಳೆಯ ವಿದ್ಯುತ್ ವೈರಿಂಗ್ ಅನ್ನು ಕಾಲಕಾಲಕ್ಕೆ ತಜ್ಞ ಎಲೆಕ್ಟ್ರಿಷಿಯನ್ ಮೂಲಕ ಪರೀಕ್ಷಿಸಬೇಕು.
-
ಗಾಳಿಯ ಸಂಚಾರ: ಫ್ರಿಡ್ಜ್ ಮತ್ತು ಗೋಡೆಯ ನಡುವೆ ಕನಿಷ್ಠ 6 ಇಂಚು ಅಂತರವಿರಲಿ, ಇದು ಶಾಖ ಹೊರಹೋಗಲು ಸಹಾಯ ಮಾಡುತ್ತದೆ.
-
ಸೋರ್ಸಿಂಗ್: ಸಾಕೆಟ್‌ಗಳಿಗೆ ಹೆಚ್ಚಿನ ಲೋಡ್ ನೀಡುವ ಮಲ್ಟಿ-ಪಿನ್ ಅಡಾಪ್ಟರ್‌ಗಳನ್ನು ಬಳಸುವುದನ್ನು ತಪ್ಪಿಸಿ.








