Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

X ಖಾತೆ ಬ್ಲಾಕ್: ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ‘ಕಾಕ್ರೋಚ್ ಜನತಾ ಪಾರ್ಟಿ’ ಸಂಸ್ಥಾಪಕ!

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ
KARNATAKA

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು : ಹವಾಮಾನ ಬದಲಾವಣೆ, ತ್ವರಿತ ನಗರೀಕರಣ ಹಾಗೂ ಅಂತರ್ಜಲ ಕುಸಿತದಂತಹ ಜಾಗತಿಕ ಸವಾಲುಗಳನ್ನು ತಂತ್ರಜ್ಞಾನದ ಮೂಲಕ ಸಮರ್ಥವಾಗಿ ಎದುರಿಸಲು ಬೆಂಗಳೂರು ಜಲಮಂಡಳಿ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಜಲ ನಿರ್ವಹಣೆ ಕುರಿತು ಚರ್ಚಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಗರದಲ್ಲಿ ಮೇ 27 ರಂದು ದೇಶದ ಮೊಟ್ಟಮೊದಲ ಹಾಗೂ ಅತಿದೊಡ್ಡ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜಿಸಿದೆ.

ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಈ ಬೃಹತ್ ಶೃಂಗಸಭೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಭವಿಷ್ಯದ ಸ್ಮಾರ್ಟ್ ಜಲ ನಿರ್ವಹಣಾ ವ್ಯವಸ್ಥೆಗಳನ್ನು ರೂಪಿಸುವ ಗುರಿ ಹೊಂದಿರುವ ಈ ಶೃಂಗಸಭೆಯಲ್ಲಿ ಜಾಗತಿಕ ಜಲ ತಜ್ಞರು, ಎಐ ಪರಿಣತರು ಮತ್ತು ತಂತ್ರಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಎಐ ಆಧಾರಿತ ಜಲ ಆಡಳಿತ, ಸ್ಮಾರ್ಟ್ ಯುಟಿಲಿಟಿ, ಡಿಜಿಟಲ್ ಟ್ವಿನ್ಸ್, ಐಒಟಿ (IoT) ಮೇಲ್ವಿಚಾರಣೆ, ತ್ಯಾಜ್ಯನೀರು ಮರುಬಳಕೆ, ಮುನ್ಸೂಚಕ ವಿಶ್ಲೇಷಣೆ (Predictive analytics) ಹಾಗೂ ಭವಿಷ್ಯದ ಆರ್ಥಿಕ ಮಾದರಿಗಳ ಕುರಿತು ವಿಸ್ತೃತ ಚರ್ಚೆಗಳು ನಡೆಯಲಿವೆ.

ಗಮನ ಸೆಳೆಯಲಿರುವ ‘ಪಂಚಸೂತ್ರ’ ಮತ್ತು ಡಿಜಿಟಲ್ ಮಾದರಿ:

ಶೃಂಗಸಭೆಯಲ್ಲಿ ಬೆಂಗಳೂರು ಜಲಮಂಡಳಿಯ ಸ್ಕಾಡಾ (SCADA), ಜಿಐಎಸ್ (GIS) ಮ್ಯಾಪಿಂಗ್, ಐಒಟಿ ಟ್ಯಾಂಕರ್ ಟ್ರ್ಯಾಕಿಂಗ್ ಹಾಗೂ ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆಗಳನ್ನು ಪ್ರದರ್ಶಿಸಲಾಗುವುದು. ಜೊತೆಗೆ, ಜಲಮಂಡಳಿಯ ಕೃತಕ ಬುದ್ಧಿಮತ್ತೆ ಆಧಾರಿತ ‘ಪ್ರಜ್ಞಾ’, ದತ್ತಾಂಶ ಆಧಾರಿತ ‘ನೀತಿ’, ಸ್ಮಾರ್ಟ್ ಮೂಲಸೌಕರ್ಯದ ‘ತಂತ್ರಜ್ಞಾನ’, ಸುಸ್ಥಿರ ಹೂಡಿಕೆಯ ‘ಅರ್ಥ’ ಹಾಗೂ ಹವಾಮಾನ ಭದ್ರತೆಯ ‘ಸ್ಥಿರತೆ’ಯನ್ನು ಒಳಗೊಂಡಿರುವ ಮಹತ್ವಾಕಾಂಕ್ಷೆಯ ‘ಪಂಚಸೂತ್ರ’ಗಳ ಕಾರ್ಯತಂತ್ರವು ಈ ಶೃಂಗಸಭೆಯ ಪ್ರಮುಖ ಆಕರ್ಷಣೆಯಾಗಲಿದೆ.

“ಎಐ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಜಾಗತಿಕ ಜಲ ನಿರ್ವಹಣೆಯ ಭವಿಷ್ಯವನ್ನು ಮರುರೂಪಿಸುತ್ತಿವೆ. ತಂತ್ರಜ್ಞಾನ, ಸುಸ್ಥಿರತೆ ಮತ್ತು ಜನಸ್ನೇಹಿ ಸೇವೆಯ ಸಂಯೋಜನೆಯೊಂದಿಗೆ ಬೆಂಗಳೂರನ್ನು ದೇಶದ ಅತ್ಯಾಧುನಿಕ ಡಿಜಿಟಲ್ ಜಲ ಪರಿಸರ ವ್ಯವಸ್ಥೆಯನ್ನಾಗಿ ನಿರ್ಮಿಸಲು ನಾವು ಮುಂದಾಗಿದ್ದೇವೆ. ಈ ಶೃಂಗಸಭೆಯು ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಜಾಗತಿಕ ವೇದಿಕೆಯಾಗಲಿದೆ,” ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ವಿವರಿಸಿದರು.

ಬೆಂಗಳೂರು ಮಹಾನಗರದ ಭವಿಷ್ಯದ ಬೇಡಿಕೆಗಳನ್ನು ಪೂರೈಸಲು ಹೆಚ್ಚು ಪಾರದರ್ಶಕ, ದಕ್ಷ ಮತ್ತು ಸ್ಥಿತಿಸ್ಥಾಪಕ ಸಾರ್ವಜನಿಕ ಸೇವಾ ಮಾದರಿಯನ್ನು ರಚಿಸುವುದು ಈ ಡಿಜಿಟಲ್ ರೂಪಾಂತರದ ಮುಖ್ಯ ಉದ್ದೇಶವಾಗಿದೆ.

ಕೃತಕ ಬುದ್ಧಿಮತ್ತೆ ಮತ್ತು ಸ್ಮಾರ್ಟ್ ಜಲ ನಿರ್ವಹಣೆಯನ್ನೇ ಪ್ರಧಾನವಾಗಿಟ್ಟುಕೊಂಡು ನಡೆಯುತ್ತಿರುವ ದೇಶದ ಅತಿ ದೊಡ್ಡ ಶೃಂಗಸಭೆ ಇದಾಗಿದ್ದು, 400ಕ್ಕೂ ಹೆಚ್ಚು ಗಣ್ಯರು ಹಾಗೂ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

ಮರಣಕ್ಕೂ 24 ಗಂಟೆಗಳ ಮುನ್ನ ಕಾಣಿಸಿಕೊಳ್ಳುವ 3 ಪ್ರಮುಖ ಲಕ್ಷಣಗಳಿವು

Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

2 Mins Read

ಜೂನ್.1ರಂದು ಶಿವಮೊಗ್ಗದಲ್ಲಿ ಸಿಎಂ ಸಿದ್ಧರಾಮಯ್ಯ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳ ಶಂಕುಸ್ಥಾಪನೆ; ಸಚಿವ ಮಧು ಬಂಗಾರಪ್ಪ

2 Mins Read

ಉಜಿರೆಯ ರುಡ್‌ಸೆಟ್ ಸಂಸ್ಥೆಯಿಂದ ಉಚಿತ ‘ಕೋಳಿ ಸಾಕಾಣಿಕೆ’ ತರಬೇತಿಗೆ ಅರ್ಜಿ ಆಹ್ವಾನ

1 Min Read
Recent News

X ಖಾತೆ ಬ್ಲಾಕ್: ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ‘ಕಾಕ್ರೋಚ್ ಜನತಾ ಪಾರ್ಟಿ’ ಸಂಸ್ಥಾಪಕ!

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

​’ಟ್ರಂಪ್ ಭಾರತ ಮತ್ತು ಮೋದಿಯ ದೊಡ್ಡ ಫ್ಯಾನ್!’: ಅಮೆರಿಕದಲ್ಲಿನ ಭಾರತ ವಿರೋಧಿ ಹೇಳಿಕೆಗೆ ಮಾರ್ಕೊ ರೂಬಿಯೋ ಸ್ಪಷ್ಟನೆ

State News
KARNATAKA

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು : ಹವಾಮಾನ ಬದಲಾವಣೆ, ತ್ವರಿತ ನಗರೀಕರಣ ಹಾಗೂ ಅಂತರ್ಜಲ ಕುಸಿತದಂತಹ ಜಾಗತಿಕ ಸವಾಲುಗಳನ್ನು ತಂತ್ರಜ್ಞಾನದ ಮೂಲಕ ಸಮರ್ಥವಾಗಿ ಎದುರಿಸಲು…

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

ಜೂನ್.1ರಂದು ಶಿವಮೊಗ್ಗದಲ್ಲಿ ಸಿಎಂ ಸಿದ್ಧರಾಮಯ್ಯ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳ ಶಂಕುಸ್ಥಾಪನೆ; ಸಚಿವ ಮಧು ಬಂಗಾರಪ್ಪ

ಉಜಿರೆಯ ರುಡ್‌ಸೆಟ್ ಸಂಸ್ಥೆಯಿಂದ ಉಚಿತ ‘ಕೋಳಿ ಸಾಕಾಣಿಕೆ’ ತರಬೇತಿಗೆ ಅರ್ಜಿ ಆಹ್ವಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.