ಧಾರವಾಡ : ವಿದ್ಯಾಜ್ಯೋತಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾನೆ ಧಾರವಾಡ ಜಿಲ್ಲೆಯ ನವಲಗುಂದದ ಅಣ್ಣಿಗೇರಿ ರಸ್ತೆಯಲ್ಲಿರುವ ವಿದ್ಯಾ ಜ್ಯೋತಿ ವಸತಿ ಶಾಲೆಯಲ್ಲಿ ಶ್ರಾನವಾಡ ಗ್ರಾಮದ ಆಕಾಶ ನೀಲಣ್ಣನವರ (10) ಎನ್ನುವ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾನೆ.
ನಾಲ್ಕನೇ ತರಗತಿ ವಿದ್ಯಾರ್ಥಿ ಆಕಾಶ ನೀಲಣ್ಣನವರ ಸಾವನಪ್ಪಿದ್ದು 10 ದಿನಗಳ ಹಿಂದೆ ಆಕಾಶನನ್ನು ತಂದೆ ವಸಂತ ವಸತಿ ಶಾಲೆಗೆ ಸೇರಿಸಿದ್ದರು ಇಂದು ಮುಂಜಾನೆ ಆಕಾಶ ಕಂಪೌಂಡ್ ಮೇಲಿಂದ ಬಿದ್ದಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ. ಪೋಷಕರಿಗೆ ಶಾಲೆ ಸಿಬ್ಬಂದಿ ಮಾಹಿತಿ ನೀಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ದಾರೆ. ಆಕಾಶನನ್ನ ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ನಿನ್ನೆ ಕರೆ ಮಾಡಿದ್ದಾಗ ಶಿಕ್ಷಕರು ಹೊಡೆದರು ಎಂದು ಆಕಾಶ್ ಪೋಷಕರ ಬಳಿ ಹೇಳಿದ್ದ ಮಗನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ತಂದೆ ಮುಂದಾಗಿದ್ದಾರೆ. ಆದರೆ ನವಲಗುಂದ ಸರ್ಕಾರಿ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಕರೆತರುವಷ್ಟರಲ್ಲಿ ಆಕಾಶ ಸಾವನ್ನಪ್ಪಿದ್ದಾನೆ . ಹಾಗಾಗಿ ತಂದೆ ವಸಂತ್ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಕಾಂಪೌಂಡ್ ಮೇಲಿಂದ ಬಿದ್ದರೆ ಸಾಯುವುದಿಲ್ಲ ಎಂದು ವಸಂತ್ ಹೇಳಿದ್ದಾರೆ. ಆದರೂ ನನ್ನ ಮಗ ಕಾಂಪೌಂಡ್ ಮೇಲಿಂದ ಬಿದ್ದಿದ್ನ ಅಥವಾ ಶಾಲಾ ಕಟ್ಟಡದಿಂದ ಬಿದ್ದಿದ್ದಾನ? ಸಿಸಿಟಿವಿ ದೃಶ್ಯ ನೋಡಿದ ನಂತರ ನಿರ್ಧರಿಸುತ್ತೇವೆ ಅಂತ ಹೇಳಿದ್ದು ಘಟನಾ ಸ್ಥಳಕ್ಕೆ ನವಲಗುಂದ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








