ಬೆಂಗಳೂರು : ಆನ್ಲೈನ್ ನಲ್ಲಿ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಜಾಲ ಕೊನೆಗೂ ಪತ್ತೆಯಾಗಿದೆ. ಬೆಂಗಳೂರಿನ ಕೆಂಗೇರಿ ಠಾಣೆ ಪೊಲೀಸರು ಇದೀಗ 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹೂಡಿಕೆ ಮಾಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುತ್ತಿದ್ದರು.
ದೇಶ ವಿದೇಶದ ಸಾರ್ವಜನಿಕರಿಗೆ ಹಣ ಹೂಡಿಕೆ ಮಾಡಲು ಆಮಿಷ ಒಡ್ದುತ್ತಿದ್ದರು. ಹೆಚ್ಚು ಲಾಭ ನೀಡುವುದು ಜನರಿಂದ ಹಣ ಸಂಗ್ರಹಿಸಿ ವಂಚನೆ ಮಾಡುತ್ತಿದ್ದ ಆರೋಪಿಗಳು. ನಿನ್ನೆ ಏಳು ಕಡೆ ದಾಳಿ ನಡೆಸಿ 8 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 19 ಲ್ಯಾಪ್ಟಾಪ್ 40 ಮೊಬೈಲ್, 11 ಪೆನ್ ಡ್ರೈವ್, 42 ಸಿಮ್ ಕಾರ್ಡ್, 4 ಐಪ್ಯಾಡ್, 2 ಹಾರ್ಡ್ ಡಿಸ್ಕ್ 5 ಸಿಪಿಯು, 13 ಸೀಲ್ ಗಳು, 10 ಮೆಮೊರಿ ಕಾರ್ಡ್ ಹಾಗೂ ವಿದೇಶಿ ಕರೆನ್ಸಿ, ಕರೆನ್ಸಿ ಕೌಟಿಂಗ್ ಮಷೀನ್ ಸೇರಿ 6 ಕೋಟಿ ಬೆಲೆಬಾಳುವ ಸ್ಥಿರಾಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ