ಬೆಂಗಳೂರು : ಲೋಕಾಯುಕ್ತ ಪೊಲೀಸರಿಂದ ಪಿ.ಐ ಗೋವಿಂದರಾಜು ಟ್ರ್ಯಾಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೆಪಿ ಅಗ್ರಹಾರ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜನನ್ನು ಅಮಾನತು ಮಾಡಲಾಗಿದೆ. ಪಿ ಐ ಗೋವಿಂದರಾಜು ಅಮಾನತು ಮಾಡಿ ಇಲಖಾ ತನಿಖೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಲಾಗಿದೆ.
ಪ್ರಕರಣ ಸಂಬಂಧಪಟ್ಟ ಗೋವಿಂದರಾಜ ಮತ್ತು ದೂರುದಾರನ ಆಡಿಯೋ ವೈರಲ್ ಆಗಿತ್ತು. ಚೀಟಿ ವ್ಯವಹಾರ ಪ್ರಕರಣ ಸಂಬಂಧ ನಾಲ್ಕು ಲಕ್ಷ ರೂಪಾಯಿ ಈ ಲಂಚಕ್ಕೆ ಕೆ ಪಿ ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ಗೋವಿಂದರಾಜು ಡಿಮ್ಯಾಂಡ್ ಮಾಡಿದ್ದ. ಈ ಕುರಿತು ಆಡಿಯೋದಲ್ಲಿ ಹಿರಿಯ ಅಧಿಕಾರಿಗಳ ಹೆಸರುಗಳನ್ನು ಗೋವಿಂದರಾಜು ಹೇಳಿದ್ದ.
ಲಂಚ ಪಡೆಯಲು ಹಿರಿಯ ಪೊಲೀಸ್ ಅಧಿಕಾರಿಗಳ ಬೆಂಬಲ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಗೆ ಲಿಖಿತ ದೂರು ಸಲ್ಲಿಕೆಯಾಗಿದೆ. ಲಿಖಿತ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ಮಾಡಿ ವರದಿ ನೀಡಲು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ.








