ಬೆಂಗಳೂರು : ಬೆಂಗಳೂರು ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಬೇಸಿಗೆಯಲ್ಲಿ ಕಾವೇರಿ ನೀರು ಪೋಲು ಮಾಡಿದರೆ ಜಲಮಂಡಳಿಯಿಂದ 5000 ದಂಡ ವಿಧಿಸಲಾಗುತ್ತೆ ಎಂದು ಎಚ್ಚರಿಕೆ ನೀಡಿದೆ.
ಬೆಂಗಳೂರು ಜಲಮಂಡಳಿ ಬೇಸಿಗೆ ಕಾಲದಲ್ಲಿ ಆಗುವ ನೀರಿನ ಸಮಸ್ಯೆಯನ್ನ ಬಗೆಹರಿಸಲು ಈಗಾಗಲೇ ಅಧಿಕಾರಿಗಳ ಸಭೆ ಮಾಡಿದ್ದು, ನೀರಿನ ಸಮಸ್ಯೆ ಆಗುವ ಭಾಗದಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಅದರ ಜೊತೆಗೆ ನೀರಿನ ಅಭಾವ ಆಗೋದು ಡೌಟ್. ಒಂದು ವೇಳೆಯಾದ್ರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳೋದಕ್ಕೆ ಜಲಮಂಡಳಿ ಮುಂದಾಗಿದೆ.
ಕಾವೇರಿ ನೀರಿನಲ್ಲಿ ಬೈಕ್, ಕಾರು ತೊಳೆಯೋದು, ನೀರನ್ನ ಬೇಕಾಬಿಟ್ಟಿ ಪೋಲು ಮಾಡಿದ್ರೇ ಜಲಮಂಡಳಿ ದಂಡ ಹಾಕಲು ಕೂಡ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ವೀಕ್ಷಕರು ಮತ್ತು ಬ್ಲೂಫೋರ್ಸ್ ಕೂಡ ಕಾರ್ಯಚರಣೆ ಮಾಡಲಿದೆ. ಜನರು ಜೀವ ಜಲವನ್ನ ವ್ಯರ್ಥ ಮಾಡದೇ ಸರಿಯಾಗಿ ಬಳಕೆ ಮಾಡಿದ್ರೇ ಜಲಕ್ಷಾಮವಾಗೋದು ಕಡಿಮೆ ಜೊತೆಗೆ ದಂಡ ಕಟ್ಟುವ ಪ್ರಮೇಯವೂ ಬರಲ್ಲ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.








