ಬೆಂಗಳೂರು : ಬಿಡದಿ ಟೌನ್‌ಶಿಪ್ ಕುರಿತು ರೈತರನ್ನು ಉದ್ದೇಶಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು ದೇವೇಗೌಡರ ಕುಟುಂಬ ಹಾಸನದಲ್ಲಿ ಜಮೀನು ತೆಗೆದುಕೊಳ್ಳಬಹುದಿತ್ತಲ್ಲ? ಅವರು ಇಲ್ಲೇ ನೂರಾರು ಬೇಕೆರೆ ಜಮೀನು ತೆಗೆದುಕೊಂಡಿದ್ದಾರೆ. ಕೇತಗಾನಹಳ್ಳಿಯಲ್ಲಿ ಇರುವ ಜಮೀನು ಬಹು ಸ್ವಾಧೀನ ಮಾಡಲು ಸೇರಿಸಿಲ್ಲ. ರೈತರಿಗೆ 8000 ಅಡಿ ಭೂಮಿ ಕೊಡಲು ನಿರ್ಧರಿಸಿದೆ ಅಂತ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು.
ಬಿಡದಿ ಟೌನ್ ಶಿಪ್ ಕುರಿತು ರೈತರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ್ದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿದ ಬಳಿಕ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಜಮೀನುಗಳ ಮೌಲ್ಯ ಹೆಚ್ಚಾಗಿದೆ. ಬೆಂಗಳೂರು ಎಂಬುವುದು ಒಂದು ಬ್ರಾಂಡ್ ನಾವೆಲ್ಲ ಈಗ ಬೆಂಗಳೂರು ಜಿಲ್ಲೆಯವರು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಈ ವಿಚಾರದಲ್ಲಿ ಕೋರ್ಟಿಗೆ ಹೋಗಲಿ ಏನಾದರೂ ಮಾಡಿಕೊಳ್ಳಲಿ ಮೂರು ಮೂರು ಹಳ್ಳಿಗಳನ್ನು ಸೇರಿಸಿ ಡಿನೋಟಿಫೈ ಮಾಡುತ್ತೇವೆ. ಒಂದೊಂದೇ ಕ್ಲಿಯರ್ ಮಾಡುತ್ತೇವೆ. ಬಿಡದಿಗೆ ಗ್ರೇಟರ್ ಬೆಂಗಳೂರು ಎಂದೆ ಹೆಸರಿಡುತ್ತೇನೆ. ಒಂದೇ ಜಾಗದಲ್ಲಿ ನಿಮಗೆ ಸೈಟ್ ಕೊಡುತ್ತೇನೆ. ನಿಮಗೆ ಕೊಡುವ ದುಡ್ಡು ನಿಮಗೆ ಕೊಡುವ ಸೌಲಭ್ಯ ಸೇರಿದರೆ ಸರಕಾರಕ್ಕೆ ಒಂದು ಎಕರೆಗೆ 5 ಕೋಟಿ ರೂಪಾಯಿ ಆಗುತ್ತದೆ.ಈ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಪಂಥಾಹ್ವಾನ ನೀಡಿದ್ದಾರೆ. ಕುಮಾರಸ್ವಾಮಿ ಪಂಥಾಹ್ವಾನಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.








