ಬೆಂಗಳೂರು: ಸೆ.7ರಂದು ಭಾರತ್ ಜೋಡೋ ಯಾತ್ರೆ ಆರಂಭವಾಗಲಿದೆ. ಕನ್ಯಾಕುಮಾರಿಯಿಂದ ಮಧ್ಯಾಹ್ನ ಆರಂಭವಾಗಲಿದ್ದು, ತಮಿಳಿನಾಡಿನಲ್ಲಿ ನಾಲ್ಲು ದಿನ ಹತ್ತೊಂಬತ್ತು ದಿನಗಳ ಕಾಲ ಕೇರಳದಲ್ಲಿ ಯಾತ್ರೆ ಸಾಗಲಿದೆ. 125 ಜನ ಯಾತ್ರಾರ್ಥಿಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೆಜ್ಜೆ ಹಾಕಲಿದ್ದಾರೆ. 12 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳು ಯಾತ್ರೆ ಸಾಗಲಿದೆ. ಕರ್ನಾಟಕದಲ್ಲಿ ಒಟ್ಟು 21 ದಿನ ಯಾತ್ರೆ ಸಾಗಲಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಭಾರತ್ ಜೋಡೋ ಯಾತ್ರೆ ಲೋಗೋ ಅನಾವರಣಗೊಳಿಸಿದ ಬಳಿಕ ಮಾತನಾಡಿದಂತ ಅವರು, ಕರ್ನಾಟಕದಲ್ಲಿ 21 ದಿನ ಭಾರತ್ ಜೋಡೋ ಯಾತ್ರೆ ಸಾಗಲಿದೆ. ಪ್ರತಿದಿನ 25 ಕಿಮೀ ಹೆಜ್ಜೆ ಹಾಕುತ್ತೇನೆ ಅಂತಾ ರಾಹುಲ್ ಗಾಂಧಿ ಹೇಳಿದ್ದಾರೆ. ಅದರಂತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೆಜ್ಜೆ ಹಾಕಲಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಲ್ಲ, ಭಾರತವನ್ನ ಒಗ್ಗೂಡಿಸಲು ಯಾತ್ರೆ ನಡೆಯಲಿದೆ. ಕಾಂಗ್ರೆಸ್ ಮುಂದಾಳತ್ವದಲ್ಲಿ ನಡೆಯಲಿದೆ. ಯಾರು ಬೇಕಾದರೂ ಯಾತ್ರೆಯಲ್ಲಿ ಹೆಜ್ಜೆ ಹಾಕಬಹುದು ಎಂದು ಹೇಳಿದರು.
BIG NEWS: ನಾಳೆ ಸುಪ್ರೀಂ ಕೋರ್ಟ್ನಲ್ಲಿ ಹಿಜಾಬ್ ಮೇಲ್ಮನವಿ ವಿಚಾರಣೆ | Hijab Row
ಭಾರತ್ ಜೋಡೋ ಯಾತ್ರೆ ಇದು ದೇಶದ ಐಕ್ಯತೆಯ ಯಾತ್ರೆಯಾಗಿದೆ. ದೇಶದಲ್ಲಿ ಶಾಂತಿಯ ತೋಟ ನಿರ್ಮಾಣವಾಗಬೇಕು. ಪ್ರತಿ ಕುಟುಂಬವೂ ಬೆಲೆ ಏರಿಕೆಯಿಂದ ತತ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನರಿಗಾಗಿ ನಮ್ಮ ಯಾತ್ರೆ ಸಾಗಲಿದೆ. ನಮ್ಮ ಯಾತ್ರೆ ದೇಶಕ್ಕೆ ಟ್ರೆಂಡ್ ಸೆಟ್ ಆಗಲಿದೆ. ದೇಶದಲ್ಲೇ ದೊಡ್ಡ ಮಾದರಿಯಾಗಲಿದೆ ಎಂದರು.
ಭಾರತ್ ಜೋಡೋ ವೇಳೆ ಬಳ್ಳಾರಿಯಲ್ಲಿ ಬಹಿರಂಗ ಸಮಾವೇಶ ಮಾಡುತ್ತೇವೆ. ಮೈಸೂರಿನಲ್ಲಿ ಸಮಾವೇಶ ಮಾಡಬೇಕೆಂಬ ಉದ್ದೇಶ ಇದೆ. ಆದರೆ ಅದಕ್ಕೆ ತಾಂತ್ರಿಕ ಸಮಸ್ಯೆ ಇದೆ. ಅಕ್ಟೋಬರ್ 4, 5ರಂದು ಮೈಸೂರು ದಸರಾ ಇದೆ. ಸೆಪ್ಟೆಂಬರ್ 1ರಂದು ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್ ಸಭೆ ಮಾಡುತ್ತಾರೆ. ಏನು ಮಾಡಬೇಕು ಅನ್ನೋದನ್ನ ಚರ್ಚಿಸುತ್ತೇವೆ ಎಂದು ತಿಳಿಸಿದರು.