Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

ALERT : ಹವಾಮಾನ ವೈಪರೀತ್ಯದಿಂದ ಯುವ ಜನತೆಯ ಮಾನಸಿಕ ಆರೋಗ್ಯದ ಮೇಲಾಗುತ್ತಿದೆ ಆತಂಕಕಾರಿ ಪರಿಣಾಮ.!

ಇತಿಹಾಸ ಪುಟಕ್ಕೆ ಮರಳಿದ ‘ಹಳೇ ಲಾಹೋರ್‌’ ವೈಭವ!: 79 ವರ್ಷಗಳ ಬಳಿಕ ಹಿಂದೂ, ಸಿಖ್ ಹಾಗೂ ಬ್ರಿಟಿಷ್ ಕಾಲದ ಹಳೆಯ ಹೆಸರುಗಳನ್ನು ಮರುನಾಮಕರಣ ಮಾಡಿದ ಪಾಕಿಸ್ತಾನ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `Whats App’ ಬಳಕೆದಾರರೇ ಎಚ್ಚರ : ನಾಳೆಯಿಂದ ‘ಸಿಮ್ ಬೈಂಡಿಂಗ್’ ನಿಯಮ ಜಾರಿ, ಸಿಮ್ ತೆಗೆದರೆ ಆ್ಯಪ್ ಬಂದ್ !
INDIA

`Whats App’ ಬಳಕೆದಾರರೇ ಎಚ್ಚರ : ನಾಳೆಯಿಂದ ‘ಸಿಮ್ ಬೈಂಡಿಂಗ್’ ನಿಯಮ ಜಾರಿ, ಸಿಮ್ ತೆಗೆದರೆ ಆ್ಯಪ್ ಬಂದ್ !

By kannadanewsnow57

ಬೆಂಗಳೂರು: ನೀವು ವಾಟ್ಸಾಪ್ (WhatsApp) ಅಥವಾ ಟೆಲಿಗ್ರಾಮ್ (Telegram) ಬಳಸುತ್ತಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ. ನಾಳೆಯಿಂದ ಅಂದರೆ ಮಾರ್ಚ್ 1, 2026 ರಿಂದ ಜಾರಿಗೆ ಬರುವಂತೆ ಕೇಂದ್ರ ಟೆಲಿಕಾಂ ಇಲಾಖೆಯು ಸಂವಹನ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರುತ್ತಿದೆ.ಇನ್ನು ಮುಂದೆ ನಿಮ್ಮ ಮೊಬೈಲ್‌ನಲ್ಲಿ ಸಿಮ್ ಕಾರ್ಡ್ (SIM Card) ಇಲ್ಲದಿದ್ದರೆ ವಾಟ್ಸಾಪ್ ಕೆಲಸ ಮಾಡುವುದಿಲ್ಲ!

ಏನಿದು ‘ಸಿಮ್ ಕಾರ್ಡ್ ಬೈಂಡಿಂಗ್’ ನಿಯಮ?

ಇಲ್ಲಿಯವರೆಗೆ, ಒಂದು ಬಾರಿ ವಾಟ್ಸಾಪ್ ಅಥವಾ ಟೆಲಿಗ್ರಾಮ್ ಅನ್ನು ವೆರಿಫೈ (Verify) ಮಾಡಿದ ನಂತರ, ಫೋನ್‌ನಿಂದ ಸಿಮ್ ಕಾರ್ಡ್ ತೆಗೆದರೂ ವೈಫೈ (WiFi) ಮೂಲಕ ಆ್ಯಪ್ ಬಳಸಲು ಸಾಧ್ಯವಿತ್ತು. ಆದರೆ, ಹೊಸ ‘ಸಿಮ್ ಕಾರ್ಡ್ ಬೈಂಡಿಂಗ್’ ನಿಯಮದ ಪ್ರಕಾರ:

ಸಿಮ್ ಇಲ್ಲದಿದ್ದರೆ ಆ್ಯಪ್ ಬಂದ್: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಿವ್ ಆಗಿರುವ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್ ಸ್ವಯಂಚಾಲಿತವಾಗಿ ಲಾಗ್ ಔಟ್ (Log out) ಆಗಲಿದೆ.

ನಿರಂತರ ಪರಿಶೀಲನೆ: ಆ್ಯಪ್ ಕೆಲಸ ಮಾಡಲು ಫೋನ್‌ನಲ್ಲಿ ಸಿಮ್ ಇರುವುದು ಇನ್ಮುಂದೆ ಕಡ್ಡಾಯ. ಸಿಮ್ ತೆಗೆದ ತಕ್ಷಣ ಸಂವಹನ ಸೇವೆಗಳು ಸ್ಥಗಿತಗೊಳ್ಳಲಿವೆ.

ವಾಟ್ಸಾಪ್ ವೆಬ್ ಮೇಲೂ ಪರಿಣಾಮ: ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಸುವ ವಾಟ್ಸಾಪ್ ವೆಬ್ ಸಹ ಇನ್ನು ಮುಂದೆ ಪ್ರತಿ 6 ಗಂಟೆಗೊಮ್ಮೆ ಲಾಗ್ ಔಟ್ ಆಗಲಿದೆ.

ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?

ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಮತ್ತು ನಕಲಿ ಖಾತೆಗಳ ಮೂಲಕ ನಡೆಯುವ ವಂಚನೆಗಳನ್ನು ತಡೆಯಲು ಕೇಂದ್ರ ಟೆಲಿಕಾಂ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ವಂಚನೆಗೆ ಬ್ರೇಕ್: ಸೈಬರ್ ಕ್ರಿಮಿನಲ್‌ಗಳು ಸಿಮ್ ಕಾರ್ಡ್ ಇಲ್ಲದ ಫೋನ್‌ಗಳಲ್ಲಿ ಇಂತಹ ಆ್ಯಪ್‌ಗಳನ್ನು ಬಳಸಿ ಅಕ್ರಮ ಎಸಗುತ್ತಿದ್ದರು.

ಗುರುತು ಪತ್ತೆ: ಸಿಮ್ ಬೈಂಡಿಂಗ್ ಮಾಡುವುದರಿಂದ ಪ್ರತಿಯೊಂದು ಖಾತೆಯು ಅಧಿಕೃತ ಮೊಬೈಲ್ ಸಂಖ್ಯೆಯೊಂದಿಗೆ ಸದಾ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳಬಹುದು.

ಗಮನಿಸಿ: ಕಳೆದ ವರ್ಷ ನವೆಂಬರ್‌ನಲ್ಲೇ ಈ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಈ ಬದಲಾವಣೆ ತರಲು ಫೆಬ್ರವರಿ 28 ರವರೆಗೆ ಗಡುವು ನೀಡಲಾಗಿತ್ತು. ಆ ಗಡುವು ಇಂದು ಮುಗಿಯುತ್ತಿದ್ದು, ನಾಳೆಯಿಂದ ಹೊಸ ಬದಲಾವಣೆಗಳು ಅನ್ವಯವಾಗಲಿವೆ.

ಸಲಹೆ: ನಿಮ್ಮ ವಾಟ್ಸಾಪ್ ಸದಾ ಚಾಲ್ತಿಯಲ್ಲಿರಬೇಕೆಂದರೆ, ನಿಮ್ಮ ಪ್ರೈಮರಿ ಸಿಮ್ ಕಾರ್ಡ್ ಫೋನ್‌ನಲ್ಲೇ ಇರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಡೇಟಾ ಬ್ಯಾಕಪ್ ತೆಗೆದುಕೊಳ್ಳುವುದನ್ನು ಮರೆಯಬೇಡಿ.

app will be blocked if SIM is removed! Beware WhatsApp users: 'SIM binding' rule to be implemented from tomorrow
Share. Facebook Twitter LinkedIn WhatsApp Email

Related Posts

ALERT : ಹವಾಮಾನ ವೈಪರೀತ್ಯದಿಂದ ಯುವ ಜನತೆಯ ಮಾನಸಿಕ ಆರೋಗ್ಯದ ಮೇಲಾಗುತ್ತಿದೆ ಆತಂಕಕಾರಿ ಪರಿಣಾಮ.!

2 Mins Read

ಇತಿಹಾಸ ಪುಟಕ್ಕೆ ಮರಳಿದ ‘ಹಳೇ ಲಾಹೋರ್‌’ ವೈಭವ!: 79 ವರ್ಷಗಳ ಬಳಿಕ ಹಿಂದೂ, ಸಿಖ್ ಹಾಗೂ ಬ್ರಿಟಿಷ್ ಕಾಲದ ಹಳೆಯ ಹೆಸರುಗಳನ್ನು ಮರುನಾಮಕರಣ ಮಾಡಿದ ಪಾಕಿಸ್ತಾನ!

1 Min Read

​‘ಮಗಳ ಜೀವಕ್ಕಿಂತ ಸಮಾಜವೇ ಹೆಚ್ಚಾಯ್ತಾ?’: ಯುವತಿಯ ಸಾವಿನ ಬೆನ್ನಲ್ಲೇ ವೈರಲ್ ಆಯ್ತು ಕಣ್ಣೀರು ತರಿಸುವ ಕೊನೆಯ ಚಾಟ್ಸ್!

2 Mins Read
Recent News

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

ALERT : ಹವಾಮಾನ ವೈಪರೀತ್ಯದಿಂದ ಯುವ ಜನತೆಯ ಮಾನಸಿಕ ಆರೋಗ್ಯದ ಮೇಲಾಗುತ್ತಿದೆ ಆತಂಕಕಾರಿ ಪರಿಣಾಮ.!

ಇತಿಹಾಸ ಪುಟಕ್ಕೆ ಮರಳಿದ ‘ಹಳೇ ಲಾಹೋರ್‌’ ವೈಭವ!: 79 ವರ್ಷಗಳ ಬಳಿಕ ಹಿಂದೂ, ಸಿಖ್ ಹಾಗೂ ಬ್ರಿಟಿಷ್ ಕಾಲದ ಹಳೆಯ ಹೆಸರುಗಳನ್ನು ಮರುನಾಮಕರಣ ಮಾಡಿದ ಪಾಕಿಸ್ತಾನ!

​‘ಮಗಳ ಜೀವಕ್ಕಿಂತ ಸಮಾಜವೇ ಹೆಚ್ಚಾಯ್ತಾ?’: ಯುವತಿಯ ಸಾವಿನ ಬೆನ್ನಲ್ಲೇ ವೈರಲ್ ಆಯ್ತು ಕಣ್ಣೀರು ತರಿಸುವ ಕೊನೆಯ ಚಾಟ್ಸ್!

State News
KARNATAKA

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

By kannadanewsnow57 KARNATAKA 2 Mins Read

ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಅತ್ಯಂತ ವಿಶೇಷವಾದ ಆಧ್ಯಾತ್ಮಿಕ ಮಹತ್ವವಿದೆ. 18 ಮಹಾಪುರಾಣಗಳಲ್ಲಿ ಒಂದಾದ ಇದು ಮನುಷ್ಯನ ಜೀವನ, ಮರಣ…

ALERT : ಮಾವು ಪ್ರಿಯರೇ ಗಮನಿಸಿ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಹೀಗೆ ಗುರುತಿಸಿ.!

Bank Cheque Clear : ಬ್ಯಾಂಕಿನಲ್ಲಿ ‘ಚೆಕ್’ ಕ್ಲಿಯರ್ ಆಗಲು ಎಷ್ಟು ದಿನಗಳು ಬೇಕಾಗುತ್ತವೆ ? RBI ನಿಯಮಗಳೇನು ತಿಳಿಯಿರಿ

BIG NEWS : ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ‘ಶೀ ಬಾಕ್ಸ್’ ಕಡ್ಡಾಯ | She Box

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.